fbpx
ದೇವರು

ಕಾರ್ತಿಕ ಮಾಸದ ಅಕ್ಷಯ ನವಮಿ ಅಥವಾ ಆಮ್ಲ ನವಮಿ ದಿನ ಸಂಜೆ ಈ ಕೆಲಸಗಳು ಮಾಡಿದ್ರೆ ನಿಮ್ಮ ಕಷ್ಟಗಳು ಪರಿಹಾರ ಆಗುತ್ತೆ

ಕಾರ್ತಿಕ ಮಾಸದಲ್ಲಿ ಬರುವ ಅಕ್ಷಯ ನವಮಿ ಅಥವಾ ಆಮ್ಲ ನವಮಿಯನ್ನು ಹೇಗೆ ? ಮತ್ತು  ಏಕೆ ? ಆಚರಿಸಲಾಗುತ್ತದೆ .

 

 

ಕಾರ್ತಿಕ ಮಾಸದ ಶುಕ್ಲ ಪಕ್ಷದ, ನವಮಿಯ ತಿಥಿಯ ದಿನ ಆಮ್ಲ ನವಮಿ ಅಥವಾ ಅಕ್ಷಯ ನವಮಿ ಎಂದು ಹೇಳಲಾಗುವ ಇದನ್ನು ನಮ್ಮ ಕನ್ನಡದಲ್ಲಿ ಹೇಳಬೇಕೆಂದರೆ ಆಮ್ಲ ಎಂದರೆ ನೆಲ್ಲಿಕಾಯಿ ಎಂದರ್ಥ ಆದ್ದರಿಂದ ನೆಲ್ಲಿಕಾಯಿ ನವಮಿ ಎಂತಲೂ ಸಹ ಕರೆಯಬಹುದು.

ಶಾಸ್ತ್ರಗಳ ಮಹತ್ವವು ಸಹ ಈ ಅಕ್ಷಯ ನವಮಿಗೆ ಬಹಳಷ್ಟಿದೆ. ಈ ದಿನ ಮಾಡಿದ ಪೂಜೆ ,ಪ್ರಾರ್ಥನೆ ಮತ್ತು ಪುಣ್ಯ ಅನೇಕ ಜನ್ಮಗಳವರೆಗೂ ಇರುವುದು. ಈ ಪ್ರಕಾರದಲ್ಲಿ ಶಾಸ್ತ್ರಗಳ ವಿರುದ್ಧವೂ ಸಹ ನಾವು ಏನೇ ಮಾಡಿದರೂ ಅನೇಕ ಜನ್ಮಗಳವರೆಗೆ ನಾವು ಪಾಪ ಕರ್ಮಗಳನ್ನು ಅನುಭವಿಸಬೇಕಾಗುವುದು.

 

ಅಕ್ಷಯ ನವಮಿಯ ದಿನ ನೆಲ್ಲಿಕಾಯಿ ಮರದ ಪೂಜೆಯನ್ನು ಮಾಡಬೇಕು ಅದರ ವಿಧಿ ವಿಧಾನ ಹೀಗಿದೆ….

ಈ ಕಾರ್ತಿಕ ಮಾಸದಲ್ಲಿ ನವಮಿಯ ತಿಥಿಯ ದಿನ ನೆಲ್ಲಿಕಾಯಿಯ ಮರದಲ್ಲಿ ಭಗವಂತನಾದ ವಿಷ್ಣು ಮತ್ತು ಪರಮೇಶ್ವರರು ವಾಸ ಮಾಡುತ್ತಾರೆ. ಆದ್ದರಿಂದ ಅಕ್ಷಯ ನವಮಿಯ ದಿನದ ಬೆಳಗ್ಗೆ ಎದ್ದು ನೆಲ್ಲಿಕಾಯಿಯ ಮರದ ಕೆಳಗೆ ಮೊದಲು ಸ್ವಚ್ಛಗೊಳಿಸಬೇಕು. ಹಾಲು, ಹೂವು ಮತ್ತು ಧೂಪ ದೀಪಗಳಿಂದ ಪೂಜೆ ಮಾಡಬೇಕು.

