ಭವಿಷ್ಯ

ಹೆಣ್ಮಕ್ಕಳಿಗೆ ಅವರ ರಾಶಿ ಪ್ರಕಾರ ಈ ತರ ಹುಡುಗರು ಇಷ್ಟ ಆಗ್ತಾರಂತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಹಿಳೆಯರಿಗೆ ಅವರ ರಾಶಿಯ ಅನುಗುಣವಾಗಿ  ಎಂತಹ ಹುಡುಗ ಇಷ್ಟವಾಗುತ್ತಾನೆ ಎಂದು ಇಲ್ಲಿ ಓದಿ ತಿಳಿದುಕೊಳ್ಳಿ….

 

 

ಪ್ರತಿಯೊಬ್ಬ ಮನುಷ್ಯನ ಸ್ವಭಾವ ಅವರ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿಮಗೆ ಒಬ್ಬರ ಗುಣಸ್ವಭಾವ ತಿಳಿಯಬೇಕಾದರೆ ಅವರ ರಾಶಿಯ ಬಗ್ಗೆ ತಿಳಿದುಕೊಂಡರೆ ಸಾಕು. ಇಲ್ಲಿ ನಾವು ಮಹಿಳೆಯರ ರಾಶಿಗೆ ಅನುಗುಣವಾಗಿ ಅವರ ಸ್ವಭಾವ ಹೇಗಿರುತ್ತದೆ ಹಾಗೂ ಅವರಿಗೆ ಎಂತಹ ಹುಡುಗ ಇಷ್ಟವಾಗುತ್ತಾನೆ ಅನ್ನೋದನ್ನ ತಿಳಿಯೋಣ.

 

ಮೇಷ (Mesha)

 

ನೀವು ಬಹಳ ಆರೈಕೆ ಮಾಡುವ ವ್ಯಕ್ತಿಯಾಗಿರುತ್ತೀರಿ. ನೀವು ನಿಮ್ಮ ಸಂಗಾತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೀರಿ. ಅವರ ಅಗತ್ಯತೆಗಳನ್ನು ಹೇಳದೆಯೇ ತಿಳಿದುಕೊಳ್ಳುತ್ತೀರಿ .ಆದ್ದರಿಂದ ಇಂತಹ ಮಹಿಳೆಯರಿಗೆ ಆರೈಕೆ ಮಾಡುವ ಪುರುಷರೇ ಹೆಚ್ಚು ಇಷ್ಟವಾಗುತ್ತಾರೆ. ಅಲ್ಲದೆ ಇವರನ್ನು ಹೆಚ್ಚು ಇಷ್ಟಪಡುವ ಪುರುಷರು ಅವರಿಗೆ ಇಷ್ಟವಾಗಿರುತ್ತಾರೆ.

 

ವೃಷಭ (Vrushabha)

ಈ ರಾಶಿಯವರಿಗೆ ಬಲವಾದ ವ್ಯಕ್ತಿತ್ವವನ್ನು  ಹೊಂದಿರುವ  ಪುರುಷರು ತುಂಬಾ ಇಷ್ಟವಾಗುತ್ತಾರೆ .ಯಾವ ಪುರುಷರು ತಮ್ಮ ಕೆಲಸದ ಬಗ್ಗೆ ಹೆಚ್ಚು ಉತ್ಸುಕತೆಯಾಗಿದ್ದು ಜೀವನದ ಉದ್ದೇಶಗಳನ್ನು ತಿಳಿದುಕೊಂಡಿರುತ್ತಾರೋ ಅಂಥವರು ವೃಷಭ ರಾಶಿಯ ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಾರೆ .

 

ಮಿಥುನ (Mithuna)

ಈ ರಾಶಿಯವರಿಗೆ ಥ್ರಿಲ  ಇಷ್ಟವಾಗುತ್ತದೆ. ಆದುದರಿಂದ ಅವರು ಸಾಹಸಮಯ ಕೆಲಸಗಳನ್ನು   ಮಾಡುವವರನ್ನು ಇಷ್ಟಪಡುವ ಜನರತ್ತ ಬೇಗನೆ ಆಕರ್ಷಿತರಾಗುತ್ತಾರೆ . ಅಲ್ಲದೆ ಅಪಾಯ ತೆಗೆದುಕೊಳ್ಳಲು ಏನು ಬೇಕಾದರೂ ಮಾಡುವ ಪುರುಷರು ನಿಮಗೆ ಮೊದಲ ನೋಟದಲ್ಲಿಯೇ ಇಷ್ಟವಾಗಿಬಿಡುತ್ತಾರೆ. ಅವರನ್ನು ಪಡೆದುಕೊಳ್ಳಲು ನೀವು ಏನು ಬೇಕಾದರೂ ಮಾಡುವಿರಿ.

