fbpx
ಆರೋಗ್ಯ

ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಮಹಾಭೂತಗಳಲ್ಲೊಂದು

ಒಮ್ಮೆ ನಮ್ಮ ಇಡೀ ದಿನವನ್ನು ಕಣ್ಮುಂದೆ ತಂದುಕೊಳ್ಳಿ ಮತ್ತು ಯೋಚಿಸಿ ಹೇಳಿ. ನಾವು ಒಂದು ದಿನದಲ್ಲಿ ಹೆಚ್ಚು ತಿನ್ನುತ್ತೇವಾ? ಹೆಚ್ಚು ನೀರನ್ನು ಕುಡಿಯುತ್ತೇವಾ?

ತಿನ್ನುತ್ತೇವೆ ಎಂದಾದಲ್ಲಿ.. ಎಷ್ಟು ತಿನ್ನುತ್ತೇವೆ? ಹಸಿವು ನೀಗಿಸಿಕೊಳ್ಳಲು ತಿನ್ನುತ್ತೇವಾ? ಬಾಯಿ ಚಪಲಕ್ಕಾಗಿ ತಿನ್ನುತ್ತೇವಾ? ಎಂಬ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮಕ್ಕಳಾದಿಯಾಗಿ ಬಹುಪಾಲು ಜನರು ಹೆಚ್ಚೆಚ್ಚು ತಿನ್ನುವ ಅಭ್ಯಾಸದಿಂದಾಗಿ ಅನಾರೋಗ್ಯಕ್ಕೆ ಈಡಾಗುತಿದ್ದೇವೆ ಎಂಬುದನ್ನು ತಿಳಿದೋ-ತಿಳಿಯದೋ ತಿನ್ನುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಆದರೆ ಹೆಚ್ಚು ನೀರನ್ನು ಕುಡಿಯುತ್ತೇವೆ ಎಂದಾದಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೀರಿ ಎಂದರ್ಥ. ನಾವು ಆಹಾರವನ್ನು ಎಷ್ಟು ಪ್ರೀತಿಯಿಂದ ಸ್ವಾಹ ಮಾಡುತ್ತೇವೆಯೋ ಅಷ್ಟೇ ಆಸ್ಥೆಯಿಂದ ನೀರನ್ನು ಕುಡಿಯುತ್ತಾ ಇದ್ದಲ್ಲಿ ಏನೆಲ್ಲ ಪ್ರಯೋಜನಗಳು ನಮಗೆ ಲಭಿಸಬಹುದು ಎಂಬುದನ್ನು ಮನದಟ್ಟು ಮಾಡಲು ಅರಿವು ನೀಡಲು ಲೇಖನಕ್ಕೆ ಈ ರೀತಿಯ ಶಿರೋನಾಮೆ.

ಮಾತುಗಳಲ್ಲಿಯೇ ಮತ್ತೊಬ್ಬರಿಗೆ ನೀರು ಕುಡಿಸೋ, ನೀರು ಇಳಿಸೋ ಕಲೆ ಗೊತ್ತಿರುವ ಪ್ರಚಂಡ ಕಲಾವಿದರು ನಮ್ಮಲಿದ್ದಾರೆ. ಆ ವಿಚಾರವಿಲ್ಲಿ ಅಪ್ರಸ್ತುತ. ಆದರೆ ಪ್ರತಿದಿನ ಕೇವಲ ನೀರನ್ನು ಕುಡಿಯೋದ್ರಿಂದ ಏನೆಲ್ಲಾ ರೋಗಗಳು ವಾಸಿಯಾಗುತ್ತವೆ ಎಂಬುದನ್ನು ತಿಳಿದುಕೊಂಡಾಗ ನಂಬಲು ಕೊಂಚ ಕಷ್ಟವೆನಿಸುತ್ತದೆ.

