fbpx
ಭವಿಷ್ಯ

ನವೆಂಬರ್ 10 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 10 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೧೦ ನವೆಂಬರ್ ೨೦೧೭
ಸೂರ್ಯೋದಯ : ೦೬:೧೯
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಸಪ್ತಮೀ
ನಕ್ಷತ್ರ : ಪುಷ್ಯ
ಯೋಗ : ಶುಕ್ಲ
ಪ್ರಥಮ ಕರಣ : ಬವ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೦೬:೨೧ – ೦೭:೫೨

ರಾಹು ಕಾಲ: ೧೦:೩೭ – ೧೨:೦೩
ಗುಳಿಕ ಕಾಲ: ೦೭:೪೫ – ೦೯:೧೧
ಯಮಗಂಡ: ೧೪:೫೫ – ೧೬:೨೧

ಮೇಷ (Mesha)

 

ನಡೆಯುವ ವ್ಯಕ್ತಿ ಎಡವುವಂತೆ ಈದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕ ಖರ್ಚು ಎದುರಾಗುವುದು. ನಕಾರಾತ್ಮಕ ಚಿಂತನೆಯಿಂದ ಮಾಡುವ ಕೆಲಸಗಳು ನಿಮಗೆ ಗೌರವ ತೋರುವುದು. ಪ್ರಯಾಣದಲ್ಲಿ ಎಚ್ಚರ.

 

ವೃಷಭ (Vrushabha)

ಜೀವನದಲ್ಲಿ ಜುಗುಪ್ಸೆ ಬರುವುದು ಸಹಜ. ಅದು ಎಲ್ಲರ ಮನೆಯಲ್ಲೂ ಇರುವ ಘಟನೆ. ಹಾಗಾಗಿ ಚಿಂತೆ ಬೇಡ. ‘ಶಿವಪಂಚಾಕ್ಷರಿ’ ಮಂತ್ರ ಪಠಿಸಿರಿ. ಸದಾ ಒಳಿತನ್ನೇ ಆಲೋಚಿಸಿರಿ. ಒಳಿತೇ ಆಗುವುದು.

 

ಮಿಥುನ (Mithuna)

ನಿಮ್ಮ ಭಾವನೆಗಳಿಗೆ ಹೆಚ್ಚಿನ ಮನ್ನಣೆ ದೊರೆಯುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

ಕರ್ಕ (Karka)

ಸರಕಾರಿ ಉನ್ನತ ಅಧಿಕಾರಿಗಳ ದರ್ಶನದಿಂದ ಲಾಭ. ಹಿರಿಯ ಅಧಿಕಾರಿಗಳು ಮತ್ತು ಹಿತೈಷಿಗಳ ಕೃಪಾದೃಷ್ಟಿಯಿಂದ ಕಾರ್ಯಾನುಕೂಲ. ಎಲ್ಲ ಕಾರ್ಯಗಳಲ್ಲೂ ಜಯ ನಿಮ್ಮದಾಗುವುದು.

ಸಿಂಹ (Simha)

ದೂರದ ಬಂಧುಗಳು ನಿಮ್ಮ ಸ್ನೇಹವನ್ನು ಬಯಸಿ ಬರುವರು. ಅವರಿಗೆ ನಿರಾಸೆ ಮಾಡದಿರಿ. ವಾದ ಸ್ಪರ್ಧೆಯಲ್ಲಿ ಜಯ ದೊರೆಯುವುದು. ಈದಿನ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಕನ್ಯಾರಾಶಿ (Kanya)

ವ್ಯಾಪಾರ-ವ್ಯವಹಾರಗಳಲ್ಲಿ ಆಕಸ್ಮಿಕ ಲಾಭವುಂಟಾಗಿ ಜೀವನಮಟ್ಟ ಸುಧಾರಿಸುವ ಸಂಭವವಿದೆ. ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುವುದು. ಕೌಟುಂಬಿಕವಾಗಿ ಸಂತಸದ ದಿನ.

 

ತುಲಾ (Tula)

ಮಕ್ಕಳ ಆಟಪಾಠಗಳಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಆಂಜನೇಯ ಸ್ತೋತ್ರ ಪಠಿಸಿರಿ. ಸಾಧ್ಯವಾದರೆ ಶನಿ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.

 

ವೃಶ್ಚಿಕ (Vrushchika)

ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಯಾತ್ರಾ ಸಂಕಲ್ಪ ಈಡೇರುವ ಸಂಭವ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಫಲ ನಿರೀಕ್ಷಿಸುವಿರಿ. ಬಂಧುಗಳ ಕಡೆಯಿಂದ ಹಣವು ಒದಗಿ ಬರುವುದು.

 

ಧನು ರಾಶಿ (Dhanu)

ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಮಯ. ಆದಾಗ್ಯೂ ಆಸ್ತಿ ಖರೀದಿಯ ಬಗ್ಗೆ ದಾಖಲೆಗಳನ್ನು ಚೆನ್ನಾಗಿ ಪರಾಂಬರಿಸಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಯವಾದರೂ ಸಂಜೆಯ ವೇಳೆ ಕುತೂಹಲ.

 

ಮಕರ (Makara)

ವ್ಯಾಪಾರ-ವ್ಯವಹಾರಗಳಲ್ಲಿ ಆಕಸ್ಮಿಕ ಲಾಭವುಂಟಾಗುವುದು. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಒದಗಿ ಬರುವುದು. ರಾಜಕೀಯವಾಗಿ ಉತ್ತಮ ದಿನ. ಮನೋಕಾಮನೆಗಳು ಪೂರ್ಣಗೊಳ್ಳುವುದು.

 

ಕುಂಭರಾಶಿ (Kumbha)

ಕಚೇರಿ ಕಾರ್ಯಾಲಯಗಳಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುವುದು. ನೀವು ಮಾಡದಿರುವ ತಪ್ಪಿಗೆ ದಂಡ ಅಥವಾ ಶಿಕ್ಷೆಯನ್ನು ಅನುಭವಿಸಬೇಕಾಗುವುದು.

 

ಮೀನರಾಶಿ (Meena)

ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಗೃಹ ಸಂಬಂಧ ವಿಷಯಗಳ ಬಗ್ಗೆ ಈದಿನ ಸಂತಸ ಹೊಂದುವಿರಿ. ಹಣಕಾಸು ಒಪ್ಪಂದಗಳಿಗೆ ಸೂಕ್ತಕಾಲ. ಪೊಲೀಸ್ ಇಲಾಖೆಯಲ್ಲಿರುವವರಿಗೆ ಉತ್ತಮ ದಿನ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top