fbpx
ಮನೋರಂಜನೆ

ಹಾಲಿವುಡ್ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಕಿಚ್ಚ!

ಹಾಲಿವುಡ್ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಕಿಚ್ಚ!

 

 

ಕನ್ನಡದ ಗಡಿ ದಾಟಿ ವಿಶ್ವಾಧ್ಯಂತ ಅಭಿನಯದ ಮೂಲಕವೇ ಹೆಸರು ಗಳಿಸಿಕೊಂಡಿರುವವರು ಕಿಚ್ಚಾ ಸುದೀಪ್. ಪಕ್ಕದ ತೆಲುಗಿನಲ್ಲಿ ಮಿಂಚಿದ್ದ ಕಿಚ್ಚ ಬಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ. ಇದೀಗ ಹಾಲಿವುಡ್‌ಗೆ ಎಂಟ್ರಿ ಕೊಡೋ ಸರದಿ…

 

 

ಸುದೀಪ್ ಹಾಲಿವುಡ್‌ನ ರೈಸನ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಹೆಬ್ಬುಲಿ ಚಿತ್ರದಲ್ಲಿ ಕಮಾಂಡೋ ಪಾತ್ರದಲ್ಲಿ ಮಿಂಚಿದ್ದ ಕಿಚ್ಚನದ್ದು ಹಾಲಿವುಡ್ ಚಿತ್ರದಲ್ಲಿಯೂ ಅದೇ ಪಾತ್ರ. ಈಗಾಗಲೇ ಈ ಚಿತ್ರದ ಪೋಸ್ಟರ್‌ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಭುಜದಲ್ಲಿ ಅಮೆರಿಕಾ ಧ್ವಜದ ಜೊತೆಗೆ ಇಎಓ ಕಮಾಂಡೋ ದಿರಿಸಿನಲ್ಲಿ ಸುದೀಪ್ ಮಿಂಚಿದ್ದಾರೆ.

 

 

 

ಸದ್ಯ ಕನ್ನಡ ಬಿಗ್‌ಬಾಸ್ ಸಾರಥ್ಯದಲ್ಲಿ ಬ್ಯುಸಿಯಾಗಿರೋ ಸುದೀಪ್ ಇದರ ನಡುವೆಯೂ ರೈಸನ್ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಸುದೀಪ್ ಇತ್ತೀಚೆಗೆ ದೈಹಿಕವಾಗಿ ಮತ್ತಷ್ಟು ಫಿಟ್ ಆಗುತ್ತಿದ್ದಾರೆ. ಇದೆಲ್ಲವೂ ರೈಸನ್ ಚಿತ್ರದ ಪಾತ್ರಕ್ಕಾಗಿನ ತಯಾರಿಯ ಫಲ. ಅಂದಹಾಗೆ ಸದ್ಯ ಹ್ಯಾರಿ ಮಾಸ್ಟರ್ ಅವರ ಫ್ರೇಮ್ ಸ್ಟುಡಿಯೋದಲ್ಲಿ ಈ ಚಿತ್ರಕ್ಕಾಗಿ ಸುದೀಪ್ ಅವರ ಫೋಟೋ ಶೂಟ್ ನಡೆದಿದೆ. ವಿಶೇಷವೆಂದರೆ ಈ ಫೋಟೋ ಶೂಟ್ ಮಾಡಿದವರು ಬೆಂಗಳೂರಿನ ಕೃಷ್ಣ ಕಾರ್ತಿಕ್!

 

 

ರೈಸನ್ ಚಿತ್ರ ರೆಡ್ಡಿ ಆರ್ಯನ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಈ ಸಂಬಂಧವಾಗಿ ರೆಡ್ಡಿ ಆರ್ಯನ್ ಅವರು ಒಂದಷ್ಟು ದಿನಗಳ ಹಿಂದೆ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿಯೇ ಚಿತ್ರದ ಬಗೆಗೆ ನಾನಾ ಚರ್ಚೆಗಳೂ ನಡೆದಿವೆಯಂತೆ. ಇನ್ನೇನು ಸುದೀಪ್ ಭಾಗದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಸುದೀಪ್ ಅದಕ್ಕಾಗಿ ಉತ್ಸಾಹದಿಂದ ಅಣಿಗೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top