ಕಿರುತೆರೆ

ಬಿಗ್’ಬಾಸ್ ಸಮೀರ್ ಆಚಾರ್ಯ ಮಾಡಿರೋ ಸಾಧನೆಗಳನ್ನ ನೋಡುದ್ರೆ ಬೆಚ್ಚಿ ಬೀಳ್ತಿರಾ..?

ಬಿಗ್’ಬಾಸ್ ಸಮೀರ್ ಆಚಾರ್ಯ ಮಾಡಿರೋ ಸಾಧನೆಗಳನ್ನ ನೋಡುದ್ರೆ ಬೆಚ್ಚಿ ಬೀಳ್ತಿರಾ..?

 

 

ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದ ಐದನೇ ಅವತರಣಿಕೆಯಲ್ಲಿ ವಿಶೇಷವೆಂಬಂತೆ ಸೆಲೆಬ್ರೆಟಿಗಳ ಜೊತೆ ಕಾಮನ್ ಮ್ಯಾನ್ ಗಳಿಗೂ ಅವಕಾಶ ನೀಡಲಾಗಿತ್ತು. ಅದರಂತೆ ಬಿಗ್ ಬಾಸ್ ಮನೆಗೆ 11 ಜನ ಸೆಲೆಬ್ರೆಟಿಗಳ ಜೊತೆ 6ಜನ ಸಾಮಾನ್ಯ ವ್ಯಕ್ತಿಗಳು ಎಂಟ್ರಿ ಕೊಟ್ಟಿದ್ದರು. ಸಾಮಾನ್ಯ ವ್ಯಕ್ತಿ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದ 6 ಜನ ಸಾಮಾನ್ಯರಲ್ಲಿ ರಿಯಾಜ್ ಪಾಷಾ ಕೂಡ ಒಬ್ಬರು.. ಆದರೆ ಸಾಮಾನ್ಯ ವ್ಯಕ್ತಿಯ ಕೋಟಾದಲ್ಲಿ ದಲ್ಲಿ ಬಂದಿರುವ ಸಮೀರ್ ಆಚಾರ್ಯ ಮಾಡಿರುವ ಸಾಧನೆಗಳು ಮಾತ್ರ ಅಸಾಮಾನ್ಯ.. ಮುಂದೆ ಓದಿ

 

 

ಹುಬ್ಬಳ್ಳಿ ಮೂಲದ ಸಮೀರ್ ಆಚಾರ್ಯ ಅವರು ವಯಸ್ಸು 28. ಏಳನೇ ತರಗತಿವರೆಗೂ ಓದಿರುವ ಇವರು ನಂತರ 14 ವರ್ಷ ವಿದ್ಯಾಪೀಠದಲ್ಲಿ ಸಂಸ್ಕೃತದಾಳಿ ವಿವಿಧ ಶಾಸ್ತ್ರ-ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. “ಸಂಸ್ಕಾರ” ಎನ್ನುವ ಕಾರ್ಯಕ್ರಮಗಳನ್ನ ಪ್ರತಿ ಶಾಲೆ ಶಾಲೆಗೂ ಹೋಗಿ ಮಕ್ಕಳಲ್ಲಿ ನಮ್ಮ ದೇಶ ಮತ್ತು ಪೋಷಕರ ಮಹತ್ವದ ಬಗ್ಗೆ ಅರಿವು ಮೂಡಿಸೋ ಕಾರ್ಯಕ್ರಮ ಮಾಡ್ತಾರೆ. ಹುಬ್ಬಳ್ಳಿಯ ವಿಶ್ವೇಶ್ವರನಗರದಲ್ಲಿ ತಮ್ಮ ದೇವಸ್ಥಾನ ಹಾಗೂ ಸಂಸ್ಕಾರ ಟ್ರಸ್ಟ್, ಮನ್ಯು ಶಾಲೆಯನ್ನು ನಡೆಸುತ್ತಿದ್ದಾರೆ.

 

 

