ಉದ್ಯೋಗ

ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ

ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು ಏಳು ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹೈದರಾಬಾದ್-ಕರ್ನಾಟಕ (371ಜೆ) ಗೆ ಒಳಪಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಹುದ್ದೆಗಳ ವಿವರ ಯೋಜನಾ ಸಹಾಯಕರು (ಶೈಕ್ಷಣಿಕ)-02 ಹುದ್ದೆಗಳು ವೇತನ ಶ್ರೇಣಿ: 21600-40050/-

 

*ಸಿಸ್ಟಂ ಅನಲಿಸ್ಟ್: 01 ಹುದ್ದೆ ವೇತನ ಶ್ರೇಣಿ: 36300-53850/- ಹಿರಿಯ ಸಹಾಯಕರು: 01 ಹುದ್ದೆ ವೇತನ ಶ್ರೇಣಿ: 20000-36300/- ಗ್ರಂಥಾಲಯ ಸಹಾಯಕರು: 01 ಹುದ್ದೆ ವೇತನ ಶ್ರೇಣಿ: 16000-29600/- ಡಾಟಾ ಎಂಟ್ರಿ ಆಪರೇಟರ್: 01 ಹುದ್ದೆ ವೇತನ ಶ್ರೇಣಿ: 14550-26700/- ಟೆಲಿಫೋನ್ ಆಪರೇಟರ್: 01 ಹುದ್ದೆ ವೇತನ ಶ್ರೇಣಿ: 11600-21000/-

ಆಯ್ಕೆ ವಿಧಾನ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಆಯಾ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ಲಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಂಧಪಟ್ಟ ನೇಮಕಾತಿ ಮಂಡಳಿ ಆಯ್ಕೆ ಮಾಡುವುದು.

ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ-35 ವರ್ಷ ಒಬಿಸಿ ವರ್ಗ-38 ವರ್ಷ ಪ.ಜಾ/ಪ.ಪಂ/ಪ್ರವರ್ಗ-1-40 ವರ್ಷವಾಗಿರಬೇಕು.

 ಸಾಮಾನ್ಯ ಮಾಹಿತಿ: ಮತ್ತು ಸೂಚನೆಗಳು ನಿಗದಿತ ಅರ್ಜಿ ನಮೂನೆಗಳನ್ನು “ಕುಲಸಚಿವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟಿ, ಬೆಂಗಳೂರು-560018” ಇವರಿಂದ ಅರ್ಜಿ ಶುಲ್ಕ: ರೂ.200/- ಗಳ ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ಇವರ ಹೆಸರಿಗೆ ಪಾವತಿಸಿ ಪಡೆಯಬಹುದಾಗಿದೆ. ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕವೂ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಶುಲ್ಕದ ಡಿಡಿಯನ್ನು ಕಡ್ಡಾಯವಾಗಿ ಸಲ್ಲಿಸುವುದು. ಪ್ರತ್ಯೇಕ ಹುದ್ದೆಗಳಿಗೆ ಬೇರೆ ಬೇರೆ ಅರ್ಜಿಗಳನ್ನು ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಶುಲ್ಕ ರೂ.400/- (ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.200/-) ಅಭ್ಯರ್ಥಿಗಳು 08 ಸೆಟ್ ಗಳಲ್ಲಿ ಅರ್ಜಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-11-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ*

 

http://www.ksu.ac.in/en/wp-content/uploads/2017/10/KSU-UGC-Scale-Teaching-Non-Teaching-Posts-Recruitment-Notification-2017-18.pdf

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top