fbpx
ದೇವರು

ಈ 12 ದೇವಾಲಯಗಳ ವಿಜ್ಞಾನಿಗಳಿಗೂ ಭೇದಿಸಲು ಸಾಧ್ಯವಾಗದ ರಹಸ್ಯಗಳನ್ನು ತಿಳ್ಕೊಂಡ್ರೆ ಶಾಕ್ ಆಗ್ತೀರಾ !

ಈ ಹನ್ನೆರಡು ದೇವಾಲಯಗಳಲ್ಲಿ ವಿಜ್ಞಾನಿಗಳಿಗೂ ಸಹ ಇ೦ದಿಗೂ ರಹಸ್ಯವನ್ನು ಭೇದಿಸಲು ಸಾಧ್ಯವಾಗಿಲ್ಲ .

 

 

ಭಾರತದಲ್ಲಿ ಹಲವು ದೇವಾಲಯಗಳಿವೆ. ಅವುಗಳಲ್ಲಿ ನಿಗೂಢತೆಗಳನ್ನು ಒಳಗೊಂಡಿರುವ ದೇವಾಲಯಗಳು ಸಹ ಇವೆ .ಅವು ಹೆಚ್ಚಾಗಿ  ಆಶ್ಚರ್ಯವನ್ನು ಸಹ ಉಂಟುಮಾಡುತ್ತವೆ. ಒಂದೊಂದು ದೇವಾಲಯವೂ ಸಹ ಒಂದೊಂದು ವಿಶೇಷತೆಯನ್ನು ಒಳಗೊಂಡಿವೆ. ಅಂತಹ ಪುಣ್ಯ ಕ್ಷೇತ್ರಗಳು ನಮ್ಮ  ಭಾರತ ದೇಶದಲ್ಲಿವೆ. ಅವುಗಳ ವಿಶೇಷತೆ ಹಾಗೂ ನಿಗೂಢತೆಗಳನ್ನು ನಾವು ಸಹ ಇಂದು ತಿಳಿದುಕೊಳ್ಳೋಣ ಬನ್ನಿ …….

 

ತಪ್ಪೇರುಮಣ್ಣಲ್ಲೂರ.

ತಮಿಳುನಾಡಿನ ತಪ್ಪೇರುಮಣ್ಣಲ್ಲೂರನಲ್ಲಿರುವ  ಶಿವಾಲಯದಲ್ಲಿ ತುಂಬಾ ಆಶ್ಚರ್ಯಕರ ಘಟನೆಯೊಂದು ನಡೆಯಿತು.2010 ರಲ್ಲಿ ಒಂದು ದಿನ ಬೆಳಗ್ಗೆ ಅರ್ಚಕರು ದೇವಾಲಯದ ಬಾಗಿಲುಗಳನ್ನು ತೆಗೆದಾಗ … ಶಿವಲಿಂಗದ ಮೇಲೆ ಒಂದು  ನಾಗರ ಹಾವು ಇರುವುದನ್ನು ನೋಡಿದರು.

 

 

ನಂತರ ಹಾವು ಬಿಲ್ವ ಪತ್ರೆಗಳನ್ನು  ಬಾಯಿಯಿಂದ  ತ೦ದು ಶಿವನನ್ನು ಪೂಜಿಸಿತು. ಹಾವು ಹೀಗೆ ಮಾಡಿದ್ದೇಕೆ ? ಆ ಹಾವನ್ನು ಶಿವನೇ ಕಳುಹಿಸುತ್ತಾನೆಂದು ಇಂದಿಗೂ ಭಕ್ತರು ಸಹ ನಂಬುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ನಿಗೂಢತೆ ಮಾತ್ರ ಯಾರಿಂದಲೂ ಸಹ ಬೇಧಿಸಲು ಸಾಧ್ಯವಾಗಿಲ್ಲ.

 ಶನಿ ಸಿಂಗನಾಪುರ.

