ಜ್ಯೋತಿಷ್ಯ

ಸಂಖ್ಯಾ ಶಾಸ್ತ್ರದ ಪ್ರಕಾರ ನೀವು ಹುಟ್ಟಿದ ತಾರೀಖು ನಿಮ್ಮ ಅದೃಷ್ಟದ ವರ್ಷ ತುಂಬಾ ಚೆನ್ನಾಗಿ ಹೇಳುತ್ತೆ ಯಾವುದು ಅಂತಾ ತಿಳ್ಕೊಬೇಕಾದ್ರೆ ಮುಂದೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೀವು ಹುಟ್ಟಿದ ತಾರೀಖಿನಿ೦ದ ನಿಮ್ಮ ಅದೃಷ್ಟದ ವರ್ಷ  ಯಾವುದೆಂದು ತಿಳಿಯಿರಿ.

 

 

ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವೂ ಆತ ಹುಟ್ಟಿದ ಕ್ಷಣವೇ ನಿರ್ಧರಿಸುತ್ತದೆ ಎನ್ನುವುದನ್ನು ಜ್ಯೋತಿಷ್ಯ  ಶಾಸ್ತ್ರ ಹೇಳುತ್ತದೆ. ಹಾಗೆಯೇ ಹುಟ್ಟಿದ ದಿನಾಂಕವೇ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಅದೃಷ್ಟದ ವರ್ಷವನ್ನು ತಿಳಿಸುತ್ತದೆ ಎನ್ನುವುದನ್ನು ಸಹ ವ್ಯಾಖ್ಯಾನಿಸುತ್ತದೆ. ಇವುಗಳ ಬಗ್ಗೆ ನಮಗೆ ನಂಬಿಕೆ ಇರಬೇಕು ಅಷ್ಟೇ.

ವ್ಯಕ್ತಿಗೆ ಸುಖವಿದ್ದಾಗ ಅದೃಷ್ಟ ಹಾಗೂ ದೈವ ಶಕ್ತಿಯ ಬಗ್ಗೆ ಹೆಚ್ಚು ಒಲವು ತೋರಿಸುವುದಿಲ್ಲ. ಅದೇ ಸಮಸ್ಯೆಗಳು ಬಂದಾಗ ಅದು  ಒಂದಾದ ಮೇಲೊಂದರಂತೆ ಸಮಸ್ಯೆಗಳು ಬರುತ್ತಿರುವಾಗ ಬೇಡವೆಂದರೂ ಮನಸ್ಸು ಭವಿಷ್ಯದ ಬಗ್ಗೆ ಯೋಚಿಸುತ್ತದೆ ಮತ್ತು ದೇವರು ಪೂಜೆ , ಪುನಸ್ಕಾರ, ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕೆ ಪ್ರಾರಂಭಿಸುತ್ತೇವೆ.

 

 

ನೀವು ಹುಟ್ಟಿದ ದಿನ ಎರಡಂಕಿಯಿಂದ ಕೂಡಿದ್ದರೆ , ಸಂಖ್ಯೆಗಳನ್ನು ಬಿಡಿ ಬಿಡಿಯಾಗಿ ಕೂಡಿಸಿ

ಅದೃಷ್ಟದ ದಿನ ಯಾವ ಹೊತ್ತಿಗೆ ಬರುವುದೋ ಎಂದು ನಾವು ಕಾಯುತ್ತಿರುತ್ತೇವೆ. ಇಂತಹ ಮನಸ್ಸಿಗೆ ಸಾಂತ್ವನ ನೀಡುವ ವಿಚಾರದ ಬಗ್ಗೆ ಅಧಿಕ ಚಿಂತನೆ  ನಡೆಸುವ ಅಗತ್ಯವಿಲ್ಲ. ಯಾಕೆಂದರೆ ನಾವು ಹುಟ್ಟಿದ ತಾರೀಖು  ಯಾವುದು ಎನ್ನುವುದರ ಆಧಾರದಿಂದ ಅದೃಷ್ಟದ ವರ್ಷವನ್ನು ಸಹ ತಿಳಿಯಬಹುದು. ಅದು ಹೇಗೆ ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಇದನ್ನು ಒಮ್ಮೆ ಓದಿ …

ಸಂಖ್ಯೆ ಒಂದರ ಅದೃಷ್ಟದ ವರ್ಷ.


