ಜೀವನ ಕ್ರಮ

ಮದುವೆಯಾದ ನಂತರ ಹಿರಿಯರು ಹೇಳಿದ ಕೆಲವು ಪದ್ದತಿಗಳನ್ನು ಅವಶ್ಯಕವಾಗಿ ಪಾಲಿಸಿದರೆ ಗಂಡ ಮತ್ತು ಹೆಂಡತಿ ಇಬ್ಬರೂ  ಜೀವನದಲ್ಲಿ ಚೆನ್ನಾಗಿರುತ್ತಾರೆ.

ಮದುವೆಯಾದ ನಂತರ ಹಿರಿಯರು ಹೇಳಿದ ಕೆಲವು ಪದ್ದತಿಗಳನ್ನು ಆವಶ್ಯಕವಾಗಿ ಪಾಲಿಸಿದರೆ  ಗಂಡ ಮತ್ತು ಹೆಂಡತಿ ಇಬ್ಬರೂ  ಜೀವನದಲ್ಲಿ ಚೆನ್ನಾಗಿರುತ್ತಾರೆ.

 

 

ಮಹಿಳೆಯರು ಮಾಂಗಲ್ಯ ಸರಕ್ಕೆ ಯಾವುದೇ ಪಿನ್ ಅಥವಾ ಕೂದಲಿಗೆ ಹಾಕುವ ಪಿನ್ನವನ್ನು ಅಥವಾ ಬೀಗದ ಕೀಲಿ ಕೈಯನ್ನು ಮತ್ತು  ಬಟ್ಟೆ ಪಿನ್ನವನ್ನು ಸಿಕ್ಕಿ ಹಾಕಿಸಿಕೊಳ್ಳಬಾರದು. ಮಾಂಗಲ್ಯ ಮಹಿಳೆಯರ ಹೃದಯ ಭಾಗದಲ್ಲಿ ಇರುತ್ತದೆ. ಸ್ಟೀಲ್ ಅಥವಾ ಕಬ್ಬಿಣದ ವಸ್ತುಗಳನ್ನು ಮಾಂಗಲ್ಯದ ಜೊತೆ ಹಾಕಿಕೊಂಡರೆ ಕೆಟ್ಟ ನಕಾರಾತ್ಮಕ ಶಕ್ತಿಗಳನ್ನು ಅದು ಆಕರ್ಷಿಸಿ ಗಂಡ ಮತ್ತು ಹೆಂಡತಿಯ ಮಧ್ಯೆ ಇರುವ ಪ್ರೀತಿ ಮತ್ತು ಬಾಂಧವ್ಯವನ್ನು ಕಡಿಮೆ ಆಗುವಂತೆ ಮಾಡುತ್ತದೆ.

 

 

ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರು ಅನೇಕ ಆಚಾರ ವಿಚಾರಗಳನ್ನು ಮತ್ತು ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಅವು ಸುಮ್ಮನೆ ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿಲ್ಲ .ಆದರೆ ಕೆಲವರು ಅವುಗಳನ್ನು ಮೂಢನಂಬಿಕೆ ಎನ್ನುತ್ತಾರೆ . ಹಾಗಾಗಿ ಅದನ್ನು ಅನುಸರಿಸಿದರೆ ನಮಗೇ ತೊಂದರೆ ಏನೂ ಆಗುವುದಿಲ್ಲ ….

ಸ್ತ್ರೀಯರು ಮಣ್ಣಿನ ಬಳೆಯನ್ನು  ಅ೦ದರೆ ಗಾಜಿನ ಬಳೆಗಳನ್ನು ಧರಿಸಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಈ ಬಳೆ ಐಶ್ವರ್ಯವನ್ನು ತರುವುದರ ಜೊತೆಗೆ ಅದರ ಶಬ್ದ ಮನೆಯಲ್ಲಿ ಅನುರಾಗ ಬೆಳೆಸುತ್ತದೆ.

 

 

ಮನೆಯಲ್ಲಿ ಕುದುರೆ ಬೊಂಬೆಯನ್ನು ಇರಿಸಬಾರದು. ಇದರಿಂದ ಹಣ ಮನೆಯಲ್ಲಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ . ಆದ್ದರಿಂದ ಎಂಥದ್ದೇ ಬೊಂಬೆ ಯಾದರೂ ಸರಿ ಆದರೆ ಕುದುರೆ ಬೊಂಬೆಯನ್ನು ಮಾತ್ರ  ಮನೆಯಲ್ಲಿ  ಇಟ್ಟುಕೊಳ್ಳುಬೇಡಿ.

ಅತ್ತೆ ಮತ್ತು ಸೊಸೆಯ ಮಧ್ಯೆ ತುಂಬಾ ಜಗಳ ಆಗುತ್ತಿದ್ದರೆ , ಅವರು ಮಲಗುವ ದಿಂಬಿನ ಕೆಳಗೆ ತುಳಸಿ ಗಿಡದ ಬೇರನ್ನು ಇಟ್ಟುಕೊಳ್ಳಿ. ಇದರಿಂದ ಅವರ ಮಧ್ಯೆ ಜಗಳ ಕಡಿಮೆಯಾಗಿ ಬಾಂಧವ್ಯ ಬೆಳೆಯುತ್ತದೆ .

 

 

ಇನ್ನೂ  ಸಾಲದ ಸುಳಿಯಲ್ಲಿ ಸಿಲುಕಿರುವವರು ಬಿಳಿ ಬಣ್ಣದ ಹೂವುಗಳನ್ನು ಮುಡಿದರೆ ಸಾಲದ ಸಮಸ್ಯೆ ಕಡಿಮೆಯಾಗುತ್ತದೆ.

 

 

ಗಂಡ ಮನೆಯಿಂದ ಆಚೆ ಹೋಗುವಾಗ ಗಂಡ ಧರಿಸಿರುವ ಅಂಗಿಯ ಅಥವಾ ಶರ್ಟ್ನ ಗುಂಡಿಗಳನ್ನು ಹೆಂಡತಿಯೇ ಹಾಕಬೇಕು.ಇದರ ಜೊತೆಗೆ ಹೆಂಡತಿಯ ಬಲಗೈಯನ್ನು ಮುಟ್ಟಿ ಗಂಡ ಆಚೆ ಹೊರಗೆ ಹೋದರೆ ಆ ದಿನ ಗಂಡನಿಗೆ ಸಂಪಾದನೆ ,ಅದೃಷ್ಟದ  ಜೊತೆ ಎಲ್ಲಾ ರೀತಿಯಲ್ಲೂ ಲಾಭವಾಗುತ್ತದೆ.

 

 

ಹಿರಿಯರು ಹೇಳಿದ ಈ ಪದ್ಧತಿಗಳನ್ನು ಪಾಲಿಸಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸುಖವನ್ನು ಪಡೆಯಿರಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top