 

 

ಮಹಾರಾಷ್ಟ್ರದಲ್ಲಿರುವ ಈ ಒಂದು ಗ್ರಾಮದಲ್ಲಿ ಯಾವ ಮನೆಗೂ ಬಾಗಿಲುಗಳು ಇರುವುದಿಲ್ಲ.ಆದರೂ ಅಲ್ಲಿ ಕಳ್ಳತನ ನಡೆಯುವುದಿಲ್ಲ. ಕಳ್ಳತನ ಮಾಡಿದರೆ ಶನಿದೇವನು ಶನಿ ರೂಪದಲ್ಲಿ ಬಂದು ಶಿಕ್ಷಿಸುವನೆ೦ದು ಅಲ್ಲಿಯ ಭಕ್ತರ ನಂಬಿಕೆಯಾಗಿದೆ. ಮತ್ತೊಂದು ವಿಶೇಷವೇನೆಂದರೆ   ಅಲ್ಲಿ ಇರುವ ಹಣಕಾಸು ವ್ಯವಹಾರ ಮಾಡುವ ಬ್ಯಾಂಕುಗಳಿಗೂ ಸಹ ಬೀಗ ಹಾಕುವುದಿಲ್ಲವಂತೆ. ಶನಿ ಶಿಂಗನಾಪುರ ಶನಿದೇವನ ಮಹತ್ವವಿದು. ಇದು ಮಹಾರಾಷ್ಟ್ರದಲ್ಲಿ ನೆಲೆಸಿದೆ .

ಗುರುದ್ವಾರ.

 

 

ಪಂಜಾಬ್ ನಲ್ಲಿರುವ ಗುರುದ್ವಾರ್ ನಲ್ಲಿ ಅಚ್ಚರಿಗೊಳಿಸುವ ವಿಷಯವೊಂದು ಅಡಗಿದೆ. ಸಾಮಾನ್ಯವಾಗಿ ಮಾವಿನ ಮರದಲ್ಲಿ ಬೇಸಿಗೆಯಲ್ಲಿ ಮಾತ್ರವೇ ಮಾವಿನ ಕಾಯಿಗಳು ಬಿಡುತ್ತವೆ. ಆದರೆ ಇಲ್ಲಿರುವ ಮಾವಿನ ಮರದಲ್ಲಿ ಯಾವ ಕಾಲಕ್ಕೂ ಸಂಬಂಧವಿಲ್ಲದಂತೆ ಎಲ್ಲ ಋತುಗಳಲ್ಲಿಯೂ ಸಹ ಮಾವಿನ ಹಣ್ಣು ಬಿಡುತ್ತವೆ. ಇದು ಯಾರಿಗೂ ಅರ್ಥವಾಗದಂತಹ ಪ್ರಶ್ನೆಯಾಗಿಯೇ ಉಳಿದಿದೆ .

ಯಾಗಂಟಿ.

 

 

ಆಂಧ್ರಪ್ರದೇಶದ ಸುಪ್ರಸಿದ್ಧ ಕ್ಷೇತ್ರವಾದ ಯಾಗಂಟಿ ದೇವಾಲಯದಲ್ಲಿ ಇರುವ ನಂದಿ ವಿಗ್ರಹದ ನಿಗೂಢ ರಹಸ್ಯವೂ ಇಂದಿಗೂ ಸಹ ಬಯಲಾಗಿಲ್ಲ. ಮೊದಲು ಚಿಕ್ಕದಾಗಿದ್ದ ನಂದಿ ವಿಗ್ರಹವು ಕಾಲಕ್ರಮೇಣ ಬೆಳೆಯುತ್ತಾ ದೇವಾಲಯದ ಹೊರಾಂಗಣವನ್ನು ಆಕ್ರಮಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ.

