ಜ್ಯೋತಿಷ್ಯ

ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯರ  ಕೈ ಬೆರಳಿನಲ್ಲಿರುವ ಶಂಖ, ಚಕ್ರ ಮತ್ತು  ಕಳಶಗಳು ಭವಿಷ್ಯದ ಬಗ್ಗೆ ಏನು ಸೂಚಿಸುತ್ತವೆ ಗೊತ್ತೇ ಬನ್ನಿ ತಿಳಿಯೋಣ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯರ  ಕೈ ಬೆರಳಿನಲ್ಲಿರುವ ಶಂಖ, ಚಕ್ರ ಮತ್ತು  ಕಳಶಗಳು ಏನನ್ನು ಸೂಚಿಸುತ್ತವೆ ಎಂದು ನಿಮಗೆ ಗೊತ್ತಾ ? ಬನ್ನಿ  ತಿಳಿಯೋಣ

 

ಭಾರತೀಯ ಹಸ್ತಮುದ್ರಿಕಾ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಕೈ ಬೆರಳುಗಳಲ್ಲಿ ಚಕ್ರ, ಶಂಖ, ಕಲಶ ಮತ್ತು  ಶೀಪದ ಆಕಾರದ ಗೆರೆಗಳು ಕಂಡುಬರುತ್ತವೆ. ಪುರುಷರಿಗೆ ಬಲ ಹಸ್ತವನ್ನು ಮತ್ತು ಸ್ತ್ರೀಯರಿಗೆ ಎಡ ಹಸ್ತವನ್ನು ನೋಡಬೇಕು. ಚಕ್ರ ,ಶಂಖ, ಕಲಶ ಮತ್ತು ಶೀಪವನ್ನು ಎರಡೂ ಕೈ ಬೆರಳುಗಳಲ್ಲಿ ನೋಡಬೇಕು .

ಚಕ್ರದ ಆಕೃತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸವ್ಯ ಚಕ್ರ ಹಾಗೂ ಅಪಸವ್ಯ ಚಕ್ರ. ಈ ಸವ್ಯ ಚಕ್ರವು ವ್ಯಕ್ತಿಗೆ ಉತ್ತಮ ಯೋಗ ಭಾಗ್ಯಗಳನ್ನು ಉನ್ನತ ಸಾಧನೆಯನ್ನು ಸೂಚಿಸುತ್ತದೆ .ಅಪಸವ್ಯ ಚಕ್ರವಿದ್ದರೆ ವ್ಯಕ್ತಿಯ ವಿವಾಹದ ನಂತರ ತೊಂದರೆಗಳು ಜೀವನದಲ್ಲಿ ಉಂಟಾಗುತ್ತವೆ ಎಂದು ಸೂಚಿಸುತ್ತದೆ.

 

 

ಕೈ ಬೆರಳುಗಳಲ್ಲಿ ಎಷ್ಟು ಚಕ್ರಗಳಿವೆ,ಎಷ್ಟು ಶಂಖಗಳಿವೆ   ಎಂಬ ಮಹತ್ವದ ವಿಚಾರದ ಮೇಲೆ ಅವರ ಭವಿಷ್ಯದ ವಿಚಾರವನ್ನು ತಿಳಿದುಕೊಳ್ಳಬಹುದು.ಹಾಗಾದರೆ  ತಡ ಯಾಕೆ ಬನ್ನಿ ಕೂಲಂಕುಷವಾಗಿ ತಿಳಿದುಕೊಳ್ಳೋಣ.

 

ಒಟ್ಟು ಹತ್ತು ಬೆರಳುಗಳನ್ನು ಪರಿಶೀಲಿಸಿದಾಗ ಒಂದರಿಂದ ಹತ್ತು ಚಕ್ರಗಳಿದ್ದರೆ ಅವುಗಳಿಂದ ಯಾವ ಯಾವ ರೀತಿಯ ಲಾಭವಾಗುವುದು ?

 

ಒಂದು ಚಕ್ರವಿದ್ದರೆ ಸುಖವಂತರು,ಯೋಗ ಪುರುಷರು, ನೆಮ್ಮದಿಯಿಂದ ಜೀವನ ನಡೆಸುತ್ತಾರೆ.

 

 

ಎರಡು ಚಕ್ರವಿದ್ದರೆ ರಾಜ ಮರ್ಯಾದೆ,ಉನ್ನತ ಪದವಿಗಳನ್ನು ಪಡೆಯುತ್ತಾರೆ, ಸುಖ,ಸಮೃದ್ಧಿಯಿಂದ ಬಾಳುತ್ತಾರೆ.