 

 

ನೀವು ಯಾವುದೇ ತಿಂಗಳಿನಲ್ಲಿ ದಿನಾಂಕ ಒಂದು, ಹತ್ತು, ಹತ್ತೊಂಬತ್ತು ಮತ್ತು 28 ನೇ ತಾರೀಖಿನಂದು ಹುಟ್ಟಿದ್ದರೆ ನಿಮ್ಮ ಸಂಖ್ಯೆ ಒಂದೇ ಆಗಿರುತ್ತದೆ. ಈ ಸಂಖ್ಯಾಶಾಸ್ತ್ರದ ಪ್ರಕಾರ  ಸ೦ಖೈ  ಒಂದರಲ್ಲಿ   ಹುಟ್ಟಿದವರ ಅದೃಷ್ಟದ ವರ್ಷ 22 ನೇ ವರ್ಷ  ಎಂದು ಹೇಳಲಾಗಿದೆ. ಈ ವರ್ಷದಲ್ಲಿ ವ್ಯಕ್ತಿ ಎಲ್ಲಾ ವಿಚಾರದಲ್ಲಿಯೂ ಯಶಸ್ಸು ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಲಾಭವನ್ನು ಪಡೆದುಕೊಳ್ಳಲು  ಆರಂಭವಾಗುವುದು. ಈ ವರ್ಷದಲ್ಲಿ ಬಹಳಷ್ಟು ಹಣದ ಹರಿವನ್ನು ಪಡೆಯುತ್ತಾರೆ.

ಸಂಖ್ಯೆ ಎರಡರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ ಎರಡು, ಹನ್ನೊಂದು , ಇಪ್ಪತ್ತು ಮತ್ತು 29 ನೇ ತಾರೀಖಿನಂದು  ಜನಿಸಿದಲ್ಲಿ ಇವರ ಸಂಖ್ಯೆ ಎರಡು. ಸಂಖ್ಯೆ ಎರಡರ ವ್ಯಕ್ತಿಗಳಿಗೆ ಅವರ ಅದೃಷ್ಟದ ವರ್ಷವೂ ಇಪ್ಪತ್ತನಾಲ್ಕನೇ ವರ್ಷವಾಗಿದೆ. ಈ ವರ್ಷದಿಂದ ವ್ಯಕ್ತಿಯೂ ಕೆಲಸ ಮಾಡಲು ಆರಂಭಿಸುತ್ತಾನೆ. ಜೊತೆಗೆ ಉತ್ತಮ ಆದಾಯ ಹಾಗೂ ಹಣಕಾಸಿನ ಲಾಭವನ್ನು ಗಳಿಸಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗಿದೆ.

 ಸಂಖ್ಯೆ ಮೂರರ ಅದೃಷ್ಟದ ವರ್ಷ.

 

 

ನೀವು ಯಾವುದೇ ತಿಂಗಳಿನಲ್ಲಿ ದಿನಾಂಕ ಮೂರು, ಹನ್ನೆರಡು, ಇಪ್ಪತ್ತೊಂದು  ಮತ್ತು ಮೂವತ್ತನೇ ತಾರೀಖಿನಂದು  ಜನಿಸಿದ್ದರೆ ನಿಮ್ಮ ಸಂಖ್ಯೆ ಮೂರು. ಈ ಮೂರನೇ ಸಂಖ್ಯೆಯ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ ಮೂವತ್ತೆರಡನೇ ವರ್ಷ ಎಂದು ಹೇಳಲಾಗಿದೆ. ಈ ವರ್ಷದಿಂದ ಅವರ ಕಷ್ಟಗಳು ಕರಗುತ್ತಾ ಬರುತ್ತದೆ. ಕಷ್ಟ ಪಟ್ಟು ಕೆಲಸ ಮಾಡುತ್ತಿರುವುದಕ್ಕೆ ಯಶಸ್ಸು ಸಾಧಿಸಲು ಸಹಾಯವಾಗುವುದು ಎಂದು ಹೇಳಲಾಗಿದೆ.