ವಿಜ್ಞಾನಿಗಳು ಹೇಳುವಂತೆ ಆ ಕಲ್ಲು ಬೆಳೆಯುವ ಸ್ವಭಾವ ಉಳ್ಳದ್ದಾಗಿದೆ. ಇಪ್ಪತ್ತು ವರ್ಷಗಳಿಗೊಮ್ಮೆ ಒಂದು ಇಂಚಿನಷ್ಟು ಬೆಳೆಯುತ್ತಿರುತ್ತದೆ ಎನ್ನುತ್ತಾರೆ. ಆದರೆ ಯುಗಾಂತ್ಯದಲ್ಲಿ ಆ ನಂದಿ ಗುಟುರು ಹಾಕುತ್ತದೆ ಎಂಬುದು ಸಹ ಅಲ್ಲಿಯ ಭಕ್ತರ ನಂಬಿಕೆಯಾಗಿದೆ.

 ಲೇಪಾಕ್ಷಿ .

 

 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ  ಲೇಪಾಕ್ಷಿ ದೇವಸ್ಥಾನದ ಕಲ್ಲಿನ  ಸ್ತಂಭಗಳು ನಿಗೂಢ ರಹಸ್ಯವಾಗಿಯೇ ಉಳಿದಿವೆ. ಹದಿನಾರನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿರುವ ಕಲ್ಲಿನ ಸ್ತಂಬದ ಒಳಗಿನಿಂದ ಕಾಗದ ಅಥವಾ ಬಟ್ಟೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ಎಳೆದು ಕೊಳ್ಳಬಹುದು. ಆದರೆ ಸ್ತಂಭಕ್ಕೆ ನೆಲಕ್ಕೂ ಅಂತರವಿದ್ದು ಯಾವುದೇ ಆಧಾರವಿಲ್ಲದೆ ದೇವಾಲಯವನ್ನು ಆ ಕಂಬಗಳು ಹೊತ್ತು ನಿಂತಿವೆ.  ಆದರೆ ಯಾವುದೇ ಆಧಾರವಿಲ್ಲದೆ ದೇವಾಲಯವನ್ನು ಸ್ತಂಭವು ಹೇಗೆ ಹೊರುತ್ತಿದೆ ಎಂಬ ಈ ವಿಷಯವನ್ನು ಇಂದಿಗೂ ಸಹ ಯಾರೂ ಭೇದಿಸಲು ಸಾಧ್ಯವಾಗಿಲ್ಲ .

ದರ್ವೇಶ್ ದರ್ಗಾ.

 

 

ಪುಣೆಯಲ್ಲಿರುವ ದರ್ವೇಶ್ ದರ್ಗಾದಲ್ಲಿರುವ ತೊಂಬತ್ತು ಕೆಜಿಯ ಕಲ್ಲು ಪ್ರತ್ಯೇಕತೆಯನ್ನು  ಒಳಗೊಂಡು ಆಕರ್ಷಣೆಯಾಗಿದೆ. ಈ ಕಲ್ಲನ್ನು ಹನ್ನೊಂದು ಮಂದಿ ಒಟ್ಟಿಗೆ ಸೇರಿ ಕೇವಲ ಒಂದೇ ಬೆರಳಿನಿಂದ ಮೇಲೆತ್ತಬೇಕು. “ಹಜರತ್ ಕಮಾರ್  ಅಲೇದವೇರ್ಷ” ಎಂದು ಹೇಳುತ್ತಾ ಕಲ್ಲನ್ನು ಮೇಲೆತ್ತಬೇಕು. ಆಗ ಆ ಕಲ್ಲು  ಆರರಿಂದ ಹತ್ತು ಅಡಿ ಎತ್ತರಕ್ಕೆದ್ದು ಗಾಳಿಯಲ್ಲಿ ತೇಲುತ್ತಿರುತ್ತದೆ. ಇದು ಹೇಗೆ ಸಾಧ್ಯ ಎಂಬ ವಿಷಯ ಇಂದಿಗೂ ಸಹ ಯಾರಿಗೂ ತಿಳಿಯದೆ ರಹಸ್ಯವಾಗಿಯೇ ಉಳಿದಿದೆ.

