ದೇವರು

ಕೆಂಗಲ್ ಹನುಮಂತರಾಯ ಸ್ವಾಮಿ ದೇವಸ್ಥಾನಕ್ಕೆ ಮಕ್ಕಳಿಲ್ಲದ ದಂಪತಿಗಳು , ಅನಾರೋಗ್ಯದಿಂದ ಬಳಲುತ್ತಿರುವವರು ಹೋದ್ರೆ ಒಳ್ಳೆ ಫಲ ಸಿಗುತ್ತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೆಂಗಲ್ ಹನುಮಂತರಾಯ ಸ್ವಾಮಿಯ ದೇವಾಲಯ.

 

ಕೆಂಗಲ್ ಹನುಮಂತರಾಯ ಸ್ವಾಮಿಯ ದೇವಸ್ಥಾನವು ಕರ್ನಾಟಕದ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಎಂಬ  ಗ್ರಾಮದಲ್ಲಿದೆ.ಬೆಂಗಳೂರು ಮತ್ತು ಮೈಸೂರಿನ ಮಾರ್ಗದಲ್ಲಿ ಹೋಗುವ ರಸ್ತೆಯಲ್ಲಿ ಈ ಗ್ರಾಮವಿದೆ. ಈ ದೇವರ ವಿಗ್ರಹ 5.5  ಅಡಿ ಎತ್ತರವಿದ್ದು ,ಈ ವಿಗ್ರಹವನ್ನು ಸ್ವಯಂಭು ಹನುಮಾನ್ ಎಂದು ಕರೆಯುತ್ತಾರೆ. ಸ್ವಯಂಭು ಎಂದರೆ ಸ್ವಯಂ ಉದ್ಭವ, ಸ್ವಯಂ ಪ್ರೇರಿತ ಎಂದರ್ಥ.

 

 

ಸ್ವತಃ ತಯಾರಿಸುವುದು, ಸ್ವಯಂ ಅಭಿವ್ಯಕ್ತಿ ಅಥವಾ ಅದರ ಸ್ವಂತ ಒಪ್ಪಂದದಿಂದ ಸೃಷ್ಟಿಸಲ್ಪಟ್ಟಿದೆ. ಈ ಮೂರ್ತಿಯಲ್ಲಿ ದೇವರ ಮೀಸೆ ವಿಶೇಷವಾಗಿದೆ. ಈ ವಿಗ್ರಹವು ಕೆಂಪು ಕಲ್ಲುಗಳಿಂದ ಮಾಡಲಾಗಿದ್ದು. ಕೆಂಗಲ್ ಎಂದರೆ ಕೆಂಪು ಕಲ್ಲು ಎಂದರ್ಥ .

ಈ ವಿಗ್ರಹವು ಕೆಂಪು ಕಲ್ಲಿನಿಂದ ಉದಯಸಿರುವುದರಿಂದ ಇಲ್ಲಿಗೆ ಕೆಂಗಲ್ ಆಂಜನೇಯ ಸ್ವಾಮಿ ಅಥವಾ ಕೆಂಗಲ್ ಹನುಮಂತರಾಯ ಸ್ವಾಮಿ ಎಂಬ  ಹೆಸರಿನಿಂದ ಕರೆಯುತ್ತಾರೆ.

ಸುಮಾರು ಸಾವಿರ ವರ್ಷಗಳ ಹಿಂದೆ ವ್ಯಾಸ ಋಷಿ ಮಹರ್ಷಿಗಳು  ಪ್ರಕಾಶಮಾನವಾದ ಕೆಂಪು ಬಂಡೆಯ ಮೂಲಕ ಹಾದು ಹೋಗುವಾಗ ದಾರಿ  ಮಾರ್ಗದಲ್ಲಿ  ಈ ಬಂಡೆಯನ್ನು ನೋಡಿದ ನಂತರ ಖುಷಿಯಾಗಿ ಈ ಬಂಡೆಗಳಿಂದ ಹನುಮಂತನನ್ನು ಕೆತ್ತಿಸಿದ್ದರು. ಈ ದೇವರ ವಿಗ್ರಹ ತೀರಾ ಅಪರೂಪವಾದ ಪರಿಪೂರ್ಣ ಮೀಸೆಯನ್ನು ಸಹ ಒಳಗೊಂಡಿದೆ .