 

ಕರ್ಕ (Karka)

ನೀವು ಭಾವನೆಗಳೊಂದಿಗೆ ಆಳವಾಗಿ  ಜೀವಿಸಿರುವ ಹುಡುಗಿ. ಆದುದರಿಂದ ನಿಮಗೆ ಆಕರ್ಷಕ ಹಾಗೂ ಭಾವನಾತ್ಮಕ ಆಸರೆ ನೀಡುವ ಹುಡುಗ ಇಷ್ಟವಾಗುತ್ತಾನೆ. ನೀವು ಬಿಂದಾಸ್ ಆಗಿ ಮತ್ತು  ಸಂತೋಷವಾಗಿ ಜೀವನವನ್ನು   ಕಾಲ ಕಳೆಯಲು ಇಷ್ಟ ಪಡುತ್ತೀರ. ಆದರೆ ಇದರಿಂದ ನಿಮಗೆ ಕಷ್ಟ ಉಂಟಾಗುತ್ತದೆ.

 

ಸಿಂಹ (Simha)

ನಿಮಗೆ ಬುದ್ಧಿವಂತ ಹಾಗೂ ರಚನಾತ್ಮಕ ವ್ಯಕ್ತಿ ಇಷ್ಟವಾಗುತ್ತಾನೆ. ತಮ್ಮ ಉತ್ಸಾಹ ಸಮಾನತೆ ಮತ್ತು ಪ್ರತಿ ಬದ್ಧತೆಗಳಿಂದ ನಿಮ್ಮನ್ನು ಪ್ರೇರಣೆ ಮಾಡುವ ವ್ಯಕ್ತಿ ನಿಮಗೆ ಇಷ್ಟವಾಗುತ್ತಾನೆ. ನೀವು ಹುಟ್ಟು ನಾಯಕ ಪ್ರವೃತ್ತಿಯನ್ನು ಹೊಂದಿರುತ್ತೀರಿ.

 

ಕನ್ಯಾರಾಶಿ (Kanya)

ಕನ್ಯಾ ರಾಶಿಯವರಿಗೆ ಭಾವನಾತ್ಮಕ ಮತ್ತು ಕಲಾತ್ಮಕ ಅಭಿವ್ಯಕ್ತಿ ಇರುವ ಪುರುಷರು ಇಷ್ಟವಾಗುತ್ತಾರೆ .ಅವರು ನಿಮ್ಮ ಪ್ರೇರಣೆ ನೀಡುವ ಗುಣವನ್ನು ಬಳಕೆ ಮಾಡಿಕೊಳ್ಳುತ್ತಾರೆ. ನಿಮ್ಮ ಸಂಬಂಧವೂ ಮುರಿದು ಹೋಗುವ ಸಂದರ್ಭದಲ್ಲಿ ಯಾರಾದರೂ ಒಬ್ಬ ವ್ಯಕ್ತಿ ನಿಮ್ಮ ಜೀವನದಲ್ಲಿ ಬರುತ್ತಾರೆ. ಅವರು ನಿಮ್ಮಿಂದ ಎಲ್ಲವನ್ನೂ ನಿರೀಕ್ಷೆ ಮಾಡುತ್ತಾರೆ. ಆದರೆ ನಿಮಗೆ ಏನೂ ನೀಡದೆ ಹೋಗುತ್ತಾರೆ

 

ತುಲಾ (Tula)

ಶಕ್ತಿ ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡುವ ವ್ಯಕ್ತಿಗಳು  ಈ ರಾಶಿಯ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇಂತಹ ವ್ಯಕ್ತಿಗಳು ನಿಮ್ಮ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತಾರೆ. ಅಲ್ಲದೆ ಅವರನ್ನು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಲು  ಇಷ್ಟಪಡುತ್ತೀರಿ.

