ಕನ್ನಡ

ಕನ್ನಡದಲ್ಲಿ ಬೋರ್ಡ್ ಹಾಕಿ ಎಂದು ಹೇಳಿದ್ದಕ್ಕೆ ತಮಿಳಿಗನಿಂದ ಕನ್ನಡಿಗನ ಮೇಲೆ ಹಲ್ಲೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕನ್ನಡದಲ್ಲಿ ಬೋರ್ಡ್ ಹಾಕಿ ಎಂದು ಹೇಳಿದ್ದಕ್ಕೆ ತಮಿಳಿಗನಿಂದ ಕನ್ನಡಿಗನ ಮೇಲೆ ಹಲ್ಲೆ.

 

 

ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ರೇನೇ ತಪ್ಪು ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಹೌದು ಎರಡು ದಿನಗಳ ಹಿಂದೆ ಕನ್ನಡದಲ್ಲಿ ಬೋರ್ಡ್ ಹಾಕಿ ಎಂದು ಹೇಳಿದ್ದಕ್ಕೆ ತಮಿಳು ಹೋಟೆಲ್ ನ ಮಾಲೀಕ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಾನೆ. ಮುಂದೆ ಓದಿ

 

 

ಕನ್ನಡದಲ್ಲಿ ಬೋರ್ಡ್ ಹಾಕಪ್ಪಾ ಅಂತ ಹೇಳಿದ್ದಕ್ಕೆ ಬಿರಿಯಾನಿ ಹೋಟೆಲ್ ಮಾಲೀಕ ಆನಂದ ಎಂಬಾತ ಪರಶುರಾಮ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಹೋಟೆಲ್ ಮೆನು ಸೇರಿದಂತೆ ಬೋರ್ಡ್ ಗಳೆಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಹಾಕಿದ್ದರಿಂದ ಕನ್ನಡ ಹಾಕಿ ಎಂದು ಕೇಳಿದ ಕನ್ನಡಿಗ ಪರಶುರಾಮ್ ಎಂಬಾತ ಮೇಲೆ ನಗರದ ಬನಶಂಕರಿಯಲ್ಲಿರುವ ಆನಂದ್ ಡೋನ್ ಬಿರಿಯಾನಿ ಹೋಟೆಲ್ ನ ಮಾಲೀಕ ಆನಂದ್ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದಾನೆ.

 

 

ಈ ಸಂಭಂದ ಜಯನಗರ ಪೊಲೀಸ್ ಸ್ಟೇಷನ್’ನಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರದ ಆದೇಶದ ಪ್ರಕಾರ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಮಾಡಬೇಕು ಆದರೆ ಈ ಹೋಟೆಲ್ ನಲ್ಲಿ ಒಂದು ಅಕ್ಷರ ಕೂಡ ಕನ್ನಡ ಬಳಕೆ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಅತಿಯಾಗುತ್ತಿರುವುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ದಯವಿಟ್ಟು ಇತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

2 Comments

2 Comments

  1. srinivaa

    November 12, 2017 at 10:58 am

    Alli Birayani thinnabedi.chaina guards Thara agali.

  2. Kannada premi

    November 13, 2017 at 9:13 am

    Just by 50 people we cannot change any thing, all Kannada followers should get together and take right full steps. Jai Karnataka mathe

Leave a Reply

Your email address will not be published. Required fields are marked *

To Top