fbpx
ಭವಿಷ್ಯ

ನವೆಂಬರ್ 13 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 13 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

 

ಸೋಮವಾರ, ೧೩ ನವೆಂಬರ್ ೨೦೧೭
ಸೂರ್ಯೋದಯ : ೦೬:೨೦
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ದಶಮೀ
ನಕ್ಷತ್ರ : ಹುಬ್ಬ
ಯೋಗ : ವೈಧೃತಿ
ಪ್ರಥಮ ಕರಣ : ವಿಷ್ಟಿ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೨೯:೧೧+ – ೩೦:೫೦+

ರಾಹು ಕಾಲ: ೦೭:೪೬ – ೦೯:೧೨
ಗುಳಿಕ ಕಾಲ: ೧೩:೨೯ – ೧೪:೫೫
ಯಮಗಂಡ: ೧೦:೩೮ – ೧೨:೦೩

 

ಮೇಷ (Mesha)

 

ಈ ದಿನ ನಿಶ್ಚಿತ ಗುರಿಯತ್ತ ಪ್ರಯಾಣ ಬೆಳೆಸುವಿರಿ. ಅಡ್ಡಿ ಆತಂಕಗಳು ದೂರವಾಗುವುದು. ಕೆಲವು ವಿಚಾರಗಳನ್ನು ಯೋಚಿಸಿ ಕೈಗೊಳ್ಳಿರಿ. ಹಿರಿಯ ಅಧಿಕಾರಿಗಳ ಸಂಪರ್ಕದಿಂದ ನಿಮ್ಮ ಘನತೆ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧ್ಯತೆ. ಹಣಕಾಸು ಲೇವೇದೇವಿಯಲ್ಲಿ ಎಚ್ಚರ ಅಗತ್ಯ.

 

ವೃಷಭ (Vrushabha)

ಆಹಾರ ವ್ಯತ್ಯಯದಿಂದ ಅನಾರೋಗ್ಯ ಕಾಡುವ ಸಾಧ್ಯತೆ. ಮಗನ ವಿಷಯದಲ್ಲಿ ಅತಿಯಾದ ಭಾವುಕತೆ ಬೇಡ. ದೇವತಾ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಜೀವನದ ಶೈಲಿ ಬದಲಾಯಿಸಿಕೊಳ್ಳಿರಿ. ನಿಯಮಿತ ವಾಕಿಂಗ್ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು.

 

ಮಿಥುನ (Mithuna)

ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಸಂಪೂರ್ಣ ವಿಶ್ವಾಸವಿರಲಿ. ನಿಮ್ಮನ್ನು ಇತರೆಯವರು ಸೋಲಿಸಬೇಕೆಂದು ಹಠ ತೊಟ್ಟು ಸೋಲುವರು. ಮಾಡುವ ಕೆಲಸಗಳು ದೈವಕೃಪೆಯಿಂದ ಸರಿಯಾದ ಕ್ರಮದಲ್ಲಿ ನಡೆಯುವವು. ಏಕತಾನತೆಯಿಂದ ಹೊರಬಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ.

 

ಕರ್ಕ (Karka)

‘ಪರೋಪಕಾರಾರ್ಥಂ ಇದಂ ಶರೀರಂ’ ಎನ್ನುವಂತೆ ಈ ದಿನ ಪರರ ಸೇವೆಗಾಗಿ ಸಮಯವನ್ನು ಮೀಸಲಿಡುವಿರಿ. ಖಾಸಗಿ ನೌಕರರ ವೇತನದಲ್ಲಿ ಹೆಚ್ಚಳ ಕಂಡುಬರುವುದು. ಮಕ್ಕಳ ಹಿನ್ನಡೆಗೆ ನಿಮ್ಮ ಅಪರೋಕ್ಷ ಅಲಕ್ಷವೇ ಕಾರಣವಾಗುವುದು. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

 

ಸಿಂಹ (Simha)

 

ಅಧ್ಯಾಪಕ ಹುದ್ದೆ ಮತ್ತು ಮಾತೇ ಬಂಡವಾಳವಾಗಿ ಉಳ್ಳ ಜನರು ಈ ದಿನ ಯಶಸ್ಸನ್ನು ಕಾಣಲಿರುವರು. ಮನೆಯಲ್ಲಿ ಸಂಭ್ರಮದ ವಾತಾವರಣ. ನೂತನ ವ್ಯಕ್ತಿಗಳ ಮೇಲೆ ಅತಿಯಾದ ನಂಬಿಕೆ ಒಳ್ಳೆಯದಲ್ಲ. ಕೆಲಸಗಳ ಬಗ್ಗೆ ವಿಶೇಷ ಗಮನವಿಟ್ಟಲ್ಲಿ ಯಶಸ್ಸು ಹೊಂದುವಿರಿ.