ಮೂರು ಚಕ್ರಗಳಿದ್ದರೆ ದೊಡ್ಡ ಶ್ರೀಮಂತರಾಗುತ್ತಾರೆ, ಎಲ್ಲಾ ರಂಗಗಳಲ್ಲಿಯೂ ಸಹ ಉನ್ನತಿಗೆ ಹೋಗುತ್ತಾರೆ.

ನಾಲ್ಕು ಚಕ್ರಗಳಿದ್ದರೆ ಜೀವನದಲ್ಲಿ ದಾರಿದ್ರ್ಯವನ್ನು ಅನುಭವಿಸುತ್ತಾ , ಕ್ರೂರಿಗಳಾಗಿ, ಕಷ್ಟದಿಂದ ಕೂಡಿದ ಜೀವನವನ್ನು ನಡೆಸುತ್ತಾರೆ.

 

 

ಐದು ಚಕ್ರಗಳಿದ್ದರೆ  ಸ್ತ್ರೀಯರ ಸಹವಾಸವನ್ನು ಮಾಡಿ ಎಲ್ಲವನ್ನು ಸರ್ವನಾಶ ಮಾಡಿಕೊಳ್ಳುತ್ತಾರೆ,ಮಾನಸಿಕ ಚಂಚಲತೆ (ಚಂಚಲ ಮನಸ್ಸು) ಇವರಿಗೆ ಹೆಚ್ಚು ಇರುತ್ತದೆ.

ಆರು ಚಕ್ರಗಳಿದ್ದರೆ ಅತಿಯಾದ ಕಾಮದ ಆಸೆಯಿಂದ ಕಷ್ಟದಲ್ಲಿ ಬೀಳುತ್ತಾರೆ.

ಏಳು ಚಕ್ರಗಳಿದ್ದರೆ ಸುಖ,ಸಂಪತ್ತನ್ನು ಪಡೆಯುವರು. ಆರೋಗ್ಯವು ಚೆನ್ನಾಗಿರುತ್ತದೆ.

 

 

ಎಂಟು ಚಕ್ರಗಳಿದ್ದರೆ ನಿರಂತರವಾಗಿ ಖಾಯಿಲೆಯಿಂದ ಬಳಲುತ್ತಿರುತ್ತಾರೆ, ಮಾನಸಿಕ ನೆಮ್ಮದಿ ಇರಲ್ಲ.

ಒಂಬತ್ತು ಚಕ್ರಗಳಿದ್ದರೆ ರಾಜ ಸಮಾನರಾಗಿ ಇರುವರು, ರಾಜ್ಯ ಭಾರ ಮಾಡುವವರು, ಮಂತ್ರಿ ಪದವಿಯನ್ನು ಅಲಂಕರಿಸುವವರು.

 

 

ಹತ್ತು ಚಕ್ರಗಳಿದ್ದರೆ ಮಹಾನ ಯೋಗಿಯಾಗಿ, ಮಹಾಮೇಧಾವಿಯಾಗಿ ಮತ್ತು ದೇಶಾಧಿಪತಿಯೂ ಆಗಿ ಕೀರ್ತಿವಂತರಾಗುವರು.

ಯಾವ ಬೆರಳಿನಲ್ಲಿ ಚಕ್ರವಿದ್ದರೆ ಏನು ಲಾಭ  ?

 

ಹೆಬ್ಬೆಟ್ಟಿನ ಬೆರಳಿನಲ್ಲಿ  ಚಕ್ರವಿದ್ದರೆ ಪಿತ್ರಾರ್ಜಿತ ಆಸ್ತಿ ಪಡೆಯುತ್ತಾರೆ.

ತೋರು ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ.

ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ ಶುಭ ಕಾರ್ಯ ಮತ್ತು ದೇವತಾ ಕಾರ್ಯಗಳನ್ನು ಮಾಡುವುದರಿಂದ  ಯಜ್ಞ ಯಾಗಾದಿ ಆಚರಣೆಗಳಿಂದ ಧಾರ್ಮಿಕವಾಗಿ ಹಣ ಸಂಪಾದನೆ ಮಾಡುತ್ತಾರೆ.

 

ಉಂಗುರ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾರೆ .

ಕಿರು ಬೆರಳಿನಲ್ಲಿ ಚಕ್ರವಿದ್ದರೆ ವ್ಯಾಪಾರ ಉದ್ದಿಮೆಗಳಿಂದ ಹಣ ಸಂಪಾದನೆ ಮಾಡುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top