fbpx
ಸಮಾಚಾರ

ಇನ್ಮುಂದೆ ಮನುಷ್ಯರ ಮೂತ್ರಕ್ಕೂ ಸಿಗಲಿದೆ ಕೈತುಂಬಾ ದುಡ್ಡು: ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ..!

ಇನ್ಮುಂದೆ ಮನುಷ್ಯರ ಮೂತ್ರಕ್ಕೂ ಸಿಗಲಿದೆ ಕೈತುಂಬಾ ದುಡ್ಡು: ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ..!

 

 

ಇಷ್ಟು ದಿನ ನೀವು ದುಡ್ಡಿನ ಬ್ಯಾಂಕ್, ರಕ್ತದ ಬ್ಯಾಂಕ್, ಹಾಲಿನ ಬ್ಯಾಂಕ್ ಗಳ ಹೆಸರು ಗಳನ್ನ ಕೇಳಿರುತ್ತೀರಿ. ಇದೀಗ ಕೇಂದ್ರ ಸರ್ಕಾರ ವಿಶಿಷ್ಟವಾದ ಬ್ಯಾಂಕ್‌ವೊಂದನ್ನು ತೆರೆಯಲು ಮುಂದಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಯೂರಿಯಾವನ್ನು ಉತ್ಪಾದನೆ ಮಾಡುವ ಉದ್ದೇಶದಿಂದ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸಲು ಮುಂದಾಗಿದ್ದಾರೆ.

 

 

ರಸಗೊಬ್ಬರ ಉತ್ಪಾದನೆಗಾಗಿ ಯೂರಿಯಾ ಅವಶ್ಯಕತೆ ಇದೆ ಅದನ್ನು ಹಣ ಕೊಟ್ಟು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆ ಅವಲಂಬನೆ ತಪ್ಪಿಸುವ ಸಲುವಾಗಿ ದೇಶಾದ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ತೆರೆಯಬೇಕು ಎಂದು ತಮ್ಮ ಕನಸನ್ನು ಗಡ್ಕರಿ ತಿಳಿಸಿದ್ದಾರೆ. ಮಾನವರ ಮೂತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಟ್ರೋಜನ್ ಅಂಶ ಇರುತ್ತದೆ ಆದರೆ ಇದು ಬಳಕೆಯಾಗುತ್ತಿಲ್ಲ. ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡುವುದೇ ನಮ್ಮ ಆಸೆ ಎಂದು ಸಚಿವರು ತಿಳಿಸಿದ್ದಾರೆ.

 

 

ರೈತರು 10 ಲೀಟರ್ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ತಮ್ಮ ಮೂತ್ರ ಸಂಗ್ರಹಿಸಿ ತಂದು ಈ ಮೂತ್ರ ಬ್ಯಾಂಕುಗಳಲ್ಲಿ ಕೊಟ್ಟರೆ, ಲೀಟರ್‌ಗೆ 1 ರೂಪಾಯಿಯಂತೆ 10 ರೂಪಾಯಿ ಸಿಗುತ್ತದೆ. ಮೂತ್ರ ಸಂಗ್ರಹಿಸಲು ಸರ್ಕಾರದಿಂದಲೇ ಪ್ಲಾಸ್ಟಿಕ್ ಕ್ಯಾನ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮೂತ್ರವನ್ನ ಶುದ್ಧೀಕರಣ ಮಾಡಿ ಸಾವಯವ ಗೊಬ್ಬರ ತಯಾರು ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

 

 

ಮೂತ್ರ ಬ್ಯಾಂಕ್ ಗಳನ್ನೂ ಸ್ಥಾಪಿಸುವ ಯೋಜನೆಗೆ ತಗಲುವ ಆರ್ಥಿಕ ವೆಚ್ಚದ ಬಗ್ಗೆ ಇನ್ನು ಅವಲೋಕನ ಮಾಡಿಲ್ಲ ಈ ಬಗ್ಗೆ ನಾಗ್ಪುರದ ಸಮೀಪದ ಧಪೇವಾಡಾ ಗ್ರಾಮದಲ್ಲಿ ಪ್ರಯೋಗಲಯದಲ್ಲಿ ಆರಂಭಿಕ ಪರೀಕ್ಷೆಗಳನ್ನು ಕೈಗೊಂಡು ಪ್ರಯೋಗ ನಡೆಸಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top