 

ವೃಶ್ಚಿಕ (Vrushchika)

ನಿಮಗೆ ಸ್ನೇಹಶೀಲ ಮತ್ತು ಧೈರ್ಯಶಾಲಿ ಸಂಗಾತಿ ಇಷ್ಟವಾಗುತ್ತಾರೆ . ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಹಿಂದೇಟು ಹಾಕದೇ ದೃಢತೆಯಿಂದ ನಿಮ್ಮ ಜೊತೆ ನಿಲ್ಲುವ ವ್ಯಕ್ತಿ.  ಈ  ರಾಶಿಯವರಿಗೆ ಇಷ್ಟ ನೀವು ಯಾವಾಗಲೂ ಕೊಡೋದನ್ನು ಇಷ್ಟಪಡುತ್ತೀರಿ. ಹಾಗೆಯೇ ಅದೇ ರೀತಿಯಲ್ಲಿ ನಿಮ್ಮ ಸಂಗಾತಿಯಿಂದ ಏನನ್ನಾದರೂ ಪಡೆಯಲು ಸಹ ಇಷ್ಟಪಡುತ್ತೀರಿ.

 

ಧನು ರಾಶಿ (Dhanu)

ನಿಮಗೆ ಬುದ್ಧಿವಂತ ಹಾಗೂ ಎಲ್ಲವನ್ನೂ ಬಿಚ್ಚು ಮನಸ್ಸಿನಿಂದ ಮಾತನಾಡುವಂತಹ ವ್ಯಕ್ತಿ ಇಷ್ಟವಾಗುತ್ತಾರೆ. ಅಂದರೆ ತಮ್ಮ ಎಲ್ಲ ಸಾಹಸ ಕಾರ್ಯಗಳಲ್ಲಿ  ಜೊತೆಯಾಗಿ ಕೊನೆಯವರೆಗೆ ಇರುವ ವ್ಯಕ್ತಿ ನಿಮ್ಮ ಸಂಗಾತಿಗೆ ನಿಮ್ಮ ಹೃದಯ ಸೆಳೆಯುವಂತಹ ಎಲ್ಲಾ ಗುಣಗಳು ಇರಬೇಕು ಎಂದು ನೀವು ಬಯಸುತ್ತೀರಿ.

 

ಮಕರ (Makara)

ನೀವು ಯಾವಾಗಲೂ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಆದುದರಿಂದ ಬೆಂಬಲ ನೀಡುವ ಪುರುಷರು ನಿಮಗೆ ಇಷ್ಟವಾಗುತ್ತಾರೆ. ಆದರೆ ತಮ್ಮ ನಿರ್ಧಾರದ ಪ್ರಕಾರ ನಿಮ್ಮನ್ನು ಇಷ್ಟಪಡುವ ವ್ಯಕ್ತಿಯ ಬಗ್ಗೆ ನಿಮಗೆ ಯಾವುದೇ ರೀತಿಯ ಕುತೂಹಲ ಇರುವುದಿಲ್ಲ.

 

ಕುಂಭರಾಶಿ (Kumbha)

ನೀವು ಸದಾ ಕಾಲ ಕನಸಿನಲ್ಲಿ ತೇಲಾಡುವ ಹಾಗೂ ಪದೇ ಪದೇ ನಿಮ್ಮ ಮನಸ್ಸನ್ನು ಬದಲಾಯಿಸುವ ವ್ಯಕ್ತಿಯಾಗಿರುತ್ತೀರಿ. ಆದುದರಿಂದ ನಿಮಗೆ ಬಲವಾಗಿ ಹಾಗೂ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವ್ಯಕ್ತಿ ಇಷ್ಟವಾಗುತ್ತಾರೆ.

 

ಮೀನರಾಶಿ (Meena)

ನಿಮ್ಮ ಕನಸಿನ ಲೋಕದಿಂದ ನಿಮ್ಮನ್ನು ಹೊರಗೆ ತರುವಂತಹ  ಬುದ್ಧಿವಂತ, ಸ್ಥಿರವಾದ, ಸಹಾಯಹಸ್ತ  ಪ್ರಕೃತಿಯ ಸ್ವಭಾವವುಳ್ಳ ವ್ಯಕ್ತಿಯತ್ತ ಆಕರ್ಷಿತರಾಗುತ್ತೀರ. ಇಂತಹ ವ್ಯಕ್ತಿಗಳು ನಿಮಗೆ ಪ್ರಪಂಚದ ಅತ್ಯಂತ ರೋಮಾಂಚನ ಭರಿತ ವ್ಯಕ್ತಿ ಎಂದು ಅನ್ನಿಸುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top