fbpx
ಮನೋರಂಜನೆ

“ದಿ ವಿಲನ್” ಚಿತ್ರವು ತಡವಾಗುತ್ತಿರುವುದಕ್ಕೆ ಮುಖ್ಯ ಕಾರಣವೇನು? ಚಿತ್ರ ಯಾವಾಗ ತೆರೆಗೆ ಬರುತ್ತೆ?: ಪ್ರೇಮ್ ಹೇಳೋದಿಷ್ಟು.

“ದಿ ವಿಲನ್” ಚಿತ್ರವು ತಡವಾಗುತ್ತಿರುವುದಕ್ಕೆ ಮುಖ್ಯ ಕಾರಣವೇನು ಎಂದು ಹೇಳಿದ ನಿರ್ದೇಶಕ ಪ್ರೇಮ್..!

 

 

ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯಲ್ಲಿ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರ ಭರದಿಂದ ಶೂಟಿಂಗ್ ನಡೆಸುತ್ತಿದ್ದು ಈಗಾಗಲೇ ಶೇಕಡಾ 70ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿರುವ ಚಿತ್ರತಂಡ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಈ ಡಿಸೇಂಬರ್ ನಲ್ಲಿ ತೆರೆ ಕಾಣಬೇಕಿತ್ತು. ಆದರೆ ಚಿತ್ರದ ಶೂಟಿಂಗ್ ಬಹಳ ತಡವಾಗುತ್ತಿದೆ. ಹಾಗಾಗಿ ಚಿತ್ರವೂ ತಡವಾಗುತ್ತಿರುವುದಕ್ಕೆ ಎಲ್ಲಾರೂ ಪ್ರೇಮ್’ನತ್ತ ಬೆರಳು ಮಾಡುತ್ತಿದ್ದಾರೆ.

 

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೇಮ್ “”ನಾನು ಚಿತ್ರರಂಗದಲ್ಲಿ ವದಂತಿಗಳ ಬಗ್ಗೆ ತಿಳಿದಿದ್ದೇನೆ ಮತ್ತು ಚಿತ್ರೀಕರಣದ ವಿಳಂಬಕ್ಕೆ ಎಲ್ಲರೂ ನನ್ನನ್ನೇ ದೂಷಿಸುತ್ತಾರೆ. ಆದರೆ ಇದು ದುರದೃಷ್ಟಕರವಾಗಿದೆ, ಆಮಿ ಜಾಕ್ಸನ್ ಅವರ ವೀಸಾ ತೊಂದರೆಯೇ ವಿಲನ್ ಚಿತ್ರವೂ ತಡವಾಗಲು ಕಾರಣ. ಅವರ ವೀಸಾ ತೊಂದರೆ ನನ್ನ ನಿಯಂತ್ರಣದಲ್ಲಿಲ್ಲ” ಎಂದು ಹೇಳುತ್ತಾರೆ ಪ್ರೇಮ್.

 

 

“ನಮ್ಮ ಈಗಿನ ಶೂಟಿಂಗ್ ಶೆಡ್ಯೂಲ್ ನವೆಂಬರ್ 8ಕ್ಕೆ ಆರಂಭವಾಗಬೇಕಿತ್ತು ಆದರೆ ಆಮಿ ಜಾಕ್ಸನ್ ಅವರ ವೀಸಾ ತೊಂದರೆಯನ್ನು ಬಗೆಹರಿಸುವ ತನಕ ಅಮೆರಿಕಾದಿಂದ ಇಲ್ಲಿಗೆ ಬರಲು ಅವಕಾಶವಿಲ್ಲ ಎಂದು ಕರೆಮಾಡಿದ್ದಾರೆ,ಆಮಿ ನವೆಂಬರ್ 20 ರಿಂದ ಸೆಟ್ನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ, ಆದರೆ ಅದು ಕೂಡ ಖಚಿತವಾಗಿಲ್ಲ. ಈ ಬಗ್ಗೆ ಆಕೆಯೂ ವಿಷಾದ ವ್ಯಕ್ತಪಡಿಸಿದ್ದಾಳೆ. ಆದರೆ ಏನು ಮಾಡೋದು ವೀಸಾ ಸಮಸ್ಯೆ ಅವಳ ಕೈನಲ್ಲಿ ಇಲ್ಲವಲ್ಲ” ಎಂದು ಪ್ರೇಮ್ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

 

 

“ಶಿವಣ್ಣ ನನಗೆ ಒಳ್ಳೆಯ ಡೇಟ್ಸ್ ಕೊಟ್ಟಿದ್ದರು ಆದರೆ ಅವನ್ನು ಸದುಪಯೋಗಪಡಿಸಿಕೊಳ್ಳಲು ಸ್ವಲ್ಪಮಟ್ಟಿಗೆ ವಿಫಲನಾದೆ ಇನ್ನು ಸುದೀಪ್ ಕೂಡ ನನ್ನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ನನ್ನ ಸಂಪರ್ಕದಲ್ಲಿದ್ದಾರೆ. ನಿರ್ಮಾಪಕ ಸಿ.ಆರ್ ಮನೋಹರ್ ಮತ್ತು ಇಬ್ಬರು ದಿಗ್ಗಜ ನಟರಾದ ಶಿವರಾಜ್ಕುಮಾರ್ ಮತ್ತು ಸುದೀಪ್ ಅವರ ತಾಳ್ಮೆಗಾಗಿ ನಾನು ಕೃತಜ್ಞರಾಗಿರುತ್ತೇನೆ. ಅವರು ನನ್ನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಅದು ಅವರ ದೊಡ್ಡ ಗುಣ” ಎನ್ನುತ್ತಾರೆ ಪ್ರೇಮ್

 

 

ಆರಂಭದಲ್ಲಿ, ನಾನು ಸಂಪೂರ್ಣ ಚಿತ್ರಣವನ್ನು ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲು ಯೋಜಿಸಿದೆ, ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ವರ್ಷ ಜನವರಿ ಹೊತ್ತಿಗೆ ಚಿತ್ರದ ಚಿತ್ರೀಕರಣವು ಮುಕ್ತಾಯವಾಗಬಹುದು. ನಾನು ಮುಂದಿನ ವಾರದಿಂದ ಡಬ್ಬಿಂಗ್ ಕೆಲಸವನ್ನು ಪ್ರಾರಂಭಿಸುತ್ತಿದ್ದೇನೆ ಅಷ್ಟರ ಹೊತ್ತಿಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವೆ ” ಎಂದು ಹೇಳಿದರು ಪ್ರೇಮ್.

 

 

ಅಂದಹಾಗೆ ದಿ ವಿಲನ್ ಚಿತ್ರವು ಕನ್ನಡ,ಹಿಂದಿ, ತಮಿಳು,ತೆಲುಗು,ಬಂಗಾಳಿ ಮತ್ತು ಮಲೆಯಾಳಂ ಗಳಲ್ಲಿ ಏಕಕಾಲದಲ್ಲಿ ಮೂಡಿ ಬರುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡದ ಇಬ್ಬರು ದಿಗ್ಗಜ ನಟರಾದ ಶಿವಣ್ಣ ಮತ್ತು ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಚಿತ್ರಕ್ಕೆ ಭಾರಿ ಕ್ರೇಜ್ ಹುಟ್ಟಿಕೊಂಡಿದೆ.ಚಿತ್ರದಲ್ಲಿ ನಾಯಕಿಯರಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಮತ್ತು ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ..ಚಿತ್ರ ಮುಂದಿನ ವರ್ಷ ಮಾರ್ಚ್ ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top