ಬೆಳ್ಳಂಬೆಳಗ್ಗೆ ಎದ್ದ ತಕ್ಷಣ, ಹಾಳು ಮುಖ ತೊಳೆಯದೇ, ಹಲ್ಲುಜ್ಜುದೆ, ಕುಳಿತುಕೊಂಡೇ ನೀರನ್ನು ಗುಟುಕು ಗುಟುಕಾಗಿ ಅಭ್ಯಾಸವನ್ನು ನಮ್ಮ ಪೂರ್ವಿಕರು ರೂಢಿಸಿಕೊಂಡಿದ್ದರು. ನೀರು ಗಂಟಲಲ್ಲಿ ‘ಗುಟುಕ್. ಗುಟುಕ್.. ಎಂದು ಶಬ್ದ ಮಾಡುತ್ತಾ ಸಾಗುವುದರಿಂದ ಗುಟುಕು ಶಬ್ದ ಹುಟ್ಟಿರಬಹುದು. ಬೆಳಗ್ಗೆ ನೀರು ಕುಡಿಯುವ ಸದಾಭ್ಯಾಸಕ್ಕೆ ನಮ್ಮವರು ಉಷಃಪಾನ ಎಂದರೆ ಜಪಾನೀಯರು ಹೈಡ್ರೋಥೆರಪಿ ಎಂದು ಹೆಸರಿಟ್ಟರು. ತಾಮ್ರದ ಚೊಂಬಿನಲ್ಲಿ ತುಂಬಿಟ್ಟ ನೀರನ್ನು ಬೆಳಗ್ಗೆ ನಸುಕಿನಲ್ಲಿ ಕುಳಿತು ಕುಡಿದು ನಂತರ ಸ್ವಲ್ಪ ನಡೆದಾಡುವುದರಿಂದ ವಾಸಿಯಾಗುವ ರೋಗಗಳ ಒಂದು ಸಣ್ಣ ಪಟ್ಟಿ ಇಲ್ಲಿದೆ. 1) ಮಲಬದ್ಧತೆ 2) ಭೇದಿ 3) ಮಧುಮೇಹ 4) ಮೂತ್ರಾಂಗದ ತೊಂದರೆ 5) ಅಸಿಡಿಟಿ 6) ಅತಿಭಾರ 7) ಸೈನಸ್ 8) ಸ್ತ್ರೀಯರ ಮಾಸಿಕ ಸಮಸ್ಯೆ 9) ಕಣ್ಣಿನ ದೋಷಗಳು 10) ಉಸಿರಾಟದ ತೊಂದರೆ 11 ) ಸ್ನಾಯು ನೋವು 12) ರಕ್ತದ ಒತ್ತಡ 13) ತಲೆನೋವು 14) ಕೆಮ್ಮು 15) ಕ್ಷಯ 16) ಜಠರ ಸಮಸ್ಯೆಗಳು 17) ಸ್ತನ ಕ್ಯಾನ್ಸರ್ 18) ಸಾಮಾನ್ಯ ಪಾರ್ಶವಾಯು 19) ಹುಳಿತೇಗು 20) ಮೆದುಳು ದೋಷಗಳು 21) ಅಸ್ತಮಾ 22) ರಕ್ತದ ಕ್ಯಾನ್ಸರ್ 23) ರಕ್ತಹೀನತೆ 24) ಒಳಕುರು 25) ಧ್ವನಿಪೆಟ್ಟಿಗೆ ಸಮಸ್ಯೆ 26) ಶ್ವಾಸಕೋಶದ ತೊಂದರೆಗಳು ಇತ್ಯಾದಿ.

ಇಷ್ಟೆಲ್ಲಾ ಸಮಸ್ಯೆಗಳ ಪರಿಹಾರವು ಕೇವಲ ದಿನವಿಡಿ ಆಗಾಗ ನೀರು ಕುಡಿಯುವುದರಿಂದ ಆಗುತ್ತದೆಯಾದರಿಂದ ಇಲ್ಲಿ ನೀರೇ ದಿವ್ಯೌಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅನವಶ್ಯಕವಾಗಿ ಔಷಧಿಗಳ ಸೇವನೆ, ಮಾತ್ರೆ, ಇಂಜೆಕ್ಷನ್ ಹೀಗೆ ಏನೂ ಖರ್ಚಿಲ್ಲದೇ ಕಾಯಿಲೆಗಳ ನಿವಾರಣೆ, ನಿಯಂತ್ರಣವು ನೀರು ಕುಡಿಯೋ ಅಭ್ಯಾಸದಿಂದ ಸಾಧ್ಯ ಎಂಬುದನ್ನು ಜಪಾನಿಯರು ಸಂಶೋಧನೆಗಳ ಮೂಲಕ ಕಂಡುಕೊಂಡಿದ್ದಾರೆ.

ಪ್ರಾತಃ ಕಾಲದಲ್ಲಿ ಎದ್ದ ತಕ್ಷಣ ನೀರನ್ನು ಕುಡಿಯುವುದು ಪ್ರಾರಂಭದಲ್ಲಿ ಸ್ವಲ್ಪ ಕಷ್ಟಕರವೆನಿಸಿದರೂ ದಿನಂಪ್ರತಿ ಅಭ್ಯಾಸಬಲದಿಂದ ಒಂದೇ ಸಾರಿಗೆ 1 ರಿಂದ 1.25ಲೀ ನೀರು ಕುಡಿಯಲು ಸಾಧ್ಯವಾಗುತ್ತದೆ. ದಿನದ ಆರಂಭಕ್ಕೆ ಇದು ಉತ್ತಮ ಫೌಂಡೇಷನ್. ನೀರಿನ ಸೇವನೆಯಿಂದ ಶರೀರ ಶುದ್ಧಿಯ ಜೊತೆಯಲ್ಲಿ ಹೊಸ ರಕ್ತವನ್ನು ಸೃಷ್ಟಿಸಿ ಪಚನಾಂಗಗಳನ್ನು ಬಲಗೊಳಿಸುತ್ತದೆ. ಕರುಳಿನ ಮ್ಯುಕೋಸೆಲ್ ಪದರಗಳು ಚುರುಕುಗೊಳ್ಳುತ್ತದೆ. ಕರುಳಿನ ಮ್ಯೂಕೋಸೆಲ್ ಪದರಗಳು ಜೀರ್ಣವಾದ ಆಹಾರವನ್ನು ಹೀರಿಕೊಂಡಾಗ ಅದು ರಕ್ತವಾಗಿ ಮಾರ್ಪಾಡುತ್ತದೆ. ಹೀಗೆ ತಯಾರಾಗುವ ಹೊಸ ರಕ್ತವು ರೋಗಗಳನ್ನು ನಿವಾರಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕುಡಿದ ನೀರು ಕರುಳಿನಲ್ಲಿ ತುಂಬಿಕೊಂಡು ರಕ್ತ ಶುದ್ಧಿಗೊಳಿಸುವ ಜೊತೆಗೆ ಹೊಸ ರಕ್ತದ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಆರೋಗ್ಯವಂತ ಮಾನವರು ದಿನದಲ್ಲಿ ಕನಿಷ್ಠ 3 ರಿಂದ 5 ಲೀ ನೀರು ಕುಡಿಯಬಹುದಾಗಿದೆ. ಗಂಟೆಗೊಂದು ಲೋಟ ನೀರು ಕುಡಿಯುವ ಹವ್ಯಾಸ ಒಳ್ಳೆಯದು.

