fbpx
ದೇವರು

ಇಂಡೋನೇಷ್ಯಾದಲ್ಲಿ ಸಮೀಪದಲ್ಲಿ ಇರುವ ಬಾಲಿ ದೇಶದ ಸಮುದ್ರದ ಮಧ್ಯದಲ್ಲಿರುವ ಹಿಂದೂ ದೇವಾಲಯವನ್ನು ವಿಷ ಸರ್ಪಗಳು ಕಾವಲು ಕಾಯುತ್ತಿರುತ್ತವೆಯ೦ತೆ

ಸಮುದ್ರದ ಮಧ್ಯದಲ್ಲಿ ಒಂದು ದೇವಾಲಯ .

 

 

ಇಂಡೋನೇಷ್ಯಾದಲ್ಲಿ ಸಮೀಪದಲ್ಲಿ ಇರುವ ಬಾಲಿ  ದೇಶದ ಹೆಸರನ್ನು ನೀವು ಎಂದಾದರೂ ಕೇಳಿದ್ದೀರಾ ?  ಈ ದೇಶವಷ್ಟೇ ಅಲ್ಲ ಸುತ್ತಲೂ ಅನೇಕ ದೇಶಗಳು ಇರುತ್ತವೆ…. ಅವೆಲ್ಲಾ ದ್ವೀಪಗಳೆ ಈ ದ್ವೀಪಗಳೆಲ್ಲಾ ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ಬಾಲಿ ದೇಶದ ದ್ವೀಪಗಳ ಸುತ್ತಲೂ ಆವರಿಸಿರುವ ಸಮುದ್ರವನ್ನು ಮಾತ್ರ ಜಾವ ಸಮುದ್ರವೆಂದು ಕರೆಯುತ್ತಾರೆ .

ಇಷ್ಟಕ್ಕೂ ಅಸಲಿ ವಿಷಯ ಏನೆಂದರೆ ಈ ಬಾರಿ ದೇಶದ ಮಹಾ ಸಮುದ್ರದಲ್ಲಿರುವ ಒಂದು ಸಣ್ಣ ಬೆಟ್ಟದಲ್ಲಿ ಹಿಂದೂ ದೇವಾಲಯ ಇದೆ. ಇದು ಬಹಳಷ್ಟು ವರ್ಷಗಳ ಹಿಂದಿನಿಂದ ಇದೆ ಎಂದು ಹೇಳುತ್ತಾರೆ. ಈ ದೇವಾಲಯದ ವಿಶೇಷತೆ ಏನೆಂದರೆ ಬಾಲಿಯಲ್ಲಿನ ತಬನಾನ್ ಎಂಬ ಪ್ರದೇಶದ ಮಹಾ ಸಮುದ್ರದಲ್ಲಿ ಇರುವ ಬೆಟ್ಟದ ಮೇಲೆ ಇರುವ ಈ ದೇವಾಲಯವನ್ನು ತನಹಾ ಲಾಲ್ ಟೆಂಪಲ್ ಎಂದು ಕರೆಯುತ್ತಾರೆ.

 

ಇದು ಹಿಂದೂ ದೇವಾಲಯ ಇಲ್ಲಿ ಸಮುದ್ರ ಭೂಮಿ  ಎರಡೂ ಬೆರೆತು ದೈವವಾಗಿ ಮಾರ್ಪಟ್ಟಿದೆ ಎಂದು ನಂಬುತ್ತಾರೆ. ಈ ದೇವಾಲಯದ ಸುತ್ತಲೂ ಮಹಾ ಸಮುದ್ರ ಇರುವ ಕಾರಣ ದೊಡ್ಡದಾದ ಅಲೆಗಳು ಏಳುತ್ತಿರುತ್ತವೆ. ಒಮ್ಮೆ ಆ ರೀತಿ ಬಂದರೆ ದೇವಾಲಯದ ಮೆಟ್ಟಿಲುಗಳೆಲ್ಲಾ ಅದರಲ್ಲಿ ಮುಳುಗುತ್ತವೆ. ಈ ಅಲೆಗಳು ಹೊರಡುತ್ತಿದ್ದ೦ತೆ ಮೆಟ್ಟಿಲುಗಳು ನಮಗೆ ಕಾಣಿಸುತ್ತವೆ. ಆ ಸಮಯದಲ್ಲಿ ಆ ದೇವಾಲಯದೊಳಗೆ ಹೋಗಬೇಕು. ಇಲ್ಲದಿದ್ದರೆ ಅಲೆ ಬಂದಾಗ ಮೆಟ್ಟಿಲು ಮೇಲಿದ್ದರೆ ಆ ಅಲೆಗಳ ಜೊತೆಗೆ ಸಮುದ್ರದೊಳಕ್ಕೆ ಕೊಚ್ಚಿ ಹೋಗುತ್ತಾರೆ.

