ರಾಜಕೀಯ

ಟಿಪ್ಪು ಜಯಂತಿ ಆಚರಣೆ ಮಾಡೋ ಅವಶ್ಯಕತೆಯಾದ್ರೂ ಏನಿತ್ತು..?

ಟಿಪ್ಪು ಜಯಂತಿ ಆಚರಣೆ ಮಾಡೋ ಅವಶ್ಯಕತೆಯಾದ್ರೂ ಏನಿತ್ತು..?

 

 

ತೀವ್ರವಿರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿದ್ದು ಈಗ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಸಡಗರವಿಲ್ಲದೆ ಪೊಲೀಸ್ ಬಂದೋಬಸ್ತ್‌ನಲ್ಲಿ ಜಯಂತಿ ನಡೆಸಬೇಕಾಗಿದೆ. ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿಯನ್ನು ಆಚರಿಸಿಸುವುದು ಬೇಡ ಅದರ ಬದಲು ಅದ್ಬುಲ್ ಕಲಾಂ ಜಯಂತಿಯನ್ನ ಆಚರಣೆ ಮಾಡಿ ಎಂದು ಕೆಲವು ಸಂಘಟನೆಗಳು ಆಗ್ರಹಿಸಿದವು. ಟಿಪ್ಪು ಒಬ್ಬ ಮತಾಂಧ; ಸಂತ ಶಿಶುನಾಳ ಷರೀಪರ ಜಯಂತಿ ಮಾಡಿ, ಅಬ್ದುಲ್ ಕಲಾಂ,ಮಿರ್ಜಾಇಸ್ಮಾಯಿಲ್ ಜಯಂತಿಮಾಡಿ, ಟಿಪ್ಪು ಖಡ್ಗತಂದವ ದೇಶ ಬಿಟ್ಟು ದಿವಾಳಿಯಾದವರ ಜಯಂತಿ ಮಾಡಬೇಡಿ ಎಂದು ಸಂಘಟನೆಗಳು ಹೇಳಿದ್ದವು.

 

 

 

ಟಿಪ್ಪು ಜಯಂತಿ ಆಚರಣೆ ವೇಳೆ ಹಿಂಸಾಚಾರ ನಡೆಯದಂತೆ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಿತ್ತು. ಒಂದು ಜಯಂತಿಯನ್ನು ಇಷ್ಟೊಂದು ಬಂದೋಬಸ್ತ್ ನಲ್ಲಿ ಆಚರಣೆ ಮಾಡುವ ಅವಶ್ಯಕತೆಯಾದರೂ ಏನಿತ್ತು. ನಿಷೇಧಾಜ್ಞೆಯ ಹೊರತಾಗಿಯೂ ಟಿಪ್ಪು ಜಯಂತಿಯ ವಿರುದ್ಧ ಭಾರೀ ಪ್ರತಿಭಟನೆಗಳನ್ನು ನಡೆಸಲಾಗಿದೆ.

 

 

 

ಟಿಪ್ಪು ಜಯಂತಿ ಬಗ್ಗೆ ಪರ ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಕಾಣಸಿಗುತ್ತಿವೆ. ಟಿಪ್ಪು ಬಗ್ಗೆ ತುಂಬಾ ವಿರೋಧವಿದೆ. ಟಿಪ್ಪು ಮತಾಂತರ ಮತ್ತು ಹಿಂದು ವಿರೋಧಿ ಎಂದು ಕೆಲವರು ಹೇಳುತ್ತಿದ್ದಾರೆ. ಟಿಪ್ಪು ಜಯಂತಿ ಬದಲು ಬದಲು A.P.J.ಅಬ್ದುಲ್ ಕಲಾಂ, ಸ್ವತಂತ್ರ ಹೋರಾಟಗಾರ ಮೌಲಾನ ಅಬ್ದುಲ್ ಕಲಾಂ ಆಜ಼ಾದ್ ರದ್ದೋ ಆಚರಣೆ ಮಾಡಿದ್ದರೆ ಹಿಂದೂಗಳೂ ಆಚರಣೆ ಮಾಡುತ್ತಿದ್ದರು. ಮುಸ್ಲಿಂ ಜನರು ಖುಷಿ ಆಗ್ಬೇಕು,ಹಿಂದುಗಳಿಗೂ ನೋವಾಗ್ಬಾರ್ದು ಎಂದರೆ ಟಿಪ್ಪು ಜಯಂತಿ ಬಿಟ್ಟು ಅವರ ಜಯಂತಿ ಮಾಡಬೇಕಿತ್ತು. ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆಯ ವಿರುದ್ಧ ಇಷ್ಟೊಂದು ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರ ಆಚರಿಸಲು ಹೊರಟಿರುವುದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top