 ತಂಜಾವೂರ್.

 

 

ಹನ್ನೊಂದನೇ ಶತಮಾನದಲ್ಲಿ ರಾಜರಾಜ ಬೋಳ ನಿರ್ಮಿಸಿದ ತ೦ಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ ಒಂದು ರಹಸ್ಯ ಅಡಗಿದೆ. ಆ ರಹಸ್ಯವೇ ನೆರಳು ಭೂಮಿಯ ಮೇಲೆ ಬೀಳುವುದನ್ನು ಇಂದಿಗೂ ಯಾರೂ ನೋಡಿಲ್ಲ. ಹಾಗೆಯೇ ದೇವಾಲಯ ನಿರ್ಮಾಣಕ್ಕೆ ಉಪಯೋಗಿಸಿರುವ ಗ್ರ್ಯಾನೆಟ್ ಅನ್ನು ಎಲ್ಲಿಂದ ತರಲಾಗಿದೆ ಎಂದು ಸಹ ತಿಳಿದಿಲ್ಲ. ಇಂತಹದ್ದೇ ಮತ್ತೊಂದು ದೇವಾಲಯವಿದೆ .

ಅದೇ ಪುರಿ ಜಗನ್ನಾಥ್ ದೇವಾಲಯ.

 

 

ಯಾವುದೋ ಸಮಯದಲ್ಲಿ ಪುರಿ ಜಗನ್ನಾಥ ದೇವಾಲಯದ ನೆರಳು ಕಾಣುವುದಿಲ್ಲ .ಈ ಕ್ಷೇತ್ರಕ್ಕೆ ಸಮೀಪದಲ್ಲೇ ಬಂಗಾಳ ಕೊಲ್ಲಿಯ ಸಮುದ್ರವಿದ್ದು ಸಮುದ್ರದ ಮೊರೆತ  ದೇವಾಲಯದ  ಸಿಂಹ ದ್ವಾರದವರೆಗೂ ಕೇಳಿಸುತ್ತದೆ. ಆದರೆ ದೇವಾಲಯದ ಒಳಗೆ ಕೇಳಿಸುವುದಿಲ್ಲ. ಅದರ ತಾಂತ್ರಿಕತೆ ಏನೆಂದು ಇಂದಿಗೂ ಸಹ ನಿಗೂಢವಾಗಿಯೇ ಉಳಿದಿದೆ .

ಸೊಲ್ಹಾಪುರ.

 

 

ನಾವು ಉಪಯೋಗಿಸುವ ಹಾಸಿಗೆ ಮತ್ತು  ಹೊದಿಕೆಗಳಿಗೆ ಹೆಸರು ವಾಸಿಯಾಗಿರುವ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಒಂದು ವಿಚಿತ್ರವಾದ ಗ್ರಾಮವಿದೆ.   ಈ ಗ್ರಾಮದಲ್ಲಿ ಹಾವುಗಳನ್ನು ಪೂಜಿಸುವುದು ರೂಢಿಯಲ್ಲಿದೆ ಇಲ್ಲಿ ಪ್ರತಿ ಮನೆಯಲ್ಲೂ ಸಹ ಹಾವು ಗಳಿಗೆಂದೇ ಒಂದು ಕೊಠಡಿ ಇರುತ್ತದೆ. ಪ್ರತಿ ಮನೆಯಲ್ಲೂ ಮನುಷ್ಯರು ಓಡಾಡುವ ಹಾಗೆ ಹಾವುಗಳು ಸಹ ಓಡಾಡುತ್ತಿರುತ್ತವೆ. ಹಾವುಗಳೆಂದರೆ  ನಮಗೆ ಭಯವಾಗುತ್ತದೆ. ಆದರೆ ಇಲ್ಲಿಯವರೆಗೂ ಅಲ್ಲಿ ಯಾರಿಗೂ ಹಾವು ಕಚ್ಚಿರುವ ನಿದರ್ಶನವಿಲ್ಲ.