 

 

ಇನ್ನೂ ಈ ದೇವಾಲಯದ ಸುತ್ತಲೂ ಇರುವ ಸಣ್ಣ ಸಣ್ಣ ದ್ವೀಪಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಿದ್ದಾರೆ. ಹಾಗಾಗಿ ಇಲ್ಲಿ ಪ್ರವಾಸಿಗರು ಸಹ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ದೇವಾಲಯದ ಕೆಳಭಾಗದಲ್ಲಿ ಅದೆಷ್ಟೋ ಪುರಾತನವಾದ ವಸ್ತುಗಳು, ಅದೆಷ್ಟೋ ಬೆಲೆ ಬಾಳುವಂತವು  ಇವೆಯಂತೆ ಅವುಗಳನ್ನು ಕಣ್ಣಿಗೆ ಕಾಣಿಸದ ವಿಷ ಸರ್ಪಗಳು ಕಾವಲು ಕಾಯುತ್ತಿರುತವೆಯ೦ತೆ.

 

 

ಯಾರೇ ಆಗಲಿ ಆ ವಸ್ತುಗಳನ್ನು ಕಳ್ಳತನ ಮಾಡಬೇಕೆಂದು ಪ್ರಯತ್ನಿಸಿದರೆ ಅವು ಕಚ್ಚಿ ಸಾಯಿಸುತ್ತವೆ. ಎಂದು ಅಲ್ಲಿನ ಸ್ಥಳೀಯರು ನಂಬುತ್ತಾರೆ.

 

ಇನ್ನು ಈ ದೇವಾಲಯದಲ್ಲಿರುವ ಇನ್ನೊಂದು ವಿಶೇಷತೆಯೆಂದರೆ ಈ ದೇವಾಲಯ ಒಟ್ಟಾರೆ ಒಂದೇ ಕಲ್ಲಿನ ಮೇಲಿದೆ. ದೊಡ್ಡ ಬಂಡೆಯನ್ನು ದೇವಾಲಯವನ್ನಾಗಿ ಕೆತ್ತಿಸಲಾಗಿದೆ. ಹಾಗಾಗಿ ದೇವಾಲಯದ ಪ್ರದೇಶ ನೋಡಲು ತುಂಬಾ ಮನೋಹರವಾಗಿರುತ್ತದೆ.

ಇನ್ನೂ ಬೆಳಗ್ಗೆ ಸಂಜೆ ವೇಳೆಯಲ್ಲಿ ಸೂರ್ಯೋದಯದ ಮತ್ತು ಸೂರ್ಯಾಸ್ತಮದ ಪ್ರಕೃತಿಯನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಅಷ್ಟು ಸುಂದರವಾಗಿ ಈ ದೇವಾಲಯದ ಪ್ರವೇಶ ಇರುತ್ತದೆ.

ಆದರೆ ಈ ದೇವಾಲಯಕ್ಕೆ ಹೋಗಬೇಕಾದರೆ ಹೆಚ್ಚಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಪ್ರಾಣಾಪಾಯ ಪರಿಸ್ಥಿತಿ ಹೆಚ್ಚಾಗಿರುತ್ತದೆ. ಆದ ಕಾರಣ ರಕ್ಷಣೆಗಾಗಿ ಇಷ್ಟೆಲ್ಲಾ ಖರ್ಚಾಗುತ್ತದೆ. ಏನೇ ಆಗಲಿ ಜೀವನದಲ್ಲಿ ಈ ದೇವಾಲಯವನ್ನು ಒಮ್ಮೆಯಾದರೂ ನೋಡಲೇಬೇಕು ಅಲ್ಲವೇ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top