ನೀರಿನ ಸೇವನೆಯಿಂದ ಆಗಬಹುದಾದ ಪರಿಣಾಮಗಳ ಬಗೆಗಿನ ಸಂಶೋಧನೆಗಳು ಈ ಕೆಳಕಂಡ ರೋಗಗಳು ಗುಣವಾಗಲು ತೆಗೆದುಕೊಳ್ಳುವ ಕಾಲಾವಧಿಯನ್ನು ಆವರಣದಲ್ಲಿ ಸೂಚಿಸಿದೆ. 1. ಮಲಬದ್ಧತೆ (2 ದಿನ) 2. ಹುಳಿತೇಗು (4 ದಿನ) 3. ಸಿಹಿಮೂತ್ರ ರೋಗ (10 ದಿನ) ರಕ್ತದ ಒತ್ತಡ (30 ದಿನ) ಗ್ಯಾಸ್ಟ್ರಿಕ್ (8 ದಿನ) ಕೀಲು ನೋವು (21 ದಿನ) ನೀರಿನ ಸೇವನೆಯ ಕುರಿತು ಕೆಲ ಸಂಗತಿಗಳ ಬಗ್ಗೆ ಗಮನ ಹರಿಸಿ.

  1. ಊಟದ ಮಧ್ಯೆ ಮಧ್ಯೆ ನೀರನ್ನು ಕುಡಿಯಬಾರದು. ಊಟದ 40 ನಿಮಿಷ ಮೊದಲು ಮತ್ತು 90 ನಿಮಿಷದ ನಂತರ ನೀರನ್ನು ಕುಡಿಯಬೇಕು. ಊಟದ ಜೊತೆಯಲ್ಲಿ ಕುಡಿಯುವ ನೀರು ಜೀರ್ಣಾಗ್ನಿಯನ್ನು ನಂದಿಸಿ, ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.
  2. ನೀರನ್ನು ಕುಡಿಯುವಾಗ ಸಾಧ್ಯವಾದಷ್ಟು ಕುಳಿತುಕೊಂಡೇ ಕುಡಿಯಬೇಕು.
  3. ನೀರನ್ನು ಗುಟುಕು-ಗುಟುಕಾಗಿ ಕುಡಿಯಬೇಕೆ ವಿನಃ ಗಟ-ಗಟಾ ಕುಡಿಯಬಾರದು
  4. ಊಟದ ನಂತರ ಮಜ್ಜಿಗೆ, ಹಣ್ಣಿನ ರಸ, ಹಾಲು ಕುಡಿಯಬಹುದು.
  5. ರಾತ್ರಿ ಮಲಗುವ ಮುನ್ನ ನೀರನ್ನು ಕುಡಿಯಲೇಬೇಕು.
  6. ರೆಫ್ರಿಜರೇಟರ್ (ಫ್ರಿಜ್ ) ನೀರನ್ನು ಕುಡಿಯುವುದು ಹಿತಕರವಲ್ಲ.

ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಮಹಾಭೂತಗಳಲ್ಲೊಂದು. ಭೂಮಿಯ ಮತ್ತು ನಮ್ಮ ಶರೀರದ ಶೇ.70 ಪ್ರತಿಶತ ನೀರಿನಿಂದ ಆವೃತವಾಗಿದೆ. ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದಲ್ಲಿ ಎಲ್ಲರೂ ಶತಾಯುಷಿಗಳಾಗಿ ಬಾಳಲು ಸಾಧ್ಯವಾದಿತು. ಸೋ ನೀರನ್ನು ಚೆನ್ನಾಗಿ ಕುಡಿಯಿರಿ! ಮತ್ತು ಆಹಾರವನ್ನು ಅವಶ್ಯಕತೆಯಿರುವಷ್ಟೇ ತಿನ್ನಿರಿ!!.

“ಸರ್ವೇ ಜನಾ ಸುಖಿ ನೋ ಭವಂತು”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top