ಆರೋಗ್ಯ

ಮೂತ್ರ ಹೋಗುವಾಗ ಉರಿ , ಸಂಕಟ , ನೋವು ಕಾಣಿಸಿಕೊಂಡು ತುಂಬಾ ಕಷ್ಟ ಆಗ್ತಿದ್ರೆ ಸುಲಭವಾಗಿ ಸಿಗೋ ಈ ಮದ್ದುಗಳು ಬಳಸಿಕೊಂಡು ವಾಸಿ ಮಾಡ್ಕೊಳ್ಳಿ

ಮೂತ್ರ ಹೋಗುವಾಗ ಉರಿ , ಸಂಕಟ , ನೋವು ಕಾಣಿಸಿಕೊಂಡು ತುಂಬಾ ಕಷ್ಟ ಆಗ್ತಿದ್ರೆ ಸುಲಭವಾಗಿ ಸಿಗೋ ಈ ಮದ್ದುಗಳು ಬಳಸಿಕೊಂಡು ವಾಸಿ ಮಾಡ್ಕೊಳ್ಳಿ

 

 

ಹನ್ನೆರಡು ಗ್ರಾಂ ಹುಣಸೆಹಣ್ಣನ್ನು ಎಳನೀರಿನಲ್ಲಿ ಕದಡಿ ದಿನಕ್ಕೆ ಎರಡು ಹೊತ್ತು ಎರಡು ವಾರ ಕುಡಿಯಬೇಕು.

 

 

ಬಿಳಿ ಎಳ್ಳು ಮತ್ತು ಸೌತೆಕಾಯಿ ಬೀಜಗಳನ್ನು ತುಪ್ಪದಲ್ಲಿ ಅರೆದು ಸೇವಿಸುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಹೊಟ್ಟೆ ಕಟ್ಟಿರುವುದು ಮೂತ್ರ ವಿಸರ್ಜನೆಗೆ ಕಷ್ಟವಾಗುವುದು ಮತ್ತು ಹೊಟ್ಟೆಯ ಉಬ್ಬರ ಕೂಡ ಕಡಿಮೆ ಆಗುತ್ತದೆ .


ನಾಲ್ಕೈದು ತುಳಸಿ ಎಲೆಗಳನ್ನು ಚೆನ್ನಾಗಿ ಅರೆದು ಹಾಲಿನ ಜೊತೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಉರಿಮೂತ್ರ ಕಡಿಮೆಯಾಗುತ್ತದೆ.

 

ಸ್ವಲ್ಪ ಸುಣ್ಣವನ್ನು ಹರಳೆಣ್ಣೆ ಜೊತೆ ಮಿಶ್ರಣ ಮಾಡಿ ಕಿಬ್ಬೊಟ್ಟೆಯ ಮೇಲೆ ಹಚ್ಚಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಕಾಲಿನ ಹೆಬ್ಬೆರಳಿಗೆ ಸುಣ್ಣವನ್ನು ಹಚ್ಚುವುದರಿಂದ ಸಹ ಉರಿಮೂತ್ರ ರೋಗ ಕಡಿಮೆಯಾಗುತ್ತದೆ .

 

 

ಒಂದು ಲೋಟ ಮಜ್ಜಿಗೆಗೆ ಒಂದು ತುಂಡು ಕಲ್ಲಂಗಡಿ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ರೋಗ ನಿವಾರಣೆಯಾಗುತ್ತದೆ .

 

 

ಒಂದು ಚಮಚ ಸೊಗಡೇ ಬಳ್ಳಿಯ ಪುಡಿಯನ್ನು ಒಂದು ಲೋಟ ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಮೂತ್ರ ನಾಳಗಳಲ್ಲಿರುವ ಸೋಂಕು ನಿವಾರಣೆಯಾಗಿ ಉರಿಮೂತ್ರ ರೋಗ ವಾಸಿಯಾಗುತ್ತದೆ .

 

 

ಒಂದು ಲೋಟಕ್ಕೆ ಐದರಿಂದ ಆರು ಚಿಗುರಿನ ವಸಭಿ ಗಿಡದ ಎಲೆಗಳನ್ನು ರುಬ್ಬಿ ಕುಡಿಯುವುದು ಇದರಿಂದ ಯಾವುದೇ ಸೂಕ್ಷ್ಮಾಣು ಜೀವಿಗಳ ಅಪಾಯವನ್ನು ನಾವು ತಪ್ಪಿಸಬಹುದು ಮೂತ್ರ ಸಹ ಸರಾಗವಾಗಿ ಆಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top