fbpx
ಭವಿಷ್ಯ

ನವೆಂಬರ್ 12 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 12 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೧೨ ನವೆಂಬರ್ ೨೦೧೭
ಸೂರ್ಯೋದಯ : ೦೬:೨೦
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ನವಮೀ
ನಕ್ಷತ್ರ : ಮಖಾ
ಯೋಗ : ಇಂದ್ರ
ಪ್ರಥಮ ಕರಣ : ಗರಜ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೦೯:೧೦ – ೧೦:೪೫

ರಾಹು ಕಾಲ: ೧೬:೨೧ – ೧೭:೪೬
ಗುಳಿಕ ಕಾಲ: ೧೪:೫೫ – ೧೬:೨೧
ಯಮಗಂಡ: ೧೨:೦೩ – ೧೩:೨೯

 

ಮೇಷ (Mesha)

ದಿನ ಮಾಡುವ ಕೆಲಸ ಕಾರ್ಯಗಳಲ್ಲಿನ ಉದಾಸೀನತೆಯಿಂದಾಗಿ ಕಾರ್ಯಗಳು ಸರಿಯಾದ ಸಮಯಕ್ಕೆ ಮುಗಿಯುವುದಿಲ್ಲ. ಶಾರೀರಿಕ ಪೀಡೆ ಆರೋಗ್ಯದ ಕಡೆ ಗಮನ ಹರಿಸಿ.

 

 

ವೃಷಭ (Vrushabha)

ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಹತ್ವದ ಪತ್ರ ನಿಮ್ಮ ಕೈ ಸೇರುವುದು. ಧಾರ್ಮಿಕ ಕಾರ್ಯದಲ್ಲಿ ತೊಡಗುವಿರಿ. ಉದ್ಯೋಗ-ದಂಧೆಗಳಲ್ಲಿ ಉತ್ಕರ್ಷ ಕಂಡು ಬರುವುದು. ಆರ್ಥಿಕ ಸಮಸ್ಯೆ ಇರುವುದಿಲ್ಲ.

 

ಮಿಥುನ (Mithuna)

ಬಂಧು ಬಳಗದವರ ಭೇಟಿಯು. ಸಮಸ್ಯೆಗಳು ಬೇಗನೆ ಬಗೆಹರಿಯುವವು. ವ್ಯಾಪಾರ, ವ್ಯವಹಾರಗಳಲ್ಲಿ ಜನಾನುಕೂಲತೆ ದೈವಾನುಕೂಲತೆಯಿಮದ ಎಲ್ಲವೂ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.

 

ಕರ್ಕ (Karka)

ಬದಲಾವಣೆಯ ಗಾಳಿ ನಿಮಗೆ ವರವಾಗಿ ಪರಿಣಮಿಸಲಿದೆ. ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಒಳಿತಾಗುವುದು. ಮನೆಗೆ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.

ಸಿಂಹ (Simha)

ಗುರುವು ವ್ಯಯಸ್ಥಾನದಲ್ಲಿದ್ದು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯುಂಟಾಗುವುದು. ಕಷ್ಠ ಬಂದಿದೆಯೆಂದು ಕುಗ್ಗದಿರಿ. ಇಂದಿನ ದಿನವನ್ನು ಖುಷಿಯಿಂದ ಕಳೆಯುವಿರಿ. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ.

 

ಕನ್ಯಾರಾಶಿ (Kanya)

ನೀವು ಆಯೋಜಿಸುವ ಕಾರ್ಯಗಳು ಗುರುವಿನ ಅನುಗ್ರಹದಿಂದ ಯಶಸ್ಸಿನತ್ತ ಸಾಗುವವು. ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿರಿ. ತಪ್ಪು ಕಲ್ಪನೆಗಳನ್ನು ಮೊದಲು ಬಗೆಹರಿಸಿಕೊಳ್ಳಿ.

 

ತುಲಾ (Tula)

ಭರವಸೆಯ ವ್ಯವಹಾರದ ಅವಕಾಶವೊಂದರಿಂದ ಉತ್ತೇಜಿತರಾಗುವಿರಿ. ಅಮೂಲ್ಯ ವಸ್ತುವಿನ ಖರೀದಿ ವಿಕ್ರಿಯಿಂದ ಲಾಭ. ಉದ್ಯೋಗದಲ್ಲಿ ಕೀರ್ತಿ ಯಶಸ್ಸು. ಹೊಲ ಮನೆಗಳ ಸೌಖ್ಯ. ಉಳಿತಾಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ವೃಶ್ಚಿಕ (Vrushchika)

ದಿಢೀರನೆ ಪ್ರಯಾಣ ಯೋಗ ಕೂಡಿ ಬರುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು. ಆದಾಯ ಅಧಿಕ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಹನುಮಾನ್ ಚಾಲೀಸ್ ಪಠಿಸುವುದು ಕ್ಷೇಮಕರ.

 

ಧನು ರಾಶಿ (Dhanu)

ಹವಾಮಾನ ವೈಪರೀತ್ಯದಿಂದ ಶೀತ ಕೆಮ್ಮು ಕಫಗಳು ಕಾಡುವ ಸಾಧ್ಯತೆ. ಈ ದಿನದ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ದೇಹಕ್ಕೆ ವಿಶ್ರಾಂತಿ ಬೇಕೆನ್ನಿಸುವುದು

 

ಮಕರ (Makara)

ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಅಸಮಾಧಾನಕರ ಸಂಗತಿ ಸಾಲ ಹಾಗೂ ಕೈಗಡ ಕೊಟ್ಟವರ ಕಾಟ. ಶಾರೀರಿಕ ಎದುರಾಳಿಗಳಿಗೆ ಜಯ. ಸೂರ್ಯ ಕವಚ ಪಠಿಸಿ. ಗುರುವಿನ ಶುಭ ದೃಷ್ಠಿಯಿಂದ ಎಲ್ಲವೂ ಒಳಿತಾಗುವುದು.

 

ಕುಂಭರಾಶಿ (Kumbha)

ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ಆಗುವುದು. ಸ್ತ್ರೀ ಸುಖ, ಕೌಟುಂಬಿಕ ಜೀವನದಲ್ಲಿ ಸೌಹಾರ್ದಯುತ ನಡವಳಿಕೆ, ಆರೋಗ್ಯ ಉತ್ತಮ. ವ್ಯವಹಾರದಲ್ಲಿ ಅಧಿಕ ಲಾಭಾಂಶ. ನೌಕರಿ ವರ್ಗದವರಿಗೆ ಬದಲಾವಣೆ ಕಾಲ.

 

ಮೀನರಾಶಿ (Meena)

ಅಧಿಕ ತಿರುಗಾಟದಿಂದ ದೈಹಿಕ ಶ್ರಮ, ಮನೆಯ ಸದಸ್ಯರೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಳ್ಳಿ. ಮನೆಯ ಅಭಿವೃದ್ಧಿಗಾಗಿ ನಿಮ್ಮ ಸಮಯವನ್ನು ಮೀಸಲಿಡಿ. ಪ್ರತಿಫಲದ ಬಗ್ಗೆ ಯೋಚನೆ ಬೇಡ. ಪ್ರತಿಫಲ ನೆರಳಿನಂತೆ ನಿಮ್ಮನ್ನು ಹಿಂಬಾಲಿಸುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top