ದೇವರು

ಹಣವಿದ್ದರೂ ನಿಮ್ಮ ಬಳಿ ನೀವು ಇಲ್ಲ ಎಂದು ಹೇಳುತ್ತಿರಾ  ?  ಹಾಗಾದರೆ ಒಂದು ದಿನ ಹಾಗೆಯೇ ಆಗುತ್ತದೆ ಎನ್ನುತ್ತದೆ ಶಾಸ್ತ್ರ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹಣವಿದ್ದರೂ ನಿಮ್ಮ ಬಳಿ ನೀವು ಇಲ್ಲ ಎಂದು ಹೇಳುತ್ತಿರಾ  ?  ಹಾಗಾದರೆ ಒಂದು ದಿನ ಹಾಗೆಯೇ ಆಗುತ್ತದೆ.

 

 

ಸಾಮಾನ್ಯವಾಗಿ  ಪ್ರತಿಯೊಬ್ಬರೂ ಯಾವುದೇ ಒಂದು ಮಾತನಾಡುವ ಮಾತಿನಲ್ಲಿ ಆಲೋಚಿಸುವ ಯೋಚನೆಯಲ್ಲಿ  ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಹಾಗಾಗಿ ನಮ್ಮ ಆಲೋಚನೆಗಳು ಮತ್ತು ನಾವು ಮಾತನಾಡುವ ಮಾತುಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯರು ಯಾವಾಗಲೂ ಹೇಳುತ್ತಾರೆ.

ಯಾಕೆಂದರೆ ತಥಾಸ್ತು ಎನ್ನುವ ಅಶ್ವಿನಿ ದೇವತೆಗಳು ಇರುತ್ತಾರಂತೆ. ನಾವು ಏನನ್ನೇ ಮಾತನಾಡಿದರೂ ಸಹ ಅವರು ತಥಾಸ್ತು ಎನ್ನುತ್ತಾರಂತೆ. ಆದ್ದರಿಂದ ನಾವು ಮಾತನಾಡುವ ಮಾತುಗಳನ್ನು ತುಂಬಾ ಎಚ್ಚರದಿಂದ ಯೋಚನೆ ಮಾಡಿ ಒಳ್ಳೆಯದನ್ನೇ ಮಾತನಾಡಬೇಕು.

ಅಶ್ವಿನಿ ದೇವತೆಗಳ ಪ್ರಕಾರ ನಮ್ಮ ಮನಸ್ಸು ಒಳ್ಳೆಯದನ್ನು ಕೇಳಿಕೊಂಡರೆ ಅದೇ ನಡೆಯುತ್ತದೆ. ಕೇಡು ಬಯಸಿದರೆ ಕೇಡು ಸಂಭವಿಸುತ್ತದೆ . ಬರಿ ಕಷ್ಟಗಳೇ ಹೆಚ್ಚುತ್ತದೆ. ಹಾಗಾಗಿ ಒಳ್ಳೆಯದನ್ನು ಯೋಚಿಸಿದರೆ ತಥಾಸ್ತು ಎನ್ನುವ ಅಶ್ವಿನಿ  ದೇವತೆಗಳ ಆಶೀರ್ವಾದದಿಂದ ನಮ್ಮೆಲ್ಲರಿಗೂ ಒಳ್ಳೆಯದೇ ಆಗುತ್ತದೆ.

 

ವಿಶೇಷವಾಗಿ  ಸಂಧ್ಯಾ ಸಮಯದಲ್ಲಿ ತಥಾಸ್ತು ದೇವತೆಗಳು ( ಅಶ್ವಿನಿ ದೇವತೆಗಳು) ಸಂಚಾರ ಮಾಡುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಮನುಷ್ಯನು ತನ್ನ ಧರ್ಮಕ್ಕೆ ವಿರುದ್ಧವಾಗಿ ಯಾವುದೇ ಮಾತುಗಳನ್ನು ಆಡಬಾರದು. ಹಾಗೆ ಮಾಡಿದರೆ ದೇವತೆಗಳು ತಥಾಸ್ತು ಎಂದು ಹೇಳುತ್ತಾರೆ .

