ದೇವರು

ಶಿವನ ಬಗ್ಗೆ ಎಲ್ಲರಿಗು ಚೆನ್ನಾಗಿ ಗೊತ್ತು ಆದ್ರೆ ಶಿವನ ತಂಗಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು ? ಓದಿದ್ಮೇಲೆ ಒಂದೇ ಕೊಡೆಯ ಕೆಳಗೆ ಇಬ್ಬರು ಹೆಂಗಸರು ಇರಲ್ಲ ಅಂತ ಅಂದೇ ಅಂತೀರಾ

ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನ ಸೋದರಿಯ ಬಗ್ಗೆ ತಿಳಿಯಿರಿ.

 

ಶಿವನು ತ್ರಿಮೂರ್ತಿಗಳಲ್ಲಿ ಒಬ್ಬ. ಸೃಷ್ಟಿ, ಸ್ಥಿತಿ, ಲಯ, ಕಾರಕದಲ್ಲಿ ಇವರು ಕೊನೆಯವರು. ಅಂದರೆ ಎಲ್ಲವನ್ನೂ ತನ್ನಲ್ಲಿ ಲಯ ಮಾಡಿಕೊಳ್ಳುವವನು (ಬೆರೆಸಿಕೊಂಡು) ಎಂದರ್ಥ.

ಇನ್ನೂ ಶಿವನನ್ನು ಭಕ್ತರು ಬೋಳ ಶಂಕರ, ಭೋಲೇನಾಥ,ಮಹಾದೇವ  ಎಂದು ಸಹ ಭಕ್ತಿಯಿಂದ ಕರೆಯುತ್ತಾರೆ. ಯಾಕೆಂದರೆ ಕೇಳಿದ್ದನ್ನು ಕೂಡಲೇ ಶಿವನು  ಕರುಣಿಸುತ್ತಾನೆಂದು ಭಕ್ತರ ನಂಬಿಕೆ.

 

 

ಪುರಾಣಗಳಲ್ಲಿ ಬಹಳ ಮಂದಿ ಶಿವನಿಗಾಗಿ ತಪಸ್ಸನ್ನು ಮಾಡಿ ವರ ಪಡೆದವರು ಇದ್ದಾರೆ. ಆದರೆ ಈಗ ಅಸಲಿ ವಿಷಯ ಏನೇಂದರೆ ಶಿವನಿಗೆ ಒಬ್ಬ ತಂಗಿ ಸಹ ಇದ್ದಾಳೆ ……ಗೊತ್ತಾ ? ಹೌದು ನೀವು ಕೇಳಿದ್ದು ನಿಜ ಇದೆ. ಶಿವನಿಗೆ ಒಬ್ಬಳು ತಂಗಿ ಇದ್ದಾಳೆ. ಆಕೆಯ ಹೆಸರು ದೇವಿ ಆಶಾವರಿ ಆಕೆಯ ಬಗ್ಗೆ ಈಗ ತಿಳಿದುಕೊಳ್ಳೋಣ….

ಶಿವನು ಪಾರ್ವತಿಯನ್ನು ಮದುವೆಯಾಗಿ ಕೈಲಾಸಕ್ಕೆ ಬಂದು ಅಲ್ಲೇ ನೆಲೆಸುತ್ತಾನೆ. ಆದರೆ ಅಲ್ಲಿ ಎಲ್ಲರೂ ಗಂಡಸರೇ ಇರುತ್ತಿದ್ದರು. ಅವರೆಲ್ಲರೂ ಪಾರ್ವತಿಯನ್ನು ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಿದ್ದರು. ಆಕೆಗೆ ಎಲ್ಲಾ ಸೇವೆಗಳನ್ನು ಮಾಡುತ್ತಿದ್ದರು. ಆದರೆ ಕೈಲಾಸದಲ್ಲಿ ಹೆಂಗಸರು ಇಲ್ಲದ ಕಾರಣ ಪಾರ್ವತಿ ದೇವಿಗೆ ಜೊತೆಗೆ ಯಾರಾದರೂ ಒಬ್ಬರು ಮಹಿಳೆಯರು ಇದ್ದರೆ ಚೆನ್ನಾಗಿರುತ್ತದೆ ….ಎ೦ದು