 

 

ಕೆಂಗಲ್ ಹನುಮಂತರಾಯ ಸ್ವಾಮಿಯ ದೇವಾಲಯ  ಅತ್ಯಂತ  ಪುರಾತನ ದೇವಾಲಯಗಳಲ್ಲಿ ಒಂದಾಗಿದೆ  ಎಂದು ಮಹಾಕಾವ್ಯ ಮಹಾಭಾರತವನ್ನು ಬರೆದ ಋಷಿ  ವ್ಯಾಸರು ಈ ವಿಗ್ರಹವನ್ನು ನಿರ್ಮಿಸಿದ್ದರು.

ಈ ವಿಗ್ರಹವು ಬಹಳಷ್ಟು ಶಕ್ತಿಯನ್ನು ಹೊಂದಿದೆ. ಇಲ್ಲಿಗೆ ಬಂದು ತಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಬೇಡಿಕೊಂಡರೆ  ಕಷ್ಟಗಳಿಗೆ ಪರಿಹಾರ ಸಿಗುವುದೆಂದು ಇಲ್ಲಿನ ಜನರ ನಂಬಿಕೆ .ಈ ದೇವರು ಕೆಟ್ಟದ್ದನ್ನು ಶಿಕ್ಷಿಸುವುದಕ್ಕೆ  ಯಾವುದೇ ರೀತಿಯ ದಯೆ ತೋರುವುದಿಲ್ಲ. ಹಾಗೆ ಒಳ್ಳೆಯವರನ್ನು ಸಹ ಎಂದಿಗೂ ಕೈಬಿಡುವುದಿಲ್ಲ.ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳು ಮತ್ತು ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಇದು ಸುಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದೆ.

 

 

ಈ ದೇವಸ್ಥಾನದ ವಾಸ್ತು ಶಿಲ್ಪದ ಒಂದು ಅದ್ಭುತವೆಂದರೆ ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಕಿರಣಗಳು ಜನವರಿ 14  ಮತ್ತು 15   ನೇ ತಾರೀಖಿನಂದು  ಅಂದರೆ ಉತ್ತರಾಯಣದ ಪುಣ್ಯಕಾಲದ ಮೊದಲ ದಿನವೇ ನೇರವಾಗಿ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ. ಇದು ಇತರೆ ದಿನಗಳಲ್ಲಿ ಈ ವಿಸ್ಮಯ ನೋಡಲು ಸಿಗುವುದಿಲ್ಲ .

ಮೊದಲು  ಈ ಮೂರ್ತಿಯ ಒಂದು ಕಡೆ  ಮಾತ್ರ ಮೀಸೆ  ಕಾಣಿಸುತ್ತಿತ್ತು. ಆದರೆ ಸ್ವಲ್ಪ ದಿನಗಳ ಹಿಂದೆಯಿಂದ ಈ ದೇವರ ಮೂರ್ತಿಯ ಎರಡೂ ಬದಿಯ ಮೇಲೆ ಮೀಸೆ ಕಾಣಿಸುತ್ತಿರುವುದು ಇತ್ತೀಚಿನ ವಿಸ್ಮಯವಾಗಿದೆ.

 

 

ಕೆಂಗಲ್ ಹನುಮಂತರಾಯ ಸ್ವಾಮಿಯ ದೇವಸ್ಥಾನಕ್ಕೆ ಹೋಗುವುದಕ್ಕೆ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಹಾದು ಹೋಗುವ ರಸ್ತೆಯ ಬದಿಯ ಪಕ್ಕದಲ್ಲೇ ಈ ದೇವಸ್ಥಾನವು ನಿಮಗೆ ಕಾಣಸಿಗುತ್ತದೆ. ಚನ್ನಪಟ್ಟಣ ಮತ್ತು ರಾಮನಗರದ  ಮಧ್ಯದಲ್ಲಿ ವಂದಾರಗುಪ್ಪೆ ಎಂಬ ಒಂದು ಊರು ಸಿಗುತ್ತದೆ ಅಲ್ಲಿಯೇ ಈ ಕೆಂಗಲ್ ಹನುಮಂತರಾಯ ಸ್ವಾಮಿಯ ದೇವಸ್ಥಾನ ನೆಲೆಗೊಂಡಿದೆ. ಬೆಂಗಳೂರಿನಿಂದ 55  ಕಿಲೋಮೀಟರ್ ಮತ್ತು ಚನ್ನಪಟ್ಟಣದಿಂದ ಮತ್ತು ರಾಮನಗರದಿಂದ ದೇವಸ್ಥಾನಕ್ಕೆ ಆಟೋ ಮತ್ತು ಬಸ್ಸುಗಳ ಸೌಲಭ್ಯವಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top