ಕಿರುತೆರೆ

‘ಪುಟ್ಟ ಗೌರಿ’ ಧಾರಾವಾಹಿಯ ವೀಕ್ಷಕನಿಂದ ಚಾನೆಲ್ ಗೆ ಬರೆದ ಪತ್ರವನ್ನು ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.

‘ಪುಟ್ಟ ಗೌರಿ’ ಧಾರಾವಾಹಿಯ ವೀಕ್ಷಕನಿಂದ ಚಾನೆಲ್ ಗೆ ಬರೆದ ಪತ್ರವನ್ನು ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.

 

 

ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ವೀಕ್ಷಕನೊಬ್ಬನು ಕಲರ್ಸ್ ಕನ್ನಡ ಚಾನೆಲ್ ಗೆ ಪತ್ರ ಬರೆದಿದ್ದಾನೆ. ಧಾರಾವಾಹಿಗಳಲ್ಲಿ ನಡೆಯುತ್ತಿರುವ ವಿಚಿತ್ರಗಳ ಕುರಿತು ಬರೆದಿರುವ ಈ ಪತ್ರದಲ್ಲಿ ಪುಟ್ಟಗೌರಿ ಧಾರಾವಾಹಿಯ ನಿರ್ದೇಶಕನನ್ನು ಪರೋಕ್ಷವಾಗಿ ಕಾಲೆಳೆದಿದ್ದಾನೆ.

 

 

“ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿಯ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಪಾಪ ಪುಟ್ಟಗೌರಿಯನ್ನು ಒಮ್ಮೆ ಗರ್ಭವತಿಯನ್ನಾಗಿಸಿ ಅಭಾಷಣ್ ಮಾಡಿಸಿದಿರಿ, ಮತ್ತೊಮ್ಮೆ ವಿಷ ಕುಡಿಸಿ ಬದುಕಿಸಿದಿರಿ, ಹಾಗೆಯೇ ಇತ್ತೀಚಿಗೆ ನಡೆದ ಸಂಚಿಕೆಯಲ್ಲಿ ಸೂಪರ್ ವುಮೆನ್ ನಂತೆ ನೂರಾರು ಅಡಿ ಎತ್ತರದ ಬೆಟ್ಟದಿಂದ ಬೀಳಿಸಿ ಸ್ವಲ್ಪವೂ ಏನೂ ಆಗದಂತೆ ಅಂದರೆ ಆಕೆಯ ಮುಡಿಯಲ್ಲಿರುವ ಹೂ ಕೂಡ ಬಾಡದಂತೆ ಕಾಲಿಗೆ ಹಾಕಿದ್ದ ಚಪ್ಪಲಿಯೂ ಕೂಡ ಏನೂ ಆಗದೆ ಬದುಕಿಸಿದಿರಿ.”

 

 

“ಪಾಪ ಹಾವು ಕೂಡ ಏನು ಮಾಡದೆ, ಹುಲಿಗೂ ಕೂಡ ಆಕೆಯನ್ನು ಕೊಳ್ಳಲು ಬಿಡದೆ ಬದುಕಿಸಿದ್ದೀರಿ. ಯಾವ ಕ್ಯಾನ್ಸರ್ ಕೂಡ ಪುಟ್ಟ ಗೌರಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸಿದ್ದೀರಿ. ಪುಟ್ಟಗೌರಿಯನ್ನು ಬದುಕಿಸಿದ್ದಕ್ಕೆ ಧನ್ಯವಾದಗಳು.- ಇಂತಿ ಪುಟ್ಟಗೌರಿಯ ಸಾವನ್ನು ಸಹಿಸಲಾಗದ ಅಭಿಮಾನಿ ನವೀನ ಕುಮಾರ್” ಎಂದು ತಮ್ಮ ಪತ್ರದಲ್ಲಿ ನವೀನ ಕುಮಾರ್ ಬರೆದಿದ್ದಾರೆ.

 

 

ಇನ್ನು ಕೆಲವು ದಿನಗಳ ಹಿಂದೆ ಕ್ಯಾನ್ಸರ್, ಅಬಾಷನ್, ವಿಷದ ಸೇವನೆಮತ್ತು ಈಗ ಬೆಟ್ಟದ ಮೇಲಿಂದ ಬಿದ್ದಿರುವ ಪುಟ್ಟ ಗೌರಿ ಮರಣದ ಸುದ್ದಿ ‘ಪುಟ್ಟ ಗೌರಿ’ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರೆ, ಸಾಮಾಜಿಕ ತಾಣದಲ್ಲಿ ಪುಟ್ಟಗೌರಿ ಸಾವಿನ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.ಆ ಪ್ರಮುಖ ಟ್ರೋಲ್ ಗಳನ್ನ ಇಲ್ಲಿ ನೋಡಿ.

 


 

 

 

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top