 ಕಬೀಸಾ ಬಾಬಾ ದೇವಾಲಯ.

 

 

ಉತ್ತರ ಪ್ರದೇಶದ ಸೀತಾಪೂರ ಜಿಲ್ಲೆಯಲ್ಲಿರುವ ಕಬೀಸಾ ಬಾಬಾ ದೇವಾಲಯವೂ ವಿಚಿತ್ರವಾಗಿದ್ದು. ಅಲ್ಲಿ ದೇವರ ವಿಗ್ರಹವೂ ಇಲ್ಲ. ಅರ್ಚಕರು ಇರುವುದಿಲ್ಲ. 150 ವರ್ಷಗಳ ಹಿಂದೆ ನಿರ್ಮಾಣವಾದ ಈ ದೇವಾಲಯದಲ್ಲಿ ಒಬ್ಬ ಕಬೀಸ ಬಾಬಾ ಇರುತ್ತಾರೆ. ಅವರು ಸಾಯಂಕಾಲದ ಸಮಯದಲ್ಲಿ ಭಕ್ತರು ನೀಡುವ ಆಹಾರವನ್ನು  ಸೇವಿಸಿ ಭಕ್ತರ ಅನಾರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತಾರೆ ಎಂದು ಅಲ್ಲಿನ ಜನರು ನಂಬುತ್ತಾರೆ.

 ಅಮ್ರೋಹಾ

 

 

ಉತ್ತರಪ್ರದೇಶದ ಅಮ್ರೋಹಾ ಶರಬುದ್ದೀನ ಪಾವಿಲಾಯತ್  ಚೇಳುಗಳಿಗೆ ಪ್ರಸಿದ್ಧಿಯಾಗಿದೆ. ಈ ಪುಣ್ಯ ಕ್ಷೇತ್ರದ ಸುತ್ತಲೂ ಚೇಳುಗಳು ಕಾವಲಿರುತ್ತವೆ. ಈ ದೇವಾಲಯದ ಒಳಗಡೆಯೂ ಚೇಳುಗಳು ಸದಾ ಕಾಲ ಹರಿದಾಡುತ್ತಿರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಚೇಳುಗಳು ಹರಿದಾಡುತ್ತಿದ್ದರೂ ಸಹ ಯಾವ ಭಕ್ತರಿಗೂ ಕುಟುಕಿದ ಉದಾಹರಣೆಗಳು ಇಲ್ಲಿಯವರೆಗೂ ಇಲ್ಲ.

 ಮಿಸ್ಟರಿ ಮಮ್ಮಿ.

 

 

ಮತ್ತೊಂದು ವಿಚಿತ್ರ ನಮ್ಮ ಭಾರತದಲ್ಲಿದೆ. ಅದೂ ಸಹ ನಿಗೂಢವಾಗಿಯೇ ಉಳಿದಿದೆ. ಮಮ್ಮಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಈಜಿಪ್ಟ್ನಲ್ಲಿರುವ ಮಮ್ಮಿ.  ಆದರೆ ಹಿಮಾಚಲ ಪ್ರದೇಶದಲ್ಲಿರುವ ಗುಯು ಎಂಬ ಗ್ರಾಮದಲ್ಲಿ ಐನೂರು ವರ್ಷಗಳ ಹಿಂದಿನ ಮಮ್ಮಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ. ಸಂಗಾ ತೇನ್ಸಿಂಗ್ ಎಂಬ ಬೌದ್ಧ ಸನ್ಯಾಸಿಯ ಮಮ್ಮಿ ಕುಳಿತ ಭಂಗಿಯಲ್ಲಿದೆ. ಇಂದಿಗೂ ಸಹ ಅದರ ಕೂದಲು ಚರ್ಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top