ಕಿರುತೆರೆ

ಬಿಗ್ ಬಾಸ್ ನಲ್ಲಿ ಜಯಶ್ರೀನಿವಾಸನ್ ಮತ್ತು ನಿವೇದಿತಾ 100 ದಿನ ಇರೋದು ಪಕ್ಕಾ!

ಬಿಗ್ ಬಾಸ್ ನಲ್ಲಿ ಜಯಶ್ರೀನಿವಾಸನ್ ಮತ್ತು ನಿವೇದಿತಾ 100 ದಿನ ಇರೋದು ಪಕ್ಕಾ!

 

 

ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ನೂರು ದಿನ ಇರೋದು ಗ್ಯಾರಂಟಿಯಂತೆ. ಹಾಗಂತ ಕಾರ್ಯಕ್ರಮದ ಆಯೋಜಕರು ಹೇಳಿರುವ ಮಾತಲ್ಲ ಹೇಗೆ ಹೇಳಿದ್ದು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್..

 

 

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಲೆಕ್ಕ ಹಾಕಿರುವ ಜಯಶ್ರೀನಿವಾಸನ್ ‘ಬಿಗ್ ಬಾಸ್’ ಮನೆಯಲ್ಲಿ “ನಿವೇದಿತಾ ಮತ್ತು ನಾನು ನೂರು ದಿನ ಇರುವುದು ಪಕ್ಕಾ” ಎಂದು ಹೇಳಿದ್ದಾರೆ.

 

 

ಗಾರ್ಡನ್ ಏರಿಯಾದಲ್ಲಿ ದಿವಾಕರ್, ನಿವೇದಿತಾ ಮತ್ತು ರಿಯಾಜ್ ರವರೊಂದಿಗೆ ಮಾತನಾಡುತ್ತಿದ್ದಾಗ “ನೀನು ಬರೆದಿಟ್ಟಿಕೊ ನಾನು ಮತ್ತು ನಿವೇದಿತಾ ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳು ಇರೋದು ಗ್ಯಾರಂಟಿ “ಎಂದು ಜಯಶ್ರೀನಿವಾಸನ್ ಕಾಲೆಳೆದರು.

 

 

ಜಯ ಶ್ರೀನಿವಾಸನ್ ಹೀಗೆ ಹೇಳುತ್ತಿದ್ದಂತೆ “ದೇವ್ರಾಣೆ ನೀವು ನೂರು ದಿನ ಇರಲ್ಲ ಯಾಕಂದ್ರೆ ನೀವೇ ಗೆಲ್ಲೋದಾದ್ರೆ ಒಳಗಡೆ ಕಷ್ಟ ಪಟ್ಟೋರು ಇದ್ದಾರೆ ಅವರ ಕಥೆ ಏನಾಗಬೇಕು. ಸುಖವಾಗಿ ಬಂದೋರೆಲ್ಲ ಗೆಲ್ಲೋದಕ್ಕೆ ಚಾನ್ಸ್ ಇಲ್ಲ ” ಅಂತ ದಿವಾಕರ್ ಹೇಳಿದರು. ಅದಕ್ಕೆ ಉತ್ತರಿಸಿದ ಜಯಶ್ರೀನಿವಾಸನ್ “ನಾವೂ ಗೆಲ್ತೀವಿ ನೀನು ನೋಡ್ತಾ ಇರು” ಎಂದು ದಿವಾಕರ್ ಗೆ ಸವಾಲು ಹಾಕಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top