 

ಕನ್ಯಾರಾಶಿ (Kanya)

 

ಕಳೆದು ಹೋಗಿದ್ದ ಆತ್ಮವಿಶ್ವಾಸ ಮರಳಿ ಬರಲಿದೆ. ಬರಲಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ವ್ಯವಹಾರದಲ್ಲಿ ಗೊಂದಲ ಕಂಡುಬಂದಲ್ಲಿ ಹಿರಿಯರ ಸಲಹೆ ಪಡೆಯಿರಿ. ನೀವು ಮಾಡಬೇಕೆಂದಿರುವ ಕಾರ್ಯದ ರೂಪರೇಷೆಗಳನ್ನು ನಿಮ್ಮ ಸಹೋದ್ಯೋಗಿಯ ಹತ್ತಿರ ಹೇಳಿಕೊಳ್ಳಿ.

 

ತುಲಾ (Tula)

 

ದೈನಂದಿನ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ಬೇಡ. ಕಟ್ಟಡ ಕೆಲಸದ ಒಳಾಂಗಣದ ವಿನ್ಯಾಸಗಳಿಗೆ ಸೂಕ್ತ ಗಮನ ಕೊಡುವಿರಿ. ಮತ್ತು ಸಾಮಾಜಿಕವಾಗಿ ಯಶಸ್ಸು ಹೊಂದುವಿರಿ. ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದು. ವ್ಯಾಪಾರಿಗಳಿಗೆ ವಿಶೇಷ ಧನಲಾಭವಾಗುವುದು.

 

ವೃಶ್ಚಿಕ (Vrushchika)

 

ಸ್ವಂತ ಉದ್ಯೋಗದಾತರಿಗೆ ಉತ್ತಮ ದಿನ. ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುವುದು. ಮೇಲಾಧಿಕಾರಿಗಳಿಂದ ಪ್ರಶಂಸೆ ಕೇಳಿಬರುವುದು. ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವುದು. ನಿಮ್ಮ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡುತ್ತಿರುವವರ ಬಗ್ಗೆ ಗಮನ ಹರಿಸಿರಿ.

 

ಧನು ರಾಶಿ (Dhanu)

 

ಅನಿರೀಕ್ಷಿತವಾಗಿ ಮನೆಯಲ್ಲಿ ಗೊಂದಲದ ವಾತಾವರಣ ಮೂಡುವುದು. ವಾಕ್ ಸಮರಕ್ಕೆ ಅವಕಾಶ ಕೊಡಬೇಡಿ. ಕೋರ್ಟು ಕಚೇರಿಯ ಕೆಲಸಗಳು ಮಂದಪ್ರಗತಿಯಲ್ಲಿವೆ. ಅಮೂಲ್ಯ ವಸ್ತುಗಳ ಖರೀದಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಮಕರ (Makara)

 

ಆರ್ಥಿಕ ಸ್ಥಿತಿಯ ಸುಧಾರಣೆ ಆಗುವುದು. ಮಾನಸಿಕ ತೊಳಲಾಟ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವುದು. ಪಾಲುದಾರರಲ್ಲಿ ಹೊಂದಾಣಿಕೆ ಅತ್ಯಗತ್ಯವಾಗುವುದು. ನವದಂಪತಿಗಳಿಗೆ ನೂತನ ಸುದ್ದಿ ಕೇಳಲಿರುವಿರಿ. ಸಜ್ಜನರ ಸಹವಾಸದಿಂದ ಮಧ್ಯಾಹ್ನದ ನಂತರ ಒಳಿತಾಗುವುದು.

 

ಕುಂಭರಾಶಿ (Kumbha)

ನೀವು ಹಮ್ಮಿಕೊಂಡ ಕಾರ್ಯಗಳಿಗೆ ಧನಸಹಾಯವನ್ನು ಬ್ಯಾಂಕಿನ ಮೂಲಕ ಪಡೆಯುವಿರಿ. ಕೂಡಿಟ್ಟ ಹಣ ಅಪವ್ಯಯ ಆಗದಂತೆ ನೋಡಿಕೊಳ್ಳಿರಿ. ಷೇರು ವ್ಯವಹಾರಗಳಲ್ಲಿ ಹಣ ವಿನಿಯೋಗಿಸುವುದು ಉತ್ತಮ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಮೀನರಾಶಿ (Meena)

ಈ ದಿನ ಉತ್ತಮ ದಿನ. ಸ್ವಂತ ಬಲಾಬಲದಿಂದ ಸಮಾಜದಲ್ಲಿ ಕೀರ್ತಿ ಯಶಸ್ಸನ್ನು ಹೊಂದುವಿರಿ. ಆತ್ಮವಿಶ್ವಾಸವೇ ವಿಜಯದ ಹಾದಿ. ಆರ್ಥಿಕ ದಷ್ಟಿಯಿಂದ ಉತ್ತಮ ದಿನ. ಬಾಕಿ ಬರಬೇಕಾದ ಹಣ ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಇರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top