fbpx
ರಾಜಕೀಯ

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಉಚಿತ LPG ಗ್ಯಾಸ್ ಯೋಜನೆ..!

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಉಚಿತ LPG ಗ್ಯಾಸ್ ಯೋಜನೆ..!

 

 

ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಸಿಲಿಂಡರ್‌, ಒಲೆ ವಿತರಿಸುವ ಸಲುವಾಗಿ ಇದೇ ಡಿಸೆಂಬರ್‌ನಿಂದ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಎಲ್ಲರಿಗೂ ತಲುಪಲು ವಿಫಲವಾಗಿರೋದ್ರಿಂದ ಆ ಯೋಜನೆಯ ಪ್ರಯೋಜನವನ್ನು ಪಡೆಯಲಾಗದ ಎಲ್ಲಾ ಬಿಪಿಎಲ್ ಕಾರ್ಡುದಾರರು ಅನಿಲ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುಹುದಾಗಿದೆ.

 

 

ರಾಜ್ಯದಲ್ಲಿ ಪ್ರಸ್ತುತ 1.31 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಅವುಗಳ ಪೈಕಿ ಈಗಾಗಲೇ 1.10 ಕೋಟಿ ಕುಟುಂಬಗಳು ಅಡುಗೆ ಅನಿಲ ಕನೆಕ್ಷನ್ ಪಡೆದುಕೊಂಡಿವೆ. ಉಳಿದ 21 ಲಕ್ಷ ಕುಟುಂಬಗಳಿಗೆ ಸರ್ಕಾರದ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯ ಸೌಲಭ್ಯ ಸಿಗಲಿದ್ದು, ಒಂದು ಸಿಲಿಂಡರ್, ಅದಕ್ಕೆ ಬೇಕಾದ ಠೇವಣಿ ಮೊತ್ತ, ಪೈಪ್, ಎರಡು ಬರ್ನರ್ ಇರುವ ಸ್ಟೌವ್, ರೆಗ್ಯುಲೇಟರ್​ನ್ನು ಉಚಿತವಾಗಿ ನೀಡಲಾಗುತ್ತದೆ. ಎಂದು ಖಾದರ್ ತಿಳಿಸಿದರು.

 

 

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಸೌಲಭ್ಯ ರಾಜ್ಯದ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ‍ಪ್ರತ್ಯೇಕವಾಗಿಯೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದಕ್ಕೆ ಸರ್ಕಾರ ಪ್ರತಿ ಕುಟುಂಬದ ಅನಿಲ ಸಂಪರ್ಕಕ್ಕೆ 4,040 ರೂ. ವೆಚ್ಚ ಭರಿಸುತ್ತಿದೆ. ಈ ಯೋಜನೆಯ ಉಪಯೋಗವನ್ನು ಪಡೆದುಕೊಳಲು ಹತ್ತಿರದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಬೇಕು ಅಥವಾ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top