fbpx
ಮನೋರಂಜನೆ

ನೀನಾಸಂ ತಂಡದ ಹೊಸ ಚಿತ್ರಕ್ಕೆ ಹಾರೈಸಲಿದ್ದಾರೆ ದರ್ಶನ್..!

ನೀನಾಸಂ ತಂಡದ ಹೊಸ ಚಿತ್ರಕ್ಕೆ ಹಾರೈಸಲಿದ್ದಾರೆ ದರ್ಶನ್..!

 

 

ಕನ್ನಡ ಚಿತ್ರರಂಗಕ್ಕೆ ಪ್ರತಿಭಾನ್ವಿತ ನಟರನ್ನು ಕೊಡ ಮಾಡಿದ ಸಂಸ್ಥೆ ನೀನಾಸಂ. ಇಲ್ಲಿಂದ ಕಲಿತು ಬಂದಿರುವವರು ಚಿತ್ರರಂಗದ ನಾನಾ ವಿಭಾಗಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ನೀನಾಸಂ ತಂಡವೇ ಸೇರಿಕೊಂಡು ಚಿತ್ರವೊಂದನ್ನು ಮಾಡಹೊರಟಿದೆ. ಎಲ್ಲ ವಿಭಾಗಳನ್ನೂ ನೀನಾಸಂ ತಂಡವೇ ನಿಭಾಯಿಸಲಿರೋ ಈ ಚಿತ್ರಕ್ಕೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡೋ ಮೂಲಕ ಚಾಲನೆ ಕೊಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ದರ್ಶನ್ ಕೂಡಾ ನೀನಾಸಂ ವಿದ್ಯಾರ್ಥಿಯಾಗಿದ್ದವರು. ಇದೀಗ ಕನ್ನಡದ ಸೂಪರ್ ಸ್ಟಾರ್ ಆಗಿರೋ ದರ್ಶನ್ ನೀನಾಸಂ ಮೇಲಿನ ಅಭಿಮಾನದಿಂದ ಅದೇ ಸಂಸ್ಥೆಯಲ್ಲಿ ಕಲಿತವರ ತಂಡದ ಈ ಕನಸಿಗೆ ಪ್ರೋತ್ಸಾಹ ಕೊಡಲಿದ್ದಾರೆ.

 

 

ಅಂದಹಾಗೆ ಈ ಚಿತ್ರಕ್ಕೆ `ಹಿಕೋರಾ ಎಂಬ ಡಿಫರೆಂಟಾದ ಶೀರ್ಷಿಕೆ ಇಡಲಾಗಿದೆ. ಇದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆಯಂತೆ. ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಟನೆ ಈ ಎಲ್ಲಾ ವಿಭಾಗಳನ್ನೂ ನೀನಾಸಂ ತಂಡವೇ ನಿರ್ವಹಿಸಲಿದೆಯಂತೆ. ಹಿರಿಯ ನಟಿ ಲಕ್ಷ್ಮಿ ಅವರು ಮುಖ್ಯ ಪಾತ್ರವೊಂದರಲ್ಲಿ ನಟಿಸಲಿರೋ ಈ ಚಿತ್ರ ನೀಲಕಂಠೇಶ್ವರ ಸಿನೆ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ.

 

 

ನೀನಾಸಂ ಸಂಸ್ಥೆಯಲ್ಲಿ ಸರಿಸುಮಾರು ಇಪ್ಪತ್ತು ವರ್ಷಗಳ ಕಾಲ ಇದ್ದು ಅಲ್ಲಿನ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿಕೊಡುತ್ತಿದ್ದ ರತ್ನಾ ಶ್ರೀಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪತ್ರಕರ್ತ ಮತ್ತು ನೀನಾಸಂ ತಂಡದಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿನಾಯಕರಾಮ್ ಕಲಗಾರು ಈ ಚಿತ್ರದ ಸಹನಿರ್ಮಾಣದ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.

 

 

 

ನೀನಾಸಂ ವಿದ್ಯಾರ್ಥಿಯಾಗಿದ್ದ ಕೃಷ್ಣಪೂರ್ಣ ನೀನಾಸಂ ಈ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಮುಂದಿನ ತಿಂಗಳ ಮೂರನೆ ವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ರಮೇಶ್ ಬಾಬು ಕ್ಯಾಮರಾ. ಪೂರ್ಣಚಂದ್ರ ತೇಜಸ್ವಿ ಸಂಗೀತ. ದಯವಿಟ್ಟು ಗಮನಿಸಿ ಕಿರಣ್ ಸಂಕಲನ ಈ ಚಿತ್ರಕ್ಕಿದೆ. ದರ್ಶನ್ ಅವರ ಹಾರೈಕೆಯೊಂದಿದ್ದರೆ ಸಾಕು ಅನ್ನೋದನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರತಂಡ ಕೆಲಸ ಆರಂಭಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top