ಆರೋಗ್ಯ

ಸೀಳು ಕೂದಲಿನ ಸಮಸ್ಯೆ ಸಮಸ್ಯೆ ಜಾಸ್ತಿ ಆಗಿದ್ರೆ ಕೂದಲು ಕತ್ತರಿಸಿ ಹಾಕೋ ಬದಲು ಮನೇಲಿ ಸಿಗೋ ಈ ವಸ್ತುಗಳು ಬಳಸಿಕೊಂಡು ಸರಿ ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಸೀಳು ಕೂದಲ ಸಮಸ್ಯೆಯನ್ನು ನಾವು ಅನೇಕ ಹೆಣ್ಣು ಮಕ್ಕಳಲ್ಲಿ ನೋಡಬಹುದು .ಈ ಸೀಳು ಕೂದಲು ನಿಮ್ಮ ಕೂದಲಿನ ಮತ್ತು ನಿಮ್ಮ ಆರೋಗ್ಯ ದುರ್ಬಲತೆಯ ಮುನ್ಸೂಚನೆ ಆಗಿರುತ್ತದೆ .

ಸೀಳು ಕೂದಲಿನ ಸಮಸ್ಯೆಗೆ ಅನೇಕ ಕಾರಣಗಳಿವೆ

 

 

೧.ನೀವು ತಲೆಗೆ ಉಪಯೋಗಿಸುವ ರಾಸಾಯನಿಕ ಪದಾರ್ಥಗಳು .
೨.ಕಾಲ ಚಕ್ರ ಬದಲಾವಣೆ
೩.ವಾಯು ಮಾಲಿನ್ಯ
೪.ನಾವು ತಿನ್ನುವಂತ ಆಹಾರ ಪದಾರ್ಥ
೫.ಹಾರ್ಮೋನ್ ಸಮಸ್ಯೆ
೬.ಒತ್ತಡ

ಈ ಸೀಳು ಕೂದಲಿನ ಸಮಸ್ಯೆಯಿಂದ ಹೊರ ಬರಲು ನಾವು ನಿಮಗೆ ಈ ಕೆಳಗಿನ ಮನೆಮದ್ದನ್ನು ಸೂಚಿಸುತ್ತೇವೆ. ಉಪಯೋಗಿಸಿ ನಿಮ್ಮ ಸಮಸ್ಯೆ ಯಿಂದ ಹೊರಬನ್ನಿ

ಹಾಗಲಕಾಯಿ

 

 

ಹಾಗಲಕಾಯಿಯನ್ನು ವಾರಕ್ಕೆ 3 ಬಾರಿ ನೆತ್ತಿಯ ಮೇಲೆ ಹಾಕಿ ಉಜ್ಜಿಕೊಳ್ಳುವುದರಿಂದ ಮತ್ತು ಅದರ ರಸವನ್ನು ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಸಿಳ್ಳು ಕೂದಲಿನ ಸಮಸ್ಯೆ ಮಾಯವಾಗುತ್ತದೆ .

ಅವಕಾಡೊ (ಬೆಣ್ಣೆ ಹಣ್ಣು )

 

 

ಚೆನ್ನಾಗಿ ಅವಕ್ಯಾಡೊವನ್ನು ಜಜ್ಜಿ ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ನಂತರ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿಕೊಳ್ಳುವುದರಿಂದ ನಿಮ್ಮ ಸೀಳು ಕೂದಲ ಸಮಸ್ಯೆ ಹೊರಹೋಗುತ್ತದೆ .

ಬಿಯರ್ :

 

 

 

ಬಿಯರ್ ದುರ್ಬಲ ಕೂದಲನ್ನು ಸರಿಮಾಡುವುದರ ಜೊತೆ ನಿಮ್ಮ ಕೂದಲು ಮೃದುವಾಗಲು ಮತ್ತು ಸೀಳು ಕೂದಲನ್ನು ಸರಿಪಡಿಸುತ್ತದೆ .ನೀವು ಸ್ನಾನ ಮಾಡುವ 10 ನಿಮಿಷಗಳ ಮುಂಚೆ ಸ್ವಲ್ಪ ನಿಮ್ಮ ತಲೆ ಕೂದಲಿಗೆ ಬಿಯರ್ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ನಿಮ್ಮ ಎಲ್ಲ ಕೂದಲ ಸಮಸ್ಯೆ ಮಂಗಮಾಯವಾಗುತ್ತದೆ .

ಬಾಳೆಹಣ್ಣು :

 

 

ಒಂದು ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಮೊಸರು ,ಸ್ವಲ್ಪ ರೋಜ್ ವಾಟರ್ ಮತ್ತು ಸ್ವಲ್ಪ ನಿಂಬೆರಸವನ್ನು ಸೇರಿಸಿ ನಿಮ್ಮ ತಲೆ ಕೂದಲಿಗೆ ಹಚ್ಚಿ 1 ತಾಸಿನ ನಂತರ ಸ್ನಾನ ಮಾಡಬೇಕು.

 

ಮೊಟ್ಟೆ :

 

 

ಹಸಿ ಮೊಟ್ಟೆಯ ಬಿಳಿ ಭಾಗವನ್ನು ನಿಮ್ಮ ತಲೆ ಕೂದಲು ಮತ್ತು ಬುರುಡೆಯ ಮೇಲೆ ಹಾಕಿ ಚೆನ್ನಾಗೆ 40 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ನಿಮ್ಮ ತಲೆ ಕೂದಲಿಗೆ ಬೇಕಾದ ಪೋಷಕಾಂಶಗಳನ್ನ ಒದಗಿಸುವುದರ ಜೊತೆ ಸೀಳು ಕೂದಲ ಸಮಸ್ಯೆಯನ್ನು ದೂರ ಮಾಡುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top