fbpx
ಕನ್ನಡ

ಕಾವೇರಿ , ಕನ್ನಡ , ಜಿಎಸ್‍ಟಿ , ಡಬ್ಬಿಂಗ್ ಬಗ್ಗೆ ಸಕ್ಕತ್ತಾಗಿ ಮಾತಾಡಿದ್ದಾರೆ ಪ್ರಕಾಶ್ ರೈ , ಇದನ್ನು ಕೇಳಿ ಭೇಷ್ ಎಂದರು ವೀಕ್ಷಕರು !

ಕಾವೇರಿ , ಕನ್ನಡ , ಜಿಎಸ್‍ಟಿ , ಡಬ್ಬಿಂಗ್ ಬಗ್ಗೆ ಸಕ್ಕತ್ತಾಗಿ ಮಾತಾಡಿದ್ದಾರೆ ಪ್ರಕಾಶ್ ರೈ , ಇದನ್ನು ಕೇಳಿ ಭೇಷ್ ಎಂದರು ವೀಕ್ಷಕರು !

ನೆನ್ನೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಹುಭಾಷಾ ತಾರೆ ಪ್ರಕಾಶ್ ರಾಜ್ ಕಾವೇರಿ ನೀರಿನ ವಿವಾದ ಬಗ್ಗೆಯು ಮಾತನಾಡಿದರು ,

ಕಾವೇರಿ ಭಾಗದಲ್ಲಿರುವ ಕಾಡನ್ನು ಕಾಪಾಡಿ !

ಎರಡು ರಾಜ್ಯಗಳಲ್ಲಿ ಪರಸ್ಪರ ಸಂಘರ್ಷ ಹುಟ್ಟು ಹಾಕಿ ಇಬ್ಬರು ಜಗಳ ಆಡಿಕೊಂಡರೆ ಕೊನೆಗೆ ನೀರೇ ಇರುವುದಿಲ್ಲ ರೈತರ ರಾಜ್ಯದ ಅನೇಕ ಸಮಸ್ಯೆಗಳಿಗೆ ಸರ್ಕಾರಗಳು ಸೂಕ್ತ ಕ್ರಮ ಜರುಗಿಸಬೇಕು , ಈ ಎಲ್ಲ ವಿಷಯದ ಬಗ್ಗೆ ನಟನಾಗಿ ಹೇಳಿಕೆ ಕೊಟ್ಟ ಮಾತ್ರಕ್ಕೆ ಸರಿ ಹೋಗುವುದಿಲ್ಲ .ಎಲ್ಲ ವಿಷಯಗಳನ್ನು ಒಂದೇ ಬಾರಿಗೆ ಬಗೆಹರಿಸಲು ಆಗುವುದಿಲ್ಲ .

ಇದು ರೈತರ ಸ್ವಾಭಿಮಾನದ ಪ್ರಶ್ನೆ ಭೂಮಿಗಳು ಬರುಡಾಗುತ್ತಿವೆ , ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ , ಕಾವೇರಿ ಸಮಸ್ಯೆ ಇಷ್ಟು ದೊಡ್ಡದಾಗಿ ಬೆಳೆಯಬೇಕಾದರೆ ಇದಕ್ಕೆ ರಾಜಕೀಯ ವ್ಯವಸ್ಥೆ ಕಾರಣ , ನನ್ನ ಬಗ್ಗೆ ಕಾಂಟ್ರವರ್ಸಿ ಹುಟ್ಟಿಸುವಂತಹ ಹೇಳಿಕೆ ನೀಡಬೇಕೆಂದು ಬಯಸುವವರಿಗೆ ನಾನು ಆಹಾರವಾಗಲಾರೆ .
ಕಾವೇರಿ ಭಾಗದಲ್ಲಿರುವ ಕಾಡನ್ನು ಕಾಪಾಡಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಕಾವೇರಿ ನೀರೇ ಇಲ್ಲದಂತಾಗುತ್ತದೆ.

ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಬೇಕು , ಅನಾವಶ್ಯಕವಾಗಿ ಭಾವನಾತ್ಮಕ ವಿಷಯ ಮಾಡಿ ಗೊಂದಲ ಮೂಡಿಸುವುದು ಸರಿಯಲ್ಲ

ತಾಯಿ ಭಾಷೆಗೆ ಮೊದಲ ಆದ್ಯತೆ

 

 

ತಾಯಿ ಭಾಷೆಗೆ ಮೊದಲ ಆದ್ಯತೆ ಸಿಗಬೇಕು , ಕರ್ನಾಟಕಕ್ಕೆ ಕನ್ನಡ ಸಾರ್ವಭೌಮ ಇದರಲ್ಲಿ ಎರಡು ಮಾತಿಲ್ಲ , ಕನ್ನಡ ಸಿನಿಮಾ ಉಳಿಸಿಕೊಳ್ಳುವ ಪ್ರಯತ್ನ ಸಾಕಷ್ಟು ನಡೆಯುತ್ತಲೇ ಇದೆ , ಭಾಷೆ ಬಳಕೆಗೆ ಉಪಯೋಗಿಸಬೇಕು .

 

ಜಿ .ಎಸ್.ಟಿ ಹೇಗೆ ಮಾಡಿದರೆ ಸರಿ

ಜಿಎಸ್‍ಟಿ ಬಗ್ಗೆ ತಮಿಳಿನ ವಿಜಯ್ ಹೇಳಿಕೆ ಕೊಟ್ಟಿದ್ದರು ಅದನ್ನೇ ವಿವಾದ ಮಾಡಿ ಆತನ ಧರ್ಮವನ್ನು ಅವಹೇಳನ ಮಾಡಲಾಯಿತು , ಎಲ್ಲ ಪಕ್ಷಗಳು ಅಂಗೀಕಾರ ಮಾಡಿದ ಮೇಲೆ ಜಿಎಸ್‍ಟಿ ಜಾರಿಗೆ ತಂದದ್ದು ಆದರೆ ಕೆಲವು ಭಾವನಾತ್ಮಕ ವಿಷಯಗಳನ್ನು ವೃತ್ತಿಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು , ಕೆಲವು ಕರ ಕುಶಲ ವಸ್ತುಗಳು ಹಾಗು ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳ ಮೇಲೆ ತೆರಿಗೆ ಹೇರುವುದು ಸಲ್ಲದು , ಕುಂಬಾರಿಕೆ, ನೇಯ್ಗೆ, ಜೇನು ಉತ್ಪಾದನೆ ಇವೆಲ್ಲವೂ ಅತಿ ಹೆಚ್ಚಿನ ಲಾಭಗಳನ್ನು ತಂದುಕೊಡವು ಇವು ಕೇವಲ ಬದುಕಿಗೆ ಒಂದೊತ್ತಿನ ಊಟ ಒದಗಿಸುತ್ತವೆ ಅಷ್ಟೇ ಇಂತವು ಗಳನ್ನೂ ಜಿಎಸ್‍ಟಿಯಿಂದ ದೂರವಿಡಬೇಕು .

ಡಬ್ಬಿಂಗ್ ವಿರೋಧಿಸುವುದು ಸರಿಯಲ್ಲ

ಡಬ್ಬಿಂಗ್‍ ಸಿನಿಮಾಗೆ ವಿರೋಧಗಳು ವ್ಯಕ್ತವಾಗುತ್ತಿದೆ , ಕಾನೂನೇ ಡಬ್ಬಿಂಗ್ ಒಪ್ಪಿಕೊಂಡಿದೆ ಆದ್ದರಿಂದ ಡಬ್ಬಿಂಗ್ ವಿರೋಧಿಸಲು ಸಾಧ್ಯವಿಲ್ಲ , ಕನ್ನಡದಲ್ಲಿ ಸಾಧಾಭಿರುಚಿಯ ಹೊಸ ಚಿತ್ರಗಳು ಮೂಡಿ ಬರುತ್ತಿವೆ , ಕನ್ನಡ ಸಿನಿಮಾಗಳು ಎಲ್ಲರನ್ನು ಸೆಳೆಯುತ್ತಿವೆ , ನಾನು ಯಾವುದೇ ಕಾರಣಕ್ಕೂ ಚಿತ್ರರಂಗದಿಂದ ದೂರ ಉಳಿಯುವುದಿಲ್ಲ , ನಾನು ಪ್ರಾಮಾಣಿಕ ಹಾಗಿರುವಾಗ ಯಾರಿಗೆ ಹೆದರಬೇಕು ?

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top