ದೇವರು

ಮಕ್ಕಳಲ್ಲಿ ಬುದ್ಧಿಶಕ್ತಿ ಏನೇ ಮಾಡಿದ್ರೆ ಹೆಚ್ಚಿಗೆ ಆಗ್ತಿಲ್ಲ ಅನ್ನೋರು ಶಾಸ್ತ್ರದ ಪ್ರಕಾರ ಈ ಸುಲಭ ಪರಿಹಾರ ಮಾಡ್ಕೊಳ್ಳಿ ಸರಿ ಹೋಗ್ತಾರೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚು ಮಾಡುವುದಕ್ಕೆ ಸುಲಭ ಪರಿಹಾರವಿದು.

 

 

ಕೆಲವೊಂದು ಮಕ್ಕಳಿಗೆ ಮರೆವಿನ ಸಮಸ್ಯೆ ಕಾಡುತ್ತದೆ. ಎಷ್ಟು ಓದಿದರೂ ಸಹ ನೆನಪಿನಲ್ಲಿ ಏನೂ ಉಳಿಯುವುದಿಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹ ಸಾಧ್ಯವಾಗುವುದಿಲ್ಲ. ಓದಿನ ಬಗ್ಗೆ ಗಮನ ನೀಡಲು ಸಹ ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳ ಪೋಷಕರು ಈ ಬಗ್ಗೆ ಚಿಂತೆ ಮಾಡುತ್ತಾರೆ.ಆದ್ದರಿಂದ ಮಕ್ಕಳಿಗೆ ಮರೆವಿನ ಸಮಸ್ಯೆ ಇದ್ದರೆ ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಇ೦ತಹ ಸಮಸ್ಯೆಗೆ ಗಣೇಶ ರುದ್ರಾಕ್ಷಿಯ ಸುಲಭ ಪರಿಹಾರವು  ಇದೆ. ಇದನ್ನು ಅನುಸರಿಸಿ ಪಾಲಿಸಿ.

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಗ್ರಹ ಅನುಕೂಲಕರವಾಗಿರುವುದು ಬಹಳ ಮುಖ್ಯ. ಜಾತಕದಲ್ಲಿ ಬುಧಗ್ರಹ ಅನುಕೂಲಕರವಾಗಿದ್ದರೆ ಮಕ್ಕಳು ಸ್ವಲ್ಪ ಓದಿದರೂ ಸಹ ಹೆಚ್ಚು ಅಂಕ ಗಳಿಸುತ್ತಾರೆ. ಇದನ್ನು ಬುದ್ಧಿವಂತಿಕೆ ಎನಿಸಿಕೊಳ್ಳುತ್ತಾರೆ.

ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಬುಧಗ್ರಹವು ಅನುಕೂಲವಾಗುವ ಫಲ ನೀಡುತ್ತದೆ . ಇದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಬರವಣಿಗೆಯ ಶಕ್ತಿಯಲ್ಲೂ ಸಹಾ ವೃದ್ಧಿಯಾಗುತ್ತದೆ. ಇದರಿಂದಾಗಿ ಸಾಮಾನ್ಯ ಬುದ್ಧಿವಂತ ವಿದ್ಯಾರ್ಥಿ ಕೂಡ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುತ್ತಾರೆ.

 

 

ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲು ಅಥವಾ ಗೋ ಮೂತ್ರದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಬೇಕು. ನಂತರ ಪೂಜೆ ಮಾಡಬೇಕು.

ಗಣೇಶ ರುದ್ರಾಕ್ಷಿಯನ್ನು ಹಸಿರು ಬಣ್ಣದ ದಾರದಲ್ಲಿ ಪೋಣಿಸಿ ಹಾಕಿಕೊಳ್ಳಬೇಕು. ಯಾವ ತಿಂಗಳಲ್ಲಿಯಾದರೂ ಸರಿ ಶುಕ್ಲ ಪಕ್ಷದಲ್ಲಿ ಸರಸ್ವತಿ ಯೋಗ ಬಂದ ಬುಧವಾರದ ದಿನವೇ ಈ ರುದ್ರಾಕ್ಷಿಯನ್ನು ಧರಿಸಬೇಕು.

 

 

ಆಗ ಮಕ್ಕಳಲ್ಲಿ  ಓದಿನಲ್ಲಿ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ದಿನಂಪ್ರತಿ ಮಕ್ಕಳಲ್ಲಿ ಮರೆವಿನ ಸಮಸ್ಯೆ ಕಡಿಮೆಯಾಗಿ, ಏಕಾಗ್ರತೆ ಹೆಚ್ಚಾಗಿ ಓದುವುದರಲ್ಲಿ ಮನಸ್ಸು ಮೂಡುತ್ತದೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಸಹ ಗಳಿಸುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top