 

 

ಇದರಿಂದ ಶಿವನನ್ನು ಪಾರ್ವತಿ ಬೇಡಿಕೊಂಡಳು. ಆಗ ಶಿವನು ತನ್ನಂತೆಯೇ ಇರುವ ಆಶಾವರಿಯನ್ನು ಸೃಷ್ಟಿಸಿದನು. ದೇವಿ ಆಶಾವರಿ ಶಿವನಂತೆ ಹುಲಿಯ ಚರ್ಮ ಧರಿಸಿರುತ್ತಾಳೆ,ಕೂದಲು ಬಿಟ್ಟುಕೊಂಡು ಇರುತ್ತಾಳೆ, ಕಾಲುಗಳು ಹೊಡೆದಿರುತ್ತದೆ. ಆದರೂ ಪಾರ್ವತಿ ಸಂತೋಷದಿಂದ ಇವಳನ್ನು ಮನೆಗೆ ಕರೆದುಕೊಂಡು ಬಂದಳು.

ಆದರೆ ನಿಜವಾಗಿ ದೇವಿ ಅಶಾವರಿಯ ವೇಷ ಭೂಷಣ ಅಷ್ಟು ಚೆನ್ನಾಗಿರಲ್ಲ. ಹಾಗೆ ಪಾರ್ವತಿ ದೇವಿಯು ಆಕೆಯನ್ನು ಸುಂದರವಾಗಿ ಅಲಂಕರಿಸುತ್ತಾಳೆ. ಆದರೆ ಆಶಾವರಿಗೆ ಹಸಿವು ಜಾಸ್ತಿ. ಇದರಿಂದ ಪಾರ್ವತಿ ಕೈಲಾಸದಲ್ಲಿನ ಆಹಾರವನ್ನೆಲ್ಲಾ ಆಕೆಗೆ ತಂದಿಡುತ್ತಾಳೆ. ಆದರೂ ಆಶಾವರಿ ದೇವಿಗೆ ತೃಪ್ತಿಯಾಗುವುದಿಲ್ಲ . ಇದರಿಂದ ಪಾರ್ವತಿಯು ಬೇಸರ ಮಾಡಿಕೊಳ್ಳುತ್ತಾಳೆ. ತನ್ನ ಗೋಳನ್ನು ಶಿವನಿಗೆ ಹೇಳುತ್ತಾಳೆ.ಹಾಗಾಗಿ ಶಿವನು ಆಶಾವರಿಯನ್ನು ಅಲ್ಲಿಂದ ಬೇರೆ ಕಡೆಗೆ ಕಳುಹಿಸುತ್ತಾಳೆ. ಇದಿಷ್ಟು ಶಿವನ ಸಹೋದರಿಯ ಕಥೆ.

 

 

ಆಗ ಪಾರ್ವತಿಯೊಂದಿಗೆ  ಶಿವನು ಹೇಳುತ್ತಾನಂತೆ. ಒಂದೇ ಕೊಡೆಯ ಕೆಳಗೆ ಇಬ್ಬರು ಹೆಂಗಸರು ಯಾವಾಗಲೂ ಇರುವುದಿಲ್ಲ ಎಂದು. ಹಾಗಾಗಿಯೇ ಇಬ್ಬರೂ ದೂರವಾಗಬೇಕಾಯಿತು ಎನ್ನುತ್ತಾನೆ. ಶಿವನು ಹೇಳಿರುವ ಪ್ರಕಾರ  ಈಗಲೂ ಸಹ ಕೆಲವು ಮನೆಗಳಲ್ಲಿ ಇದೇ ರೀತಿ ಇರುತ್ತದೆ. ಅಲ್ಲವೇ……  ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top