fbpx
ಭವಿಷ್ಯ

ನವೆಂಬರ್ 11 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 11 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೧೦ ನವೆಂಬರ್ ೨೦೧೭
ಸೂರ್ಯೋದಯ : ೦೬:೧೯
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಸಪ್ತಮೀ
ನಕ್ಷತ್ರ : ಪುಷ್ಯ
ಯೋಗ : ಶುಕ್ಲ
ಪ್ರಥಮ ಕರಣ : ಬವ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೦೬:೨೧ – ೦೭:೫೨

ರಾಹು ಕಾಲ: ೧೦:೩೭ – ೧೨:೦೩
ಗುಳಿಕ ಕಾಲ: ೦೭:೪೫ – ೦೯:೧೧
ಯಮಗಂಡ: ೧೪:೫೫ – ೧೬:೨೧

ಮೇಷ (Mesha)

 

ಈದಿನ ಸಂತೋಷವಾಗಿ ಕಳೆಯುವಿರಿ. ನೂತನ ವಸ್ತ್ರಾಭರಣಗಳ ಖರೀದಿಯೋಗ. ಮಧುರ ಪದಾರ್ಥ ಭಕ್ಷಣೆ. ಮನೋಲ್ಲಾಸ. ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮ.

 

ವೃಷಭ (Vrushabha)

ಮನುಜ ಬಯಸಿದ್ದು ಒಂದು ಆಗುವುದು ಮತ್ತೊಂದು. ಇದು ದೈವದ ನಿಯಮ. ಹಾಗಾಗಿ ನಿಮ್ಮ ಇಚ್ಛೆಯ ವಿರುದ್ಧ ಕಾರ್ಯಗಳು ನಡೆಯುವುದು. ಆರ್ಥಿಕ ಸ್ಥಿತಿಯು ಸಾಧಾರಣವಾಗಿರುತ್ತದೆ.

 

ಮಿಥುನ (Mithuna)

ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಆರೋಗ್ಯ ಉತ್ತಮ.

 

ಕರ್ಕ (Karka)

ಈದಿನ ಮಹತ್ತರ ಕಾರ್ಯ ಪೂರೈಸುವಿರಿ. ಬಂಧುಬಾಂಧವರು ನಿಮ್ಮ ಗುಣಗಾನ ಮಾಡುವರು. ಆಭರಣ ಪ್ರಾಪ್ತಿ. ಧನಧಾನ್ಯ ಲಾಭ ಇತ್ಯಾದಿ ಶುಭಫಲಗಳು ನಡೆಯುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಸಿಂಹ (Simha)

ನಂಬಿದ ಸ್ನೇಹಿತರೇ ಮೋಸ ಮಾಡುವರು. ಹಿತಶತ್ರುಗಳು ಜಾಸ್ತಿ ಆಗುವ ಸಂಭವ. ಕೈಹಿಡಿದ ಕಾರ್ಯಗಳು ಅಪಯಶಸ್ಸಿನತ್ತ ಸಾಗುವುದರಿಂದ ಕೋಪ-ತಾಪಗಳು ಉಂಟಾಗುವುದು. ಕುಲದೇವತಾ ಪ್ರಾರ್ಥನೆ ಮಾಡಿರಿ.

 

ಕನ್ಯಾರಾಶಿ (Kanya)

ದೂರದಿಂದ ಬರುವ ಗೆಳೆಯನಿಂದ ಸಾಕಷ್ಟು ವಿಷಯಗಳನ್ನು ತಿಳಿಯುವಿರಿ. ನೀವು ಕಲಿಯಬೇಕಾದ್ದು ಬಹಳವಿದೆ ಎನಿಸುವುದು. ನಿಜ ಜಿಜ್ಞಾಸೆಗೆ ಇರುವ ಗುಣವೇ ನಿಮ್ಮಲ್ಲಿರುವುದರಿಂದ ಈದಿನ ಉತ್ತಮ ಪಾಠವನ್ನು ಕಲಿಯುವಿರಿ.

 

ತುಲಾ (Tula)

ಹಮ್ಮಿಕೊಂಡ ಸಿವಿಲ್ ಪ್ರಾಜೆಕ್ಟ್‌ಗಳು ಮುಗಿಯುವ ಹಂತದಲ್ಲಿದೆ. ಆದಾಗ್ಯೂ ಮನೆಯ ಮಾಲೀಕರು ಹಣ ಕೊಡುವಲ್ಲಿ ಸತಾಯಿಸುವರು. ಕೆಲಸಗಾರರಿಗೆ ಕೊಡಬೇಕಾದ ಹಣದಲ್ಲಿ ಅರ್ಧದಷ್ಟು ಪಾವತಿ ಮಾಡಬಲ್ಲಿರಿ.

 

ವೃಶ್ಚಿಕ (Vrushchika)

ಬಂಧುಬಾಂಧವರ ಆಗಮನದಿಂದ ಮನೋಲ್ಲಾಸ. ಮಾತೃ ಸಂಬಂಧದವರಿಂದ ಸೌಖ್ಯ. ನೂತನ ವಸ್ತ್ರಾಭರಣ ಪ್ರಾಪ್ತಿ. ಬೆಲೆಬಾಳುವ ವಸ್ತುಗಳನ್ನು ಮನೆಗೆ ತರುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

 

ಧನು ರಾಶಿ (Dhanu)

ಪರರ ಜಗಳವನ್ನು ತೀರಿಸುವಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಇದರಿಂದ ನಿಮಗೆ ತೊಂದರೆ ಆಗುವುದು. ನೀವು ನಿಮ್ಮ ಗಮನವನ್ನು ಕೆಲಸದ ಕಡೆ ಕೊಡಿ. ನೆಮ್ಮದಿಯ ಜೀವನವನ್ನು ಕಂಡುಕೊಳ್ಳುವಿರಿ.

 

ಮಕರ (Makara)

ಸ್ವಯಂಕೃತ ಅಪರಾಧಗಳಿಗೆ ಭಗವಂತನು ನೆರವಾಗುವುದಿಲ್ಲ. ಹಾಗಾಗಿ ಈದಿನ ಘಟಿಸುವ ಕೆಲವು ಘಟನೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ದೊಡ್ಡತನ ಮೆರೆಯಿರಿ.

 

ಕುಂಭರಾಶಿ (Kumbha)

ಬಂಧುಮಿತ್ರ ದರ್ಶನ, ಮೇಲಧಿಕಾರಿಗಳಿಂದ ಪ್ರಶಂಸೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ನೌಕರರಿಗೆ ಮುಂಬಡ್ತಿಯ ಸಾಧ್ಯತೆ. ಆರೋಗ್ಯದಲ್ಲಿ ಉತ್ತಮ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಮೀನರಾಶಿ (Meena)

ಆಲೋಚಿಸಿದ ಕೆಲಸಗಳು ಶೀಘ್ರಗತಿಯಲ್ಲಿ ಆಗುವುದು. ಗುರು ಹಿರಿಯರ ಆಶೀರ್ವಾದ ದೊರೆಯುವುದು. ಮನೋವ್ಯಾಕುಲತೆ ದೂರವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top