ಕನ್ನಡ

ಕನ್ನಡಿಗರ ಕೋಪಕ್ಕೆ ಆನಂದ್ ದೊನ್ನೆ ಬಿರಿಯಾನಿ ಇವತ್ತು ಬಂದ್

ಕನ್ನಡದಲ್ಲಿ ಬೋರ್ಡ್ ಹಾಕಿ ಎಂದು ಹೇಳಿದ್ದಕ್ಕೆ ತಮಿಳಿಗನಿಂದ ಕನ್ನಡಿಗನ ಮೇಲೆ ಹಲ್ಲೆ.:ಕನ್ನಡಿಗರ ಕೋಪಕ್ಕೆ ಆನಂದ್ ದೊನ್ನೆ ಬಿರಿಯಾನಿ ಇವತ್ತು ಬಂದ್

 

 

ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ರೇನೇ ತಪ್ಪು ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಹೌದು ಎರಡು ದಿನಗಳ ಹಿಂದೆ ಕನ್ನಡದಲ್ಲಿ ಬೋರ್ಡ್ ಹಾಕಿ ಎಂದು ಹೇಳಿದ್ದಕ್ಕೆ ತಮಿಳು ಹೋಟೆಲ್ ನ ಮಾಲೀಕ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಾನೆ. ಮುಂದೆ ಓದಿ

 

 

ಕನ್ನಡದಲ್ಲಿ ಬೋರ್ಡ್ ಹಾಕಪ್ಪಾ ಅಂತ ಹೇಳಿದ್ದಕ್ಕೆ ಬಿರಿಯಾನಿ ಹೋಟೆಲ್ ಮಾಲೀಕ ಆನಂದ ಎಂಬಾತ ಪರಶುರಾಮ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಹೋಟೆಲ್ ಮೆನು ಸೇರಿದಂತೆ ಬೋರ್ಡ್ ಗಳೆಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಹಾಕಿದ್ದರಿಂದ ಕನ್ನಡ ಹಾಕಿ ಎಂದು ಕೇಳಿದ ಕನ್ನಡಿಗ ಪರಶುರಾಮ್ ಎಂಬಾತ ಮೇಲೆ ನಗರದ ಬನಶಂಕರಿಯಲ್ಲಿರುವ ಆನಂದ್ ಡೋನ್ ಬಿರಿಯಾನಿ ಹೋಟೆಲ್ ನ ಮಾಲೀಕ ಆನಂದ್ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದಾನೆ.

 

 

ಈ ಸಂಭಂದ ಜಯನಗರ ಪೊಲೀಸ್ ಸ್ಟೇಷನ್’ನಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರದ ಆದೇಶದ ಪ್ರಕಾರ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಮಾಡಬೇಕು ಆದರೆ ಈ ಹೋಟೆಲ್ ನಲ್ಲಿ ಒಂದು ಅಕ್ಷರ ಕೂಡ ಕನ್ನಡ ಬಳಕೆ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಅತಿಯಾಗುತ್ತಿರುವುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ದಯವಿಟ್ಟು ಇತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

 

 

ಕನ್ನಡ ಪರ ಸಂಘಟನೆಗಳು ಆನಂದ್ ದೊನ್ನೆ ಬಿರಿಯಾನಿ ಹೋಟೆಲ್ಲಿನ ಮುಂದೆ ಬಂದು ಹೋರಾಟ ಮಾಡಿದ್ದಕ್ಕೆ ಆ ಹೋಟೆಲ್ ಇವತ್ತು ಮುಚ್ಚಿದೆ. ಕೇಳಿದರೆ ಇಂದು ರಜೆ ಬಾಗಿಲು ತೆಗೆಯುದಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top