ಕಿರುತೆರೆ

ತನ್ನ ಗಂಡನ ವಿರುದ್ಧ ಪಿತೂರಿ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ..!

ತನ್ನ ಗಂಡನ ವಿರುದ್ಧ ಪಿತೂರಿ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ..!

 

 

ಬಿಗ್ ಬಾಸ್ ಕಾರ್ಯಕ್ರಮದ ಐದನೇ ಆವೃತ್ತಿಯಲ್ಲಿ ಸಾಮಾನ್ಯ ವ್ಯಕ್ತಿಯ ಕೋಟಾದಲ್ಲಿ ಮನೆಯನ್ನು ಪ್ರವೇಶ ಮಾಡಿರುವ ಸಮೀರ್ ಆಚಾರ್ಯ ಕಾರ್ಯಕ್ರಮದ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರು ಅವರ ಪತ್ನಿ ಅವರ ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಸಮೀರ್ ಪತ್ನಿ ಯಾರ ವಿರುದ್ಧ ಕಿಡಿಕಾರಿದ್ದಾರೆ ಅಂತೀರಾ. ಮುಂದೆ ಓದಿ.

 

 

ಹೌದು ಕೆಲವು ದಿನಗಳ ಹಿಂದೆ “ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ತಮ್ಮ ಸಹ ಸ್ಪರ್ಧಿಗಳ ಜೊತೆ ಗಾಯಿತ್ರಿ ಮಾತ್ರವನ್ನು ಪಾಶ್ಚಿಮಾತ್ಯ ಸಂಗೀತದ ದಾಟಿಯಲ್ಲಿ ಹಾಡಿದ್ದಾರೆ ಮತ್ತು ಅವರು ಹಾಡುವಾಗ ಇತರ ಸದಸ್ಯರು ಕಾಲಿಗೆ ಶೂಗಳನ್ನು ಹಾಕಿಕೊಂಡು ತಾಳ ಹಾಕಿದ್ದಾರೆ ಇದು ಸಂಸ್ಕೃತಿಗೆ ವಿರುದ್ಧವಾದುದು… ಗಾಯಿತ್ರಿ ಮಂತ್ರವನ್ನು ಎಲ್ಲರೂ ಹಾಡುವಂತಿಲ್ಲ ಇಂಥದ್ದೇ ನೀತಿ-ನಿಯಮದಲ್ಲಿ ಹಾಡಬೇಕು ಎಂಬ ನಂಬಿಕೆಯಿದೆ ಆದರೆ ಸಮೀರ್ ಆಚಾರ್ಯ ಮದ್ಯಪಾನ,,ಮಾಂಸಾಹಾರ ಮಾಡುವರ ಬಾಯಿಂದಲೂ ಗಾಯಿತ್ರಿ ಮಂತ್ರವನ್ನು ಹಾಡಿಸಿದ್ದಾರೆ,, ಅಲ್ಲದೆ ಗಾಯಿತ್ರಿ ಮಂತ್ರದ ಜೊತೆ ಜೊತೆಯಲ್ಲೇ ಇಸ್ಲಾಂ ಧರ್ಮದಲ್ಲಿ ಬರುವ “ಯಾ ಇಲಾಹಿ ಇಲ್ಲಲ್ಲಾ “ಎಂಬ ಸಾಲನ್ನು ಸೇರಿಸಿಕೊಂಡು ಶ್ಲೋಕವನ್ನು ರಿಮಿಕ್ಸ್ ಮಾಡಿ ಬ್ರಾಹ್ಮಣ ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ. ಟಾಸ್ಕ್ ಮಾಡುವ ವೇಳೆಯಲ್ಲಿ ಮೊಟ್ಟೆಯನ್ನು ಹಣೆಗೆ ಹೊಡೆದುಕೊಂಡಿದ್ದಾರೆ” ಎಂದು ಕೆಲ ಬ್ರಾಹ್ಮಣ ಪಂಡಿತರು ಕಿಡಿಕಾರಿದ್ದರು.

 

 

ಇದಕ್ಕೆ ಉತ್ತರ ಕೊಟ್ಟಿರುವ ಸಮೀರ್ ಪತ್ನಿ ಶ್ರಾವಣಿ “ನಮ್ಮವರ ವಿರುದ್ಧ ಮಾತನಾಡುವವರ ಮಾತಿಗೆ ಕಿವಿ ಕೊಡುವುದಿಲ್ಲ, ನಾವು ಎಂದೂ ಕೂಡ ಬ್ರಾಹ್ಮಣ ಸಂಪ್ರದಾಯಕ್ಕೆ ಅವಮಾನ ಮಾಡಿಲ್ಲ ಮಾಡುವುದೂ ಇಲ್ಲ, ಹೀಗೆ ಮನ ಬಂದಂತೆ ಮಾತನಾಡಿದರೆ ಮುಂದೊಂದು ದಿನ ತಕ್ಕ ಉತ್ತರ ಕೊಡಲಿದ್ದೇವೆ..ನಮ್ಮವರು ಗಾಯಿತ್ರಿ ಮಂತ್ರಕ್ಕೆ ಅಪಚಾರ ಮಾಡಿಲ್ಲ ಎಷ್ಟೋ ಜನ ತಮ್ಮ ಮೊಬೈಲ್ ರಿಂಗ್ ಟೋನ್ ಆಗಿ ಗಾಯಿತ್ರಿ ಮಂತ್ರವನ್ನು ಇಟ್ಟುಕೊಂಡಿರುವುದಿಲ್ಲವೇ . ಅವರು ಮಾಡಿದ್ದು ಭಜನೆಯಷ್ಟೇ” ಎಂದು ಹೇಳಿದ್ದಾರೆ.

 

 

“ಮೊಟ್ಟೆಯನ್ನು ಟಾಸ್ಕ್ ಇದ್ದ ಕಾರಣಕ್ಕಾಗಿ ಹೊರತು ಧರ್ಮಕ್ಕೆ ಅವಮಾನ ಮಾಡಬೇಕು ಎನ್ನುವ ಉದ್ದೇಶ ಅವರಲ್ಲಿ ಇಲ್ಲ. ಹಾಗೆ ನೋಡಿದರೆ ನಾವು ಉಸಿರಾಡುವ ಗಾಳಿಯೂ ಕಲುಷಿತವಾಗಿರುತ್ತದೆ. ಹಾಗಂತ ಗಾಳಿಯನ್ನು ದೂಷಿಸೋಕೆ ಆಗುತ್ತದೆಯೇ. ಕಾಮಾಲೆ ಕಣ್ಣಿಗೆ ಕಾಣೋದು ಬರಿ ಹಳದಿ. ಅಂತಹವರ ಮಾತಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ” ಎಂದು ಶ್ರಾವಣಿ ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top