ದೇವರು

ಸಾಲದ ಬಾಧೆ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ ಲಕ್ಷ್ಮಿ ದೇವರಿಗೆ ಪ್ರಿಯವಾದ ಈ ವಸ್ತುಗಳನ್ನು ಮನೆಯಲ್ಲಿ ಇಡಿ ಎಲ್ಲ ಒಳ್ಳೇದಾಗುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದೇವರ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಲಕ್ಷ್ಮೀ ದೇವಿಯೂ ಆಕರ್ಷಿತಳಾಗಿ ನಿಮ್ಮ ಮನೆಯಲ್ಲಿ ನೆಲೆಸುವಳು.

 

 

ಲಕ್ಷ್ಮೀ  ದೇವಿಯನ್ನು ನಾವು ಧನದ ಅಧಿದೇವತೆ, ಸಂಪತ್ತು, ಸಮೃದ್ಧಿಯನ್ನು ನೀಡುವವಳು ಎಂದು ಪುರಾತನ ಕಾಲದಿಂದಲೂ ತಿಳಿದಿದ್ದೇವೆ. ಲಕ್ಷ್ಮೀ  ದೇವಿಗೆ ಪ್ರಿಯವಾದ ಕೆಲವು ನಿಯಮಗಳನ್ನು ಪಾಲಿಸಿದರೆ….. ಆ ಲಕ್ಷ್ಮೀ ದೇವಿ ಹೆಚ್ಚು ಹಣ ಸಂಪತ್ತನ್ನು ಕೊಡುವಳು. ಅವು ಯಾವುವು ?  ಎಂದು ತಿಳಿಯೋಣ …….

 

ಕುಬೇರ ದೇವ.

 

 

ಕುಬೇರ ದೇವರನ್ನು ವಿಶ್ವದ ಧನ ರಕ್ಷಕರೆಂದು ನಂಬಿದ್ದೇವೆ. ಆದ್ದರಿಂದ ಮನೆಯಲ್ಲಿ ಕುಬೇರ ದೇವರ ಪ್ರತಿಮೆಯನ್ನು ಇಟ್ಟು ಪೂಜಿಸಬೇಕು. ಹೀಗೆ ಮಾಡಿದರೆ ಲಕ್ಷ್ಮೀ ದೇವಿಯನ್ನು ಸಂತೋಷ ಪಡಿಸಬಹುದು. ಕುಬೇರ ದೇವನ ಪ್ರತಿಮೆ ಇಡುವ ಸ್ಥಳವನ್ನು ಸ್ವಚ್ಛವಾಗಿ ಇಡಬೇಕು.

 

 ಕವಡೆಗಳು .

 

 

ಕವಡೆಗಳನ್ನು ಸಾಮಾನ್ಯವಾಗಿ ಮಕ್ಕಳು ಆಟವಾಡಲು ಬಳಸುತ್ತಾರೆ. ಅಲ್ಲದೆ ಇವು ಶಾಸ್ತ್ರ ಹೇಳುವವರ ಹತ್ತಿರವೂ ಇರುತ್ತವೆ. ಇವು ಸಮುದ್ರದಿಂದ  ಲಕ್ಷ್ಮೀ ದೇವಿಯ ಸಹೋದರರಾಗಿ ಹುಟ್ಟಿವೆ. ಹಾಗಾಗಿಯೇ ಲಕ್ಷ್ಮೀ ದೇವಿಗೆ ಕವಡೆಗಳು ಅಂದರೆ ಇಷ್ಟ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಲಕ್ಷ್ಮೀ ದೇವಿಯೂ ಕೂಡ ಸಮುದ್ರ ರಾಜನ ಮಗಳೇ ಆದ್ದರಿಂದ ಇವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿಯೂ ಆಕರ್ಷಿತಳಾಗುವಳು ಎಂದು ಹೇಳಲಾಗುತ್ತದೆ.

 

ಪಾದರಸದ ಲಕ್ಷ್ಮಿ ಚಿತ್ರಗಳು .

 

 

ಪಾದರಸದಿಂದ ಮಾಡಿದ ಲಕ್ಷ್ಮೀ ದೇವಿಯ ಪ್ರತಿಮೆಗಳು ಅಥವಾ ಚಿತ್ರಗಳು ಬಹಳ ವಿಶೇಷವೆಂದು ಹೇಳಲಾಗುತ್ತದೆ. ಪಾದರಸದಿಂದ ಮಾಡಿದ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಲಕ್ಷ್ಮೀ ದೇವಿಯನ್ನು ನೀವು  ಸುಲಭವಾಗಿ ಒಲಿಸಿಕೊಳ್ಳಬಹುದು.

 

 ಸಣ್ಣ ತೆಂಗಿನಕಾಯಿ.

 

ಈ ತೆಂಗಿನ ಕಾಯಿ ಸಾಮಾನ್ಯ ತೆಂಗಿನ ಕಾಯಿಗಿಂತ ಚಿಕ್ಕದಾಗಿರುತ್ತದೆ. ಇದನ್ನು ಸ್ತ್ರೀ ಫಲ ಎಂದು ಕೂಡ ಕರೆಯುತ್ತಾರೆ. ಇದರ ಅರ್ಥ ಲಕ್ಷ್ಮೀ ದೇವಿಯ ಹಣ್ಣು. ಆದ್ದರಿಂದ ಮನೆಯಲ್ಲಿ ಈ ತೆಂಗಿನ ಕಾಯಿಯನ್ನು ಇಟ್ಟು ಪೂಜಿಸಿದರೆ ಲಕ್ಷ್ಮೀ ದೇವಿಯು ನಿಮಗೆ ಒಲಿಯುತ್ತಾಳೆ.

 

 ಮೋತಿ ಶಂಖ.

 

 

ಈ ಅಮೂಲ್ಯವಾದ ಶಂಖವನ್ನು ತಂತ್ರ ಮತ್ತು ಮಂತ್ರಗಳಲ್ಲಿ ಬಹಳ ವಿಶೇಷವೆಂದು ಹೇಳುತ್ತಾರೆ. ಇದನ್ನು ಪವಾಡ ಶ೦ಖವೆಂದು ಸಹ ನಂಬಲಾಗಿದೆ. ಇದು ಮನೆಯಲ್ಲಿದ್ದರೆ ತುಂಬಾ ಒಳ್ಳೆಯದು.

 

ದಕ್ಷಿಣಾವರ್ತಿ ಶಂಖ.

 

 

ದಕ್ಷಿಣಾವರ್ತಿ ಶಂಖ ಬಹಳ ವಿಶೇಷವೆಂದು ತಿಳಿದಿದ್ದೇವೆ. ಹಾಗಾಗಿ ಇದನ್ನು ಆರಾಧಿಸಿ ಪೂಜಾ ಕೊಠಡಿಯಲ್ಲಿ   ಇಟ್ಟು ಪೂಜಿಸಿದರೆ  ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬ೦ದು ನೆಲೆಸುತ್ತಾಳೆ.

ಇದರಲ್ಲಿ ಯಾವುದಾದರೂ ಒಂದನ್ನು ಮಾಡಿದರೆ ಸಾಕು ಲಕ್ಷ್ಮೀ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುವಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top