ಭವಿಷ್ಯ

ಕನಸಿನಲ್ಲಿ ಒಡವೆಗಳು , ಉಡುಗೊರೆಗಳು ಕಾಣಿಸಿಕೊಂಡರೆ ಅವು ಏನನ್ನು ಸೂಚಿಸುತ್ತವೆ ಗೊತ್ತಾ ?

ಕನಸಿನಲ್ಲಿ ಈ ಆಭರಣಗಳನ್ನು ಕಂಡರೆ ಅವು ಏನನ್ನು ಸೂಚಿಸುತ್ತವೆ.

 

 

ನಿಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಅಗಣಿತ ವಿದ್ಯಮಾನಗಳಿಗೆಲ್ಲ ಒಂದು ಕಾರಣವಿದ್ದೇ ಇರುತ್ತದೆ.ಸಾಮಾನ್ಯವಾಗಿ ನಾವು ಕಾಣುವ ನೋಟಗಳಲ್ಲಿ, ಇವು ಕೆಲವು ವಿಶೇಷ ಸ೦ಜ್ಞೆಗಳು, ನಮಗೆ ಮುಂದೆ ಎದುರಾಗುವ ಸಂದರ್ಭವನ್ನು ಸೂಚಿಸಬಹುದು.

ವಿಶೇಷವಾಗಿ ಕನಸಿನಲ್ಲಿ ಕಾಣುವ ಕೆಲವು ವಸ್ತುಗಳು ನಮ್ಮ ಬದುಕಿನಲ್ಲಿ ಎದುರಾಗುವ ಕೆಲವು ಸಂದರ್ಭಗಳ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಿರಬಹುದು. ಉದಾಹರಣೆಗೆ ಕನಸಿನಲ್ಲಿ ಹಾವನ್ನು ಕಂಡರೆ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಲಿದೆ ಎಂದು ತಿಳಿಯಬಹುದು. ಇದೇ ರೀತಿಯಾಗಿ ಪ್ರತಿ ವಸ್ತುವು ಸಹ ಒಂದೊಂದು ವಿಷಯವನ್ನು ಪ್ರತಿನಿಧಿಸುತ್ತದೆ.  ಕನಸಿನಲ್ಲಿ ಆಭರಣಗಳನ್ನು ಕಂಡರೆ ಇದು ಯಾವ ವಿಷಯವನ್ನು ತಿಳಿಸುತ್ತದೆ ಎಂಬುದನ್ನು ನೋಡೋಣ…

ಇದು ಖರ್ಚು ಎದುರಾಗುವ ಬಗ್ಗೆ ಸೂಚನೆಯಾಗಿರಬಹುದು.

 

 

ಕನಸಿನಲ್ಲಿ ಆಭರಣಗಳನ್ನು ಕಂಡರೆ ಮುಂದಿನ ದಿನಗಳಲ್ಲಿ ಭಾರೀ ಖರ್ಚು ಎದುರಾಗಲಿದೆ ಎಂದು ತಿಳಿಯಬಹುದು. ಆದರೆ ಇದು ಒಳ್ಳೆಯ ಖರ್ಚೇ ಹೊರತು ಬೇರೇನೂ ಇಲ್ಲ . ಉದಾಹರಣೆಗೆ ಕುಟುಂಬದಲ್ಲಿ ವಿವಾಹ, ನಿಮ್ಮ ಮನೆಯವರೆಲ್ಲಾ ಸೇರಿ ಪ್ರವಾಸ ಹೊರಡುವುದು, ಇತ್ಯಾದಿ ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ಈ ಖರ್ಚು ಸಂತೋಷಕರ ಕಾರಣಗಳಿಗಾಗಿಯೇ ವ್ಯಯಿಸಿ ಬಿಡುತ್ತೇವೆ ಅಂದರೆ ಆಭರಣಗಳನ್ನು ಕನಸಿನಲ್ಲಿ ಕಂಡರೆ ಸಂತೋಷದ ದಿನಗಳು ಮುಂದೆ ಕಾದಿವೆ ಅದಕ್ಕಾಗಿ ಖರ್ಚು ಮಾಡಲು ಹಿಂದೇಟು ಹಾಕಬೇಡಿ ಎಂಬ ಸೂಚನೆಯಾಗಿದೆ .

 

ಉಡುಗೊರೆ ಪಡೆಯುವಂತೆ ಬೀಳುವ ಕನಸು.

 

 

ನಿಮ್ಮ ಕನಸಿನಲ್ಲಿ ಯಾರೋ ನಿಮಗೆ ಆಭರಣಗಳನ್ನು ಉಡುಗೊರೆ ರೂಪದಲ್ಲಿ ನೀಡಿದರೆ… ಇದು ನೀವು ಶೀಘ್ರದಲ್ಲಿಯೇ ಹೆಚ್ಚಿನ ಲಾಭ ಪಡೆಯಲಿದ್ದೀರಿ ಎಂದು ಸೂಚಿಸುತ್ತದೆ. ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಲಾಭ ಬರುವ ದೊಡ್ಡ ಕೆಲಸ ಸಿಗಬಹುದು ಅಥವಾ ದೀರ್ಘಕಾಲದ ಪ್ರವಾಸಕ್ಕೆ  ಹೊರಡಬೇಕಾದ ಅವಕಾಶ ಲಭಿಸಬಹುದು. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ನಿಮಗೆ ಹಣ ಅಥವಾ ಇನ್ಯಾವುದೋ ರೂಪದಲ್ಲಿ ಭಾರೀ ಪ್ರಮಾಣದ ಸಂತೋಷ ಒದಗಿ ಬರಲಿದೆ.

