ದೇವರು

ಗುಲ್ಬರ್ಗದ ಈ ದೇವಸ್ಥಾನದಲ್ಲಿ ಚೇಳು ದೇವರು , ಚೇಳು ಮೈ ಮೇಲೆಲ್ಲಾ ಹರಿದಾಡಿದರೆ ಸಂತಾನ ,ಮದುವೆ , ಹಣ ಚರ್ಮ ರೋಗ ಯಾವ ಸಮಸ್ಯೆ ಬರಲ್ಲವಂತೆ !

ಹಾವು ಚೇಳು ಅಂದರೆ ಮಾರು ದೂರ ಓಡಿ ಹೋಗೋ ಜನ ಈ ವಿಚಿತ್ರವಾದ ದೇವಾಲಯವನ್ನು ಒಮ್ಮೆ ನೋಡಲೇ ಬೇಕು

 

 

ಈ ಊರಿನಲ್ಲಿ ಚೇಳುಗಳಿಗೆ ಪೂಜೆ ಮಾಡಲಾಗುತ್ತದೆ , ಸಾಮಾನ್ಯವಾಗಿ ತನ್ನ ವಿಷವನ್ನು ಒಡಲಲ್ಲಿ ಇಟ್ಟುಕೊಂಡಿರುವ ಚೇಳು ನೋಡಿದರೆ ಸಾಕು ಭಯವಾಗುತ್ತದೆ ಆದರೆ ಈ ಊರಿನಲ್ಲಿ ಚೇಳು ರಾಜನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಾರೆ , ಅಷ್ಟೇ ಅಲ್ಲ ಚೇಳುಗಳ ಜೊತೆ ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರು ಆಟ ಆಡುತ್ತಾರೆ .

ಅಸಲಿಗೆ ಈ ದೇವಾಲಯ ಎಲ್ಲಿದೆ ?

ಈ ದೇವಾಲಯವಿರುವುದು ಗುಲ್ಬರ್ಗದ ಯಾದಗಿರಿಯ ಕಂದಕೂರ ಎಂಬ ಗ್ರಾಮದಲ್ಲಿ ಬೆಟ್ಟದ ಮೇಲೆ ಈ ದೇವಾಲಯವಿದೆ, ಈ ಸ್ಥಳ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿದ್ದು ಭಕ್ತರು ಆಂಧ್ರ ಪ್ರದೇಶ , ಕರ್ನಾಟಕ ಹಾಗು ತಮಿಳು ನಾಡಿನಿಂದ ಆಗಮಿಸುತ್ತಾರೆ , ಇಲ್ಲಿನ ಜನರು ಅಲ್ಲಿ ಸಿಗುವ ಚೇಳುಗಳನ್ನು ಹಿಡಿದುಕೊಂಡು ಮೈಮೇಲೆಲ್ಲ ಹರಿಯ ಬಿಟ್ಟುಕೊಂಡು ಆಟ ಆಡುತ್ತಾರೆ .

 

ನಾಗ ಪಂಚಮಿಯ ದಿನ ವಿಶೇಷ ಪೂಜೆ

ಇಲ್ಲಿ ನಾಗ ಪಂಚಮಿಯ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ , ಜಾನಪದ ಕಲೆಯನ್ನು ಪ್ರಸ್ತುತ ಪಡಿಸಲಾಗುತ್ತದೆ ಅಷ್ಟೇ ಅಲ್ಲ ಹಾಡುಗಳನ್ನು ಹಾಡಿ ಕುಣಿದುಕುಪ್ಪಳಿಸಿ ಸಂಭ್ರಮಿಸುತ್ತಾರೆ.

 

ನಾಗ ಪಂಚಮಿ ದಿನ ಚೇಳು ಪ್ರತ್ಯಕ್ಷ

ವರ್ಷಕ್ಕೆ ಒಮ್ಮೆ ಮಾತ್ರ ಪೂಜೆ ಇಲ್ಲಿ ನಾಗ ಪಂಚಮಿ ಹಬ್ಬದ ದಿನಾ ಮಾತ್ರ ಚೇಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು ಅಷ್ಟೇ ಅಲ್ಲ ಇಲ್ಲಿಯ ವೆರೆಗೂ ಚೇಳು ಯಾರಿಗೂ ಯಾವುದೇ ಹಾನಿಯನ್ನು ಉಂಟು ಮಾಡಿಲ್ಲ .

 

ಚೇಳಿನ ಜೊತೆ ಆಟ

ಇಲ್ಲಿ ಸಿಗುವ ಚೇಳಿನ ಜೊತೆ ಆಟ ಆಡಿದರೆ ಕಷ್ಟಗಳು ತೊಲಗಿ ಹೋಗುತ್ತವೆ ಎಂಬ ನಂಬಿಕೆ ಇದೆ , ಆದ್ದರಿಂದ ಮೈ ಮೇಲೆಲ್ಲಾ ಚೇಳನ್ನು ಹರಿಯ ಬಿಟ್ಟುಕೊಳ್ಳುತ್ತಾರೆ ಹೀಗೆ ಮಾಡಿದರೆ ಸಂತಾನ ಮದುವೆ , ಹಣದ ಸಮಸ್ಯೆ ರೋಗ ರುಜಿನಗಳು , ಚರ್ಮ ರೋಗ ಮುಂತಾದ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ನಂಬಲಾಗಿದೆ , ಇಲ್ಲಿನ ಗ್ರಾಮ ದೇವತೆಯ ಆಶೀರ್ವಾದದಿಂದಲೇ ಈ ಪವಾಡ ನಡೆಯುತ್ತದೆ ಎಂದು ಹೇಳಲಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top