fbpx
ಮನೋರಂಜನೆ

ಸಂಯುಕ್ತ-2 ಚಿತ್ರ ವೀಕ್ಷಿಸಲಿದ್ದಾರೆ ರಿಯಲ್ ಹೀರೋಗಳು! ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ನೈಜ ಕಾಳಜಿಗೆ ಮೆಚ್ಚಲೇಬೇಕು !

ಹಾರರ್ ಕಥನದ ಜೊತೆ ಜೊತೆಗೇ ದೇಶಪ್ರೇಮದ ಕಥೆ ಹೇಳೋ ಸಂಯುಕ್ತ-೨ ಚಿತ್ರ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕರ ಕಡೆಯಿಂದ ಕೇಳಿ ಬರುತ್ತಿರೋ ಸಕಾರಾತ್ಮಕ ಪ್ರತಿಕ್ರಿಯೆ, ಬಾಕ್ಸಾಫೀಸ್‌ನಲ್ಲಿ ಅಚ್ಚರಿ ಮೂಡಿಸೋವಂಥ ಕಲೆಕ್ಷನ್ ಜಾರಿಯಲ್ಲಿರೋವಾಗಲೇ ಈ ಚಿತ್ರವನ್ನು ನಾಳೆ ರಿಯಲ್ ಹೀರೋಗಳೇ ವೀಕ್ಷಿಸಲಿದ್ದಾರೆ!

 

 

ಯೋಧರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಲೇ ಚೆಂದದ ಸಂದೇಶ ಸಾರೋ ಈ ಚಿತ್ರವನ್ನು ನಾಳೆ ಸಂಜೆ
(ಸೋಮವಾರ) ೪ ಘಂಟೆಗೆ ಮಂತ್ರಿ ಮಾಲ್‌ನ ಐನಾಕ್ಸ್‌ನಲ್ಲಿ ಯೋಧರೇ ವೀಕ್ಷಿಸಲಿದ್ದಾರೆ!

ಈ ಮೂಲಕ ನಿಜಕ್ಕೂ ಚಿತ್ರ ನಿರ್ಮಾಪಕರಾದ ಡಾ. ಮಂಜುನಾಥ್ ಮತ್ತು ನಿರ್ದೇಶಕ ಅಭಿರಾಮ್ ಅವರ ನೈಜ ಕಾಳಜಿ ಸಾರ್ಥಕ ಕಂಡಂತಾಗಿದೆ. ಈ ಚಿತ್ರದಲ್ಲಿ ರಿಯಲ್ ಹೀರೋಗಳೆಂದೇ ಗೌರವಕ್ಕೆ ಪಾತ್ರರಾಗಿರೋ ಯೋಧರು ಅನುಭವಿಸೋ ರಿಯಲ್ ಸಂಕಷ್ಟಗಳನ್ನು ಮನ ಮುಟ್ಟುವಂತೆ ತೋರಿಸಲಾಗಿದೆ. ಈ ಮೂಲಕ ದೇಶ ಕಾಯಲು ಯೋಧರು ಏನೇನು ಕಷ್ಟ ಅನುಭವಿಸುತ್ತಾರೆಂಬ ವಿಚಾರವನ್ನು ಅನಾವರಣಗೊಳಿಸಲಾಗಿದೆ.

 

ನಾಳೆ ಈ ದೃಷ್ಯಾವಳಿಗಳನ್ನು ರಿಯಲ್ ಯೋಧರೇ ಕಣ್ತುಂಬಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top