ಮನೋರಂಜನೆ

ಯಶ್ ಮೇಲೆ ಮುನಿಸಿಕೊಂಡ್ರಾ ಚೇತನ್ ಚಂದ್ರ?

ಸಂಯುಕ್ತ-2 ಚಿತ್ರ ಒಂದು ಮಟ್ಟಕ್ಕೆ ಗೆಲುವಿನತ್ತ ಮುನ್ನುಗ್ಗುತ್ತಿದೆ. ಆದರೆ, ಈ ಚಿತ್ರ ಬಿಡುಗಡೆಯಾದ ನಂತರ ನಾಯಕ ಚೇತನ್ ಚಂದ್ರ ಏಕಾಏಕಿ ನಾಪತ್ತೆಯಾಗಿ ಬಿಟ್ಟಿದ್ದಾರೆ!

ಚೇತನ್ ಚಂದ್ರ ಪಾಲಿಗೆ ಈ ಚಿತ್ರ ಒಂದಷ್ಟು ಅವಕಾಶಗಳ ಹೆಬ್ಬಾಗಿಲು ತೆರೆಯುತ್ತದೆ ಎಂಬಂಥಾ ವಾತಾವರಣ ಇತ್ತು. ಸಿನಿಮಾ ಶುರುವಾದಾಗಿನಿಂದ ತಂಡದವರ ಜೊತೆಗೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಚೇತನ್ ಆಡಿಯೋ ಬಿಡುಗಡೆಯ ನಂತರ ಅವರಿಗೂ ಇಂಥಾದ್ದೊಂದು ಬ್ರೇಕ್ ಬೇಕಾಗಿತ್ತು.

ಆದರೆ ಅದು ಕೈಗೂಡೋ ಲಕ್ಷಣಗಳಿರೋವಾಗಲೂ ಚೇತನ್ ಕಣ್ಮರೆಯಾದದ್ದೇಕೆ ಅಂತ ಹುಡುಕಿದರೆ ಒಂದಷ್ಟು ಸೂಕ್ಷ್ಮ ಕಾರಣಗಳು ಪತ್ತೆಯಾಗುತ್ತವೆ! ಸಿನಿಮಾ ಶುರುವಾದಾಗಿನಿಂದ ತಂಡದವರ ಜೊತೆಗೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಚೇತನ್ ಆಡಿಯೋ ಬಿಡುಗಡೆಯ ನಂತರ ನಾಪತ್ತೆಯಾಗಿಬಿಟ್ಟಿದ್ದಾರೆ.

ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಶ್ ‘ಅಂಬರೀಶಣ್ಣ ಒಂದು ಮಾತು ಹೇಳಿದ್ರು. ನನ್ನಿಂದ ಯಾರಿಗಾದರೂ ಉಪಯೋಗ ಆಗತ್ತೆ ಅನ್ನೋದಾದರೆ ಕರೆದಲ್ಲಿಗೆ ಹೋಗ್ತೀನಿ ಅಂತಾ… ನನ್ನಿಂದ ಯಾರಿಗಾದರೂ ಸಹಾಯ ಆಗತ್ತೆ ಅನ್ನೋದಾದರೆ ಹತ್ತು ನಿಮಿಷ ಬಂದುಹೋಗೋದು ಸಾರ್ಥಕವಾಗುತ್ತೆ ಅಂತಾ ನಂಬಿದ್ದೀನಿ ಅಂತಾ ಮಾತಾಡಿ ಯಶ್ ಚಪ್ಪಾಳೆ ಗಿಟ್ಟಿಸಿದ್ದರು.

ಅಷ್ಟಕ್ಕೂ ಈ ಕಾರ್ಯಕ್ರಮಕ್ಕೆ ಯಶ್ ಬರೋದೇ ಚೇತನ್‌ಗೆ ಇಷ್ಟ ಇರಲಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಚೇತನ್‌ರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡ ಯಶ್ ಹೊಸಾ ನಟನೊಬ್ಬನ ಚಿತ್ರದ ಬಗ್ಗೆ ಮಾತಾಡೋ ಧಾಟಿಯಲ್ಲಿಯೇ ಮಾತಾಡಿದ್ದರು. ಅದು ಚೇತನ್ ಚಂದ್ರನಿಗೆ ತೀರಾ ಹರ್ಟ್ ಮಾಡಿದೆ ಮತ್ತು ಆ ಕಾರಣದಿಂದಲೇ ಚಿತ್ರದ ಬಿಡುಗಡೆಗೂ ಬಾರದೆ ಕಣ್ಮರೆಯಾಗಿದ್ದಾರೆಂಬ ಗುಮಾನಿ ಕೇಳಿಬರುತ್ತಿದೆ. ಅಷ್ಟು ಮಾತ್ರವಲ್ಲ, ‘ಸಂಯುಕ್ತ ಸಿನಿಮಾದ ಕುರಿತಾಗಿ ಸಂದರ್ಶನ ಮಾಡಲು ಪತ್ರಕರ್ತರು ಫೋನ್ ಮಾಡಿದರೂ ಅದಕ್ಕೂ ಚೇತನ್ ಸ್ಪಂದಿಸುತ್ತಿಲ್ಲ. ಕರೆ ಕೂಡಾ ಸ್ವೀಕರಿಸುತ್ತಿಲ್ಲವಂತೆ.

ಈ ಚೇತನ್ ಚಂದ್ರ ಯಶ್ ಅಭಿನಯದ ರಾಜಧಾನಿ ಚಿತ್ರದಲ್ಲಿ ನಾಯಕರಲ್ಲೊಬ್ಬರು. ಯಶ್ ಮತ್ತು ಚೇತನ್‌ರದ್ದಿಲ್ಲಿ ಸರಿ ಸಮಾನಾದ ಪಾತ್ರಗಳು. ಆದರೆ ಇಬ್ಬರ ವಿಚಾರದಲ್ಲಿ ನಸೀಬು ಪಕ್ಷಪಾತ ಮಾಡಿತ್ತು. ಯಶ್ ನಾನಾ ಅಡ್ಡಿ ಆತಂಕಗಳ ನಡುವೆಯೂ ಮುಖ್ಯ ನಟರ ಸಾಲಿಗೆ ಸೇರಿದರೆ, ಅಂಥಾ ಲಕ್ಷಣಗಳಿದ್ದರೂ ಚೇತನ್‌ಗೆ ಹಿನ್ನಡೆಯಾಗಿತ್ತು.

ಇದನ್ನೆಲ್ಲ ಮನಗಂಡು ಯಶ್ ಬೇರೆ ಧಾಟಿಯಲ್ಲಿ ಮಾತಾಡಿದ್ದರೆ ಬಹುಶಃ ಚೇತನ್ ಚಂದ್ರ ವಿನಾಕಾರಣ ಘಾಸಿಗೊಳ್ಳೋದನ್ನು ತಪ್ಪಿಸಬಹುದಿತ್ತೇನೋ. ಒಟ್ಟಾರೆ ಇವರಿಬ್ಬರ ಈಗೋ ಕ್ಲಾಷಿನ ಸೈಡ್ ಎಫೆಕ್ಟು ಸಂಯುಕ್ತ ೨ ಚಿತ್ರದ ನಿರ್ಮಾಪಕ ಡಾ. ಮಂಜುನಾಥ್ ಅವರ ಮೇಲೆ ಪರಿಣಾಮ ಬೀರಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top