fbpx
ಮನೋರಂಜನೆ

ಮತ್ತೆ ಕನ್ನಡ ಚಿತ್ರದ ಹೀರೋಯಿನ್ ಆಗಿ ಅಮೃತವರ್ಷಿಣಿ ‘ಸುಹಾಸಿನಿ’

ಮತ್ತೆ ಕನ್ನಡ ಚಿತ್ರದ ಹೀರೋಯಿನ್ ಆಗಿ ಅಮೃತವರ್ಷಿಣಿ ‘ಸುಹಾಸಿನಿ’

 

 

ಅಂಬರೀಷ್ ಮತ್ತು ಸುಹಾಸಿನಿ 19 ಡಿಸೆಂಬರ್ 2003 ರಲ್ಲಿ ತೆರೆಕಂಡ ‘ಅಣ್ಣಾವ್ರು’ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು ಈ ಚಿತ್ರದಲ್ಲಿ ದರ್ಶನ್ ಕೂಡ ಅಭಿನಯಿಸಿದ್ದರು , ಸರಿ ಸುಮಾರು 14 ವರ್ಷಗಳ ನಂತ್ರ ಒಂದೇ ಸಿನೆಮಾಗೆ ಬಣ್ಣ ಹಚ್ಚುತ್ತಿದ್ದಾರೆ .ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್ ಈ ಚಿತ್ರ ‘ಅಂಬಿ ನಿಂಗೆ ವಯಸ್ಸಾಯ್ತೋ’.

 

 

ತಮಿಳಿನ ರಾಜ್‌ಕಿರಣ್ ಈ ಚಿತ್ರದಲ್ಲಿ ನಾಯಕರಾಗಿ ಅಭಿನಯ ಮಾಡಿದ್ದರು ಈ ಚಿತ್ರಕ್ಕೆ ರೇವತಿ ನಾಯಕಿಯಾಗಿದ್ದರು ಆಗಿನ ಈ ಚಿತ್ರ ಸೂಪರ್ ಹಿಟ್ ಆಗಿತ್ತು ಈಗ ಅದೇ ಚಿತ್ರವನ್ನು ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್ ನ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ , ಅಂಬರೀಷ್ ರವರ ಚಿಕ್ಕ ವಯಸ್ಸಿನ ಪಾತ್ರವನ್ನು ಸುದೀಪ್ ಮಾಡುತ್ತಿದ್ದಾರೆ .

 

 

ಅಂಬರೀಶ್ ಅವರಿಗೆ ಈ ಚಿತ್ರವನ್ನು ಮಾಡಲು ರಜಿನಿ ಕಾಂತ್ ಪ್ರೇರಣೆ ನೀಡಿದ್ದರಂತೆ , ಸುದೀಪ್ ರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಗುರುದತ್ ಗಾಣಿಗ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು , ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top