ಕಿರುತೆರೆ

ರಿಯಾಜ್ ಪಾಷಾ ಮಾಡಿರೋ ಸಾಧನೆಗಳನ್ನ ನೋಡಿದ್ರೆ ಈತ ನಿಜವಾಗ್ಲೂ ಸಾಮಾನ್ಯ ವ್ಯಕ್ತಿಯಲ್ಲ ಅಂತ ಅಂತೀರಾ ..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಿಯಾಜ್ ಪಾಷಾ ಮಾಡಿರೋ ಸಾಧನೆಗಳನ್ನ ನೋಡಿದ್ರೆ ಈತ ನಿಜವಾಗ್ಲೂ ಸಾಮಾನ್ಯ ವ್ಯಕ್ತಿಯಲ್ಲ ಅಂತ ಅಂತೀರಾ ..!

 

 

ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದ ಐದನೇ ಅವತರಣಿಕೆಯಲ್ಲಿ ವಿಶೇಷವೆಂಬಂತೆ ಸೆಲೆಬ್ರೆಟಿಗಳ ಜೊತೆ ಕಾಮನ್ ಮ್ಯಾನ್ ಗಳಿಗೂ ಅವಕಾಶ ನೀಡಲಾಗಿತ್ತು. ಅದರಂತೆ ಬಿಗ್ ಬಾಸ್ ಮನೆಗೆ 11 ಜನ ಸೆಲೆಬ್ರೆಟಿಗಳ ಜೊತೆ 6ಜನ ಸಾಮಾನ್ಯ ವ್ಯಕ್ತಿಗಳು ಎಂಟ್ರಿ ಕೊಟ್ಟಿದ್ದರು. ಸಾಮಾನ್ಯ ವ್ಯಕ್ತಿ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದ 6 ಜನ ಸಾಮಾನ್ಯರಲ್ಲಿ ರಿಯಾಜ್ ಪಾಷಾ ಕೂಡ ಒಬ್ಬರು.. ಆದರೆ ಸಾಮಾನ್ಯ ವ್ಯಕ್ತಿಯ ಕೋಟಾದಲ್ಲಿ ದಲ್ಲಿ ಬಂದಿರುವ ರಿಯಾಜ್ ಮಾಡಿರುವ ಸಾಧನೆಗಳು ಮಾತ್ರ ಅಸಾಮಾನ್ಯ.. ಮುಂದೆ ಓದಿ

 

 

ರಿಯಾಜ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, 92.7 ಬಿಗ್ FM ನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಪ್ರಾರಂಭಿಸಿದ ರಿಯಾಜ್ ನಂತರ TV ಕಾರ್ಯಕ್ರಮಗಳ ನಿರೂಪಕರಾಗಿ ಗುರುತಿಸಿಕೊಂಡು ಎಲ್ಲರ ಮನಸನ್ನ ಗೆದ್ದಿದ್ದರು. ಕನ್ನಡ,ಇಂಗ್ಲಿಷ್,ಉರ್ದು,ಹಿಂದಿ,ತೆಲುಗು,ತಮಿಳುಗಳನ್ನೊಳೊಗೊಂಡಂತೆ ಒಟ್ಟು ಆರು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ರಿಯಾಜ್ ತಮ್ಮ ಮಾತಿನ ಕಳೆಯ ಮೂಲಕ 1000 ಕ್ಕೂ ಹೆಚ್ಚು ಫ್ಯಾಮಿಲಿ ಈವೆಂಟ್ ಗಳನ್ನೂ ಮಾಡಿದ್ದಾರೆ.

 

 

ಹೆಚ್.ಪಿ. ತೊಷಿಬಾ, ಬ್ರಿಟಾನಿಯ ಗಳಂತಹ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳೇ ರಿಯಾಜ್’ರನ್ನೇ ನಿರೂಪಕನಾಗಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಆ ಕಾರ್ಯಕ್ರಮಗಳ ಮೂಲಕ ರಿಯಾಜ್’ಅವರು 2ಮಿಲಿಯನ್’ಗೂ ಹೆಚ್ಚು ಉದ್ಯೋಗಿಗಳ ಮನ ಗೆದ್ದಿದ್ದಾರೆ..ಇದುವರೆಗೆ ಈ ರೀತಿಯ 500ಕ್ಕೂ ಹೆಚ್ಚು ಷೋ ಗಳನ್ನೂ ನಡೆಸಿಕೊಟ್ಟಿದ್ದಾರೆ. ರಿಯಾಜ್ ಕೇವಲ ಭಾರತಕ್ಕಷ್ಟೇ ಸೀಮಿತವಾಗದೆ ವಿದೇಶಗಳಲ್ಲೂ ಮಿಂಚಿದ್ದಾರೆ ಚೀನಾ,ಅಮೇರಿಕ,ಆಸ್ಟ್ರೇಲಿಯಾ,ಮಲೇಷಿಯಾ ದಂತಹ ದೇಶಗಳಲ್ಲೂ ಇವರು ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

 

 

ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ರಿಯಾಜ್ ರ ಹೃದಯ ವಂತಿಕೆಯುಯನ್ನು ಎಲ್ಲರೂ ಮೆಚ್ಚಲೇಬೇಕು..ಕೇವಲ ಒಂದು ಸೀರಿಯಲ್ ಮಾಡಿದಾಕ್ಷಣ ಸೆಲೆಬ್ರೆಟಿ ಎಂಬಂತೆ ಸಾಮಾನ್ಯ ವ್ಯಕ್ತಿಗಳ ಮೇಲೆ ದರ್ಪ ತೋರಿಸುವ ಎಷ್ಟೋ ಜನ ಸೋಕಾಲ್ಡ್ ಸೆಲೆಬ್ರೆಟಿಗಳು ರಿಯಾಜ್ ನೋಡಿ ಕಲಿಯುವುದು ತುಂಬಾ ಇದೆ. ನಿಜ ಅನಿಸಿದ್ರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top