 ಸಂಖ್ಯೆ ನಾಲ್ಕರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ  ನಾಲ್ಕು, ಹದಿಮೂರು, ಇಪ್ಪತ್ತೆರಡು ಮತ್ತು ಮುವತ್ತೊ೦ದನೇ ತಾರೀಖಿನಂದು  ಹುಟ್ಟಿದ್ದರೆ ಅವರ ಸಂಖ್ಯೆ ನಾಲ್ಕು. ಈ ನಾಲ್ಕನೇ ಸಂಖ್ಯೆಯ ಆಡಿಯಲ್ಲಿ ಜನಿಸಿದವರಿಗೆ ಅದೃಷ್ಟದ ವರ್ಷ ಮೂವತ್ತಾರನೆ  ವರ್ಷದಿಂದ  ನಲವತ್ತೆರಡನೇ ವರ್ಷ ಎಂದು ಹೇಳಲಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಗಳು ಹೆಚ್ಚು ಸಾಮಾಜಿಕ ಮನ್ನಣೆಯನ್ನು , ಪ್ರಚಾರ, ವಿತ್ತೀಯ ಲಾಭ, ಸೇರಿದಂತೆ ಇನ್ನಿತರ ಯಶಸ್ಸು ಸಾಧಿಸಲು ಆರಂಭವಾಗುವುದು ಎನ್ನಲಾಗಿದೆ.

 ಸಂಖ್ಯೆ  ಐದರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ ಐದು, ಹದಿನಾಲ್ಕು, ಇಪ್ಪತ್ತ್ಮೂರನೇ ತಾರೀಖಿನಂದು  ಹುಟ್ಟಿದ್ದರೆ ಅವರ ಸಂಖ್ಯೆ 5.ಈ ಸಂಖ್ಯೆಯ ಅಡಿಯಲ್ಲಿ ಜನಿಸಿದ್ದರೆ ಅವರ ಅದೃಷ್ಟದ ವರ್ಷ ಮೂವತ್ತೆರಡನೇ ವರ್ಷ ಎಂದು ಹೇಳಲಾಗಿದೆ. ಇದು ಅವರ ಅದೃಷ್ಟದ ವರ್ಷವಷ್ಟೇ ಅಲ್ಲ ಒಟ್ಟಾರೆ ಖ್ಯಾತಿಯನ್ನು ಪಡೆಯಲು ಸಹಾಯ ಮಾಡುವ ವರ್ಷ ಎಂದು ಹೇಳಲಾಗುವುದು .

ಸಂಖ್ಯೆ ಆರರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ ಆರು, ಹದಿನೈದು, ಇಪ್ಪತ್ತನಾಲ್ಕನೇ ತಾರೀಖಿನಂದು ಜನಿಸಿದ್ದರೆ ಅವರ ಸಂಖ್ಯೆ ಆರು. ಈ ಆರರ ಸಂಖ್ಯೆಯ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ 25 ನೇ ವರ್ಷದಿಂದ  ಆರಂಭವಾಗುತ್ತದೆ ಎನ್ನಲಾಗಿದೆ. ಇದು ಅವರ ಕನಸನ್ನು ನನಸಾಗಿಸಿಕೊಳ್ಳುವ  ವರ್ಷವಾಗಿದೆ. ಅಲ್ಲದೆ ಬಯಸಿದವರೊಂದಿಗೆ ಜೊತೆಗೂಡಿ ಕೆಲಸ ನಿರ್ವಹಿಸಲು ಹಾಗೂ ಯಶಸ್ಸನ್ನು ಸಾಧಿಸಲು ಅನುವು ಮಾಡಿಕೊಳ್ಳುವ ವರ್ಷ ಇದು.

ಸಂಖ್ಯೆ ಏಳರ ಅದೃಷ್ಟದ ವರ್ಷ.