ಆಭರಣ ಧರಿಸಿಕೊಂಡಿರುವ ವ್ಯಕ್ತಿ ಕನಸಿನಲ್ಲಿ ಕಂಡರೆ.

 

 

ಒಂದು ವೇಳೆ ಕನಸಿನಲ್ಲಿ ಕಂಡ ವ್ಯಕ್ತಿ ಆಭರಣಗಳನ್ನು ಧರಿಸಿದಂತೆ ಕಂಡರೆ ಇದು ಆತ್ಮೀಯರಲ್ಲಿ ಯಾರಾದರೂ ಒಬ್ಬರು ದೇವರ ಸನ್ನಿಧಾನಕ್ಕೆ ತೆರಳಲಿದ್ದಾರೆ ಎಂಬ ಸೂಚನೆಯಾಗಿದೆ. ಅಥವಾ ಆತ್ಮೀಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಪ್ರಮುಖ ಉದ್ಯೋಗವನ್ನೂ ಕಳೆದುಕೊಳ್ಳಲಿದ್ದಾರೆ, ಅಥವಾ ವಿವಾಹವೊಂದು ಮುರಿದು ಬೀಳಲಿದೆ ಎಂದು ತಿಳಿಯಬಹುದಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಹತ್ತಿರದವರಲ್ಲಿ ಏನಾದರೂ ಒಂದು ಕೊನೆಯ ಹಂತಕ್ಕೆ ಬಂದಿದೆ. ಹಾಗೂ ಇದು ಸಂತೋಷಕರ ಅಲ್ಲ ಎಂಬುದರ ಫಲಿತಾಂಶ ನೀಡುತ್ತಿದೆ ಎಂದು ತಿಳಿಯಬಹುದು.

 ಒಂದು ವೇಳೆ ಆಭರಣ ಧರಿಸಿದ ವಿವಾಹಿತೆಯನ್ನು ಕನಸಿನಲ್ಲಿ ಕಂಡರೆ.

 

 

ಒಂದು ವೇಳೆ ಆಭರಣಗಳನ್ನು ಧರಿಸಿದಂತೆ ವಿವಾಹಿತೆ  ಕನಸಿನಲ್ಲಿ ಕಂಡರೆ ಇದು ಸಂತೋಷದ ಸುದ್ದಿ ಎಂದು ತಿಳಿಯಬಹುದು. ಅಂದರೆ ನಿಮ್ಮ ಆತ್ಮೀಯರಲ್ಲಿ ಯಾರಾದರೂ ಒಬ್ಬರು ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ ಎಂದು ತಿಳಿಯಬಹುದು ಅಥವಾ ಶೀಘ್ರದಲ್ಲಿಯೇ ನಿಮ್ಮ ಆತ್ಮೀಯರಲ್ಲಿ ಬಹಳ ವರ್ಷಗಳಿಂದ ಮಗುವಿಗಾಗಿ ಹಪಹಪಿಸುತ್ತಿದ್ದ ಈಗ ಅವರ ಕನಸು ನನಸಾಗುವ ದಿನ ಹತ್ತಿರವಾಗಿದೆ ಎಂದು ತಿಳಿಯಬಹುದು. ಒಟ್ಟಾರೆಯಾಗಿ ಇದು ಶುಭ ಸಂಕೇತ ನೀಡುವ ಕನಸಾಗಿದೆ.

 

ಇತರೆ ಸೂಚನೆಗಳು.

 

ಕನಸಿನಲ್ಲಿ ಆಭರಣಗಳನ್ನು ಕಾಣುವುದು ಇನ್ನು ಕೆಲವು ವಿಷಯಗಳನ್ನು ಸೂಚಿಸುತ್ತವೆ. ಒಂದು ಹುಡುಗಿ ಹಾಗೂ ಜೊತೆಯಲ್ಲಿರುವವರ ಆಭರಣಗಳನ್ನು ಕಾಣುವುದು ಸಮಾನತೆಯ ಸಂಕೇತವಾಗಿದೆ . ಇದು ಸಮಾಜದಲ್ಲಿ ಓರ್ವ ವ್ಯಕ್ತಿ ತನ್ನ ಸ್ಥಾನವನ್ನು ನಿರ್ವಹಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಆಭರಣಗಳನ್ನು ಕೇವಲ ಧನಿಕರು ಮಾತ್ರವೇ ಧರಿಸುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೇವೆ. ಆದರೆ ಆಭರಣಗಳೆ೦ದರೆ ದುಬಾರಿಯಾದ ಚಿನ್ನ, ವಜ್ರವೇ ಆಗಬೇಕಾಗಿಲ್ಲ ಬದಲಿಗೆ ಅಗ್ಗದ ಇತರೆ ಲೋಹದ ಆಭರಣಗಳು ಧರಿಸಲು ಯೋಗ್ಯವಾಗಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top