ಸುಮಾರು 200 ಶಾಲೆಗಳ ಮಕ್ಕಳನ್ನು ಮುಟ್ಟಿದ್ದಾರೆ.ಪ್ರತಿ ದಿನ ಸಂಜೆ ಮಕ್ಕಳಿಗಾಗಿ ಉಚಿತವಾಗಿ ಸಂಗೀತ, ಶ್ಲೋಕ, ಸಂಸ್ಕೃತ, ಧ್ಯಾನ ಸಮೀರ್ ಆಚಾರ್ಯ ದಂಪತಿ ಹೇಳಿಕೊಡುತ್ತಾರೆ. ಅವರ ಶಾಲೆಯ ಅಭಿವೃದ್ದಿಯ ನಿರ್ಧಾರ ಮತ್ತು ಯುವಕರಿಗೆ ಸಂಸ್ಕೃತಿಯ ವಿಚಾರವನ್ನು ತಿಳಿಸುವ ಉದ್ದೇಶದಿಂದಲೇ ಬಿಗ್’ಬಾಸ್ ಗೆ ಹೋಗಿದ್ದಾರೆ ಸಮೀರ್. ಇವರು ತಮ್ಮದೇ ಖರ್ಚಿನಲ್ಲಿ 500ಕ್ಕೂ ಹೆಚ್ಚು ಊರುಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಹಾಗೂ ಯುವಕರಿಗೆ ಧರ್ಮ,ಸಂಸ್ಕಾರಮತ್ತು ಶಾಸ್ತ್ರಗಳ ಬಗ್ಗೆ ಪಾಠ ಪ್ರವಚನಗಳನ್ನು ಮಾಡಿದ್ದಾರೆ..ಅಲ್ಲಿನ ಯುವಕರಳ್ಳಿ ದೇಶ ಭಕ್ತಿಯನ್ನು ಮೂಡಿಸಿ ಸೈನ್ಯಕ್ಕೆ ಸೇರಲು ಪ್ರೇರೇಪಿಸುತ್ತಾರೆ. ಇವರ ಕಾರ್ಯಕ್ಕೆ ಸ್ವತಃ ಅಣ್ಣ ಹಜಾರೆಯವರೇ ಮೆಚ್ಚಿಕೊಂಡು ಭೇಷ್ ಎಂದಿದ್ದಾರೆ.

 

 

ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಮೀರ್ ಆಚಾರ್ಯ ಹೃದಯ ವಂತಿಕೆಯುಯನ್ನು ಎಲ್ಲರೂ ಮೆಚ್ಚಲೇಬೇಕು..ಕೇವಲ ಒಂದು ಸೀರಿಯಲ್ ಮಾಡಿದಾಕ್ಷಣ ಸೆಲೆಬ್ರೆಟಿ ಎಂಬಂತೆ ಸಾಮಾನ್ಯ ವ್ಯಕ್ತಿಗಳ ಮೇಲೆ ದರ್ಪ ತೋರಿಸುವ ಎಷ್ಟೋ ಜನ ಸೋಕಾಲ್ಡ್ ಸೆಲೆಬ್ರೆಟಿಗಳು ಸಮೀರ್ ನೋಡಿ ಕಲಿಯುವುದು ತುಂಬಾ ಇದೆ. ನಿಜ ಅನಿಸಿದ್ರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

13 Comments

13 Comments

 1. Prasanna chandra gowda

  November 12, 2017 at 5:14 pm

  ನೀವು ಸರ್ ನಿಜವಾದ ಹೀರೊ…….

 2. R.S.Kulkarni. CUNSULTING ENGG.

  November 12, 2017 at 5:46 pm

  SUPER SUPER & SUPER

 3. D V Nagaraju

  November 12, 2017 at 7:24 pm

  Nijavaagiyu adbhuta kaarya .

 4. Mallikarjuna N

  November 12, 2017 at 8:01 pm

  He is pure Gold…. Kagan should be kicked out of the big boss house

 5. dsv rao

  November 12, 2017 at 11:16 pm

  Really great sameera achar ravare. You r doing good job to the uplift of society & nation all the bdst.
  Aralikattege jai.

 6. Ramachandra

  November 13, 2017 at 4:15 am

  Doing Nobel work that too going various school spending his own money and educating hundreds of people God bless him

 7. Babugowda

  November 13, 2017 at 7:56 am

  ಸೂಪರ್

 8. Radha Sampath Kumar

  November 13, 2017 at 9:37 am

  Thumba aaschrya Matttthu Santosha aagutthe

 9. Krishna

  November 13, 2017 at 11:30 am

  Being a common man good achivement, great super sir conrats.

 10. Geetha

  November 13, 2017 at 2:52 pm

  Ella nanage gottide anno hage aduva jagan idanna modalu nodbeku. Anna hajare avre nimge besh andamele innenu beku sameer acharya sir. Good luck

 11. chandra shekar

  November 13, 2017 at 3:32 pm

  Very pleased to know about ur activities Really excellent keep it up sir

 12. Raju

  November 14, 2017 at 9:06 pm

  Real hero
  Good character

 13. Venugopal

  November 19, 2017 at 8:07 am

  As so called remainig contest all are bangalore but sameer is uttara kannada others are purposely avoiding they donot like uttatkannada peoples this shows discrimination we like sameer

Leave a Reply

Your email address will not be published. Required fields are marked *

To Top