fbpx
ಮನೋರಂಜನೆ

ಸ್ಯಾಂಡಲ್‍ವುಡ್ ನಟಿಯರು ತಾವು ತೊಟ್ಟುಬಿಟ್ಟ ಬಟ್ಟೆಗಳನ್ನು ಮಾರಾಟಕ್ಕಿಟ್ಟಿದ್ದಾರೆ: ಯಾಕೆ ಗೊತ್ತಾ? ಖರೀದಿಸೋದು ಹೇಗೆ..?

ಹರಾಜಿಗಿಡಲಾಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆಗಳು: ಖರೀದಿಸೋದು ಹೇಗೆ ಗೊತ್ತಾ..?

 

 

ಕನ್ನಡ ಚಿತ್ರರಂಗದ ನಟಿ ಮಣಿಯರು ತಮ್ಮ ಬಟ್ಟೆಗಳನ್ನು ಮಾರಾಟಮಾಡಲು ಮುಂದಾಗಿದ್ದಾರೆ. ತಮ್ಮ ಮಹಿಳಾ ಅಭಿಮಾನಿಗಳಿಗಾಗಿ ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. . ಶ್ರುತಿ ಹರಿಹರನ್,ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್,ಶಾನ್ವಿ ಶ್ರೀವತ್ಸ,ಮೇಘನಾ ರಾಜ್,ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡು, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ಗಾಂವ್ಕರ್, ,ಸಂಗೀತಾ ಭಟ್, ಈ ಪ್ರಯತ್ನದಲ್ಲಿ ಒಂದಾಗಿದ್ದಾರೆ. ಅಷ್ಟಕ್ಕೂ ತಮ್ಮಲ್ಲಿಯ ಬಟ್ಟೆಗಳನ್ನ ಮಾರಾಟಕ್ಕಿಟ್ಟಿರೋದು ಯಾಕೆ ಅಂತೀರಾ. ಮುಂದೆ ಓದಿ.

 

 

ನಟಿಯರು ತಾವು ತೊಡುವ ಡ್ರೆಸ್’ಗಳು ರಿಪೀಟ್ ಆಗಬಾರದು ಎಂದು ಆಗಾಗ್ಗೆ ಹೊಸ ಉಡುಪುಗಳನ್ನು ಖರೀದಿಸುತ್ತಿರುತ್ತಾರೆ. ಇದರಿಂದಾಗಿ ಅವರ ಹತ್ತಿರ ರಾಶಿ ರಾಶಿ ಬಟ್ಟೆಗಳಿರುತ್ತವೆ ಆ ಉಡುಪುಗಳನ್ನು ಉಪಯೋಗಿಸದೆ ಇದ್ದರೆ ಅವು ಹಾಳಾಗುತ್ತದೆ. ಹೀಗಾಗಿ ನಟಿಯರೆಲ್ಲಾ ಸೇರಿಕೊಂಡು ತಮ್ಮ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

 

 

ಒಮ್ಮೆ ಶೃತಿ ಹರಿಹರನ್ ತಮ್ಮ ವಾರ್ಡ್ ರೋಬ್ ತೆರೆದಾಗ ಅಲ್ಲಿದ್ದ ಬಟ್ಟೆಗಳ ರಾಶಿಯನ್ನು ನೋಡಿ ಈ ಬಟ್ಟೆಗಳನ್ನು ಏನು ಮಾಡುವುದು ಎಂದು ಆಲೋಚಿಸಿ ಅವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎಂಬ ಐಡಿಯಾ ಹೊಳೆಯಿತಂತೆ. ಈ ಐಡಿಯಾವನ್ನು ಇತರೇ ನಟಿಯರಿಗೆ ಹೇಳಿಕೊಂಡಾಗ ಅವರು ಕೂಡ ಶ್ರುತಿ ಐಡಿಯಾವನ್ನು ಮೆಚ್ಚಿಕೊಂಡು ಸಾಥ್ ಕೊಟ್ಟಿದ್ದಾರೆ. ಇದಕ್ಕಾಗಿ ನವೆಂಬರ್‌ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‌ನ‌ಲ್ಲಿರುವ ಬಿ ಹೈವ್‌ ವರ್ಕ್‌ಶಾಪ್‌ನಲ್ಲಿ ಮಾರಾಟವಾಗುತ್ತದೆ.

 

 

ಈ ಸೆಲ್ ನಲ್ಲಿ ಪಾಲ್ಗೊಳ್ಳುವ ಆಸಕ್ತರು ಮುಂಚಿತವಾಗಿ https://insider.in/the-vanity-trunk-sale-nov12-2017/event ನಲ್ಲಿ ತಮ್ಮ ಹೆಸರನ್ನು ನಮೂದಿಸಬೇಕು. ಈ ಮಾರಾಟದಿಂದ ಬರುವ ಹಣವನ್ನು ಜೆ.ಪಿ. ಫೌಂಡೇಶನ್‌ ಮತ್ತು ಆದ್ಯಾ ಫೌಂಡೇಶನ್‌ ಎಂಬ NGOಗೆ ಕೊಡಲಾಗುತ್ತದೆ. ಆ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸುವ ಸಣ್ಣ ಪ್ರಯತ್ನವನ್ನು ನಮ್ಮ ನಾಟಿರು ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top