ಯಾವುದೇ ತಿಂಗಳಿನಲ್ಲಿ ದಿನಾಂಕ ಏಳು, ಹದಿನಾರು, ಇಪ್ಪತ್ತೈದನೇ ತಾರೀಖಿನಂದು  ಜನಿಸಿದ್ದರೆ ಅವರ ಸಂಖ್ಯೆ ಏಳು. ಈ ಸಂಖ್ಯೆ ಏಳರ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ ಮೂವತ್ತೆ೦ಟರಿಂದ ನಲ್ವತ್ತನಾಲ್ಕನೇ ವರ್ಷ . ಈ ವರ್ಷಗಳಲ್ಲಿ ವ್ಯಕ್ತಿ ಹಂತ ಹಂತವಾಗಿಯೇ ಅದೃಷ್ಟವನ್ನು ಪಡೆಯಲು ಪ್ರಾರಂಭಿಸುತ್ತಾನೆ. ಅಲ್ಲದೆ ಕಷ್ಟಪಟ್ಟು ಕೆಲಸ ಮಾಡಿರುವುದಕ್ಕೆ ಉತ್ತಮ ಫಲಿತಾಂಶ ಪಡೆಯಲು ಪ್ರಾರಂಭಿಸುತ್ತಾನೆ.

 ಸಂಖ್ಯೆ ಎಂಟರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ ಎಂಟು, ಹದಿನೇಳು, ಇಪ್ಪತ್ತಾರನೇ ತಾರೀಖಿನಂದು ಜನಿಸಿದ್ದರೆ ಅವರ ಸಂಖ್ಯೆ ಎಂಟು. ಈ ಎಂಟನೇ ಸಂಖ್ಯೆಯ ಅಡಿಯಲ್ಲಿ ಜನಿಸಿದವರಿಗೆ ಮೂವತ್ತಾರು ಮತ್ತು ನಲವತ್ತೆರಡನೇ ವರ್ಷ ಇವರ ಅದೃಷ್ಟದ ವರ್ಷ ಎಂದು ಹೇಳಲಾಗಿದೆ. ಎಂಟನೇ ಸಂಖ್ಯೆಯ ಸಂಕೀರ್ಣವಾದ ಸಂಖ್ಯೆ ಎಂದು ಹೇಳಲಾಗುವುದು. ಇವರ ಭವಿಷ್ಯ ಗುಲಾಬಿಯ ಹಾಸಿಗೆಯ೦ತಿದ್ದರೂ ಮುಳ್ಳುಗಳು ಜೊತೆಯಲ್ಲಿಯೇ ಇರುತ್ತದೆ. ಇವರಿಗೆ ಮೂವತ್ತಾರು ಮತ್ತು ನಲವತ್ತೆರಡನೇ ವರ್ಷದ ನಂತರ ಒಳ್ಳೆಯ ದಿನ ಪ್ರಾರಂಭವಾಗುವುದು.

 ಸಂಖ್ಯೆ ಒಂಬತ್ತರ ಅದೃಷ್ಟದ ವರ್ಷ.

 

 

ಯಾವುದೇ ತಿಂಗಳಿನಲ್ಲಿ ದಿನಾಂಕ ಒಂಬತ್ತು, ಹದಿನೆಂಟು, ಮತ್ತು ಇಪ್ಪತ್ತೇಳನೇ ತಾರೀಖಿನಂದು  ಜನಿಸಿದ್ದರೆ ಇವರ ಸಂಖ್ಯೆ ಒಂಬತ್ತು. ಈ ಒಂಬತ್ತರ ಸಂಖ್ಯೆಯ  ಅಡಿಯಲ್ಲಿ ಜನಿಸಿದವರಿಗೆ ಇಪ್ಪತ್ತೆ೦ಟನೇ ವರ್ಷ ಅದೃಷ್ಟದ ವರ್ಷವಾಗಿರುತ್ತದೆ. ಈ ವರ್ಷದಲ್ಲಿ ವ್ಯಕ್ತಿ ಖ್ಯಾತಿ ಮತ್ತು ಬಹಳಷ್ಟು  ಹಣವನ್ನು ಗಳಿಸುತ್ತಾನೆ ಎಂದು ಸಂಖ್ಯಾಶಾಸ್ತ್ರದ ಪ್ರಕಾರ ಈ ರೀತಿಯಲ್ಲಿ ವಿವರಿಸಿ ಹೇಳಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top