ನಮ್ಮ ಬಗ್ಗೆ ನಾವೇ ನಕಾರಾತ್ಮಕವಾಗಿ ಯೋಚಿಸುವ ಯೋಚನೆಗಳು ಸಹ ಒಮ್ಮೊಮ್ಮೆ ನಡೆದೇ ಬಿಡುತ್ತವೆ. ಕೆಟ್ಟ ಮಾತುಗಳು ಅಥವಾ ಕೆಟ್ಟ ಆಲೋಚನೆಗಳು ಪದೇ ಪದೇ ಪುನರಾವರ್ತನೆ ಮಾಡುತ್ತಿದ್ದರೆ ಒಂದು ದಿನ ಅವುಗಳೇ ನಡೆದುಬಿಡುತ್ತವೆ. ಆ ಮಾತುಗಳೇ ನಡೆದು ಹೋಗಿ ಈ ತಥಾಸ್ತು ಎನ್ನುವ ಅಶ್ವಿನಿ ದೇವತೆಗಳಿಂದ  ನಡೆಯುತ್ತದೆ.

ಕೆಲವರು ತಮ್ಮ ಬಳಿ ಹಣವಿದ್ದರೂ ಯಾವಾಗಲೂ ಇಲ್ಲ ಎಂದು ಹೇಳುತ್ತಾರೆ .ಹೀಗೆ ಈ ರೀತಿ ಹಣ ಇಲ್ಲ ಎಂದು ಯಾವುದೇ ಕಾರಣಕ್ಕೂ ಹೇಳ ಬಾರದಂತೆ. ಈ ರೀತಿ ಹೇಳಿದರೆ ಒಂದು ದಿನ ನಮ್ಮ ಬಳಿ ಸಂಪೂರ್ಣವಾಗಿ ಹಣವೇ ಇಲ್ಲದಂತಾಗುತ್ತದೆ.

 

 

ಹಾಗೆಯೇ ಆರೋಗ್ಯ ಸರಿಯಿಲ್ಲ ಎಂದು ಸುಮ್ಮನೆ ಅನ್ನುತ್ತಿರುತ್ತಾರೆ. ಅಂತಹ ಮಾತುಗಳಿಂದ ತಥಾಸ್ತು ದೇವತೆಗಳು ತಥಾಸ್ತು ಎಂದರೆ ನಿಜವಾಗಿ ನಡೆದೇ ಬಿಡುತ್ತದೆ. ಹಾಗಾಗಿ ನಿಮ್ಮನ್ನು ಯಾರಾದರೂ ಹಣ ಕೇಳಿದರೆ ಕೊಡಲು ಇಷ್ಟವಿಲ್ಲದಿದ್ದರೆ ಕೊಡಲು ಆಗುವುದಿಲ್ಲ ಎಂದು ಹೇಳಿ ಅಷ್ಟೇ ಹೊರತು ಹೀಗೆ ನಿಮ್ಮ ಬಗ್ಗೆ ನೀವು ಕೀಳಾಗಿ ಎಂದಿಗೂ ಸಹ ಹೇಳಿಕೊಳ್ಳಬೇಡಿ.

ಹಾಗಾಗಿ ತನಗಿರುವ ಸ್ಥಿತಿಯ ಬಗ್ಗೆ ಸುಳ್ಳು ಹೇಳುವುದು ಒಳ್ಳೆಯದಲ್ಲ . ಯಾವಾಗಲೂ ಸತ್ಯವನ್ನೇ ಹೇಳಬೇಕು ಎಂದು ಆಧ್ಯಾತ್ಮಿಕ ಪಂಡಿತರು ಧರ್ಮವನ್ನು ಪಾಲಿಸಿರಿ ಎಂದು ಹೇಳಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top