ನಿಮಗೆ ಸಾಧ್ಯವಾದರೆ ಬ್ರಾಹ್ಮಣರಿಗೆ ಆಹಾರವನ್ನು ತಯಾರಿಸಿ ನೆಲ್ಲಿಕಾಯಿಯ ಮರದ ಕೆಳಗೆ ಊಟ ಮಾಡಿಸಿ, ಭೋಜನವನ್ನು ನೀವು ಸಹ ಅಲ್ಲಿಯೇ ಮಾಡಿ ಅದು ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಬೇಕು. ನೆಲ್ಲಿಕಾಯಿಯ ಮರದ ಎಲೆ ನಿಮ್ಮ ಊಟ ಮಾಡುವ ತಟ್ಟೆಯಲ್ಲಿ ಬಿದ್ದರೆ ಅದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುವುದು.

 

 

ಈ ಮರದ ಕೆಳಗೆ  ವ್ರತಾಚರಣೆ ಮಾಡಲು ಮೊದಲು ಶುರು ಮಾಡಿದ್ದು ಶ್ರೀ ಲಕ್ಷ್ಮೀ ದೇವಿ ಆದ್ದರಿಂದ ನೆಲ್ಲಿಕಾಯಿಯ ಮರವನ್ನು ವಿಷ್ಣು ಹಾಗೂ ಶಿವ ಎಂದು ನಂಬಿದ್ದಾರೆ ಆದರೆ ಪೂಜೆಯನ್ನು ಮಾಡಲು ಪ್ರಾರಂಭಿಸಿದಾಗ  ವಿಷ್ಣು ಮತ್ತು ಶಿವ ಪ್ರಕಟವಾದರೂ ಮಾತೆ ಲಕ್ಷ್ಮೀ  ದೇವಿಯೂ ಅವರಿಬ್ಬರಿಗೂ ಭೋಜನವನ್ನು ಅರ್ಪಿಸಿ ತಾನೂ ಸಹ ಊಟ ಮಾಡಿದಳು.

ಆಮ್ಲ ನವಮಿಯ ದಿನ ತಿಳಿದಿರಬೇಕಾದ ಸಂಜೆ ಹತ್ತು ವಿಷಯಗಳು ಪಾಲಿಸಬೇಕು 

 

  1. ಈ ದಿನ ಯಾವುದೇ ದಾನ, ಪುಣ್ಯ ಮಾಡಿದರೂ ಅಕ್ಷಯ ಫಲ ಪ್ರಾಪ್ತಿಯಾಗುವುದು. ಹಿರಿಯರು ಇದನ್ನು ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಿದ್ದರು. ನೆಲ್ಲಿಕಾಯಿಯ ಮರಕ್ಕೆ ಪೂಜೆ ಮಾಡಿ ನಂತರ ನೂರಾ ಎಂಟು ಸುತ್ತು ಪ್ರದಕ್ಷಿಣೆಯನ್ನು ಮಾಡಲಾಗುತ್ತದೆ. ಕೀರು,ಪೂರಿ ಮತ್ತು ಇನ್ನೂ ಇತ್ಯಾದಿ ಭೋಜನಗಳನ್ನು ಅರ್ಪಿಸಿ ನೈವೇದ್ಯವಾಗಿ ಅರ್ಪಿಸಿ ಪೂಜಿಸಲಾಗುತ್ತಿತ್ತು. ಸ್ತ್ರೀಯರು ವ್ರತ ಸಂಕಲ್ಪ ಮಾಡಬೇಕು. “ಓo ದಾತ್ರಾಯ ನಮಃ” ಎಂದು ಹೇಳುತ್ತಾ ಹಾಲನ್ನು ನೆಲ್ಲಿಕಾಯಿಯ ಮರಕ್ಕೆ ಪಿತೃಗಳನ್ನು ಸ್ಮರಿಸಿಕೊಂಡು ಅರ್ಪಿಸಬೇಕು . ಇದನ್ನು ಪಿತೃಗಳಿಗೆ ಅರ್ಪಿಸಿ ಕರ್ಪೂರ ಮತ್ತು ತುಪ್ಪದ ಬತ್ತಿಯಿ೦ದ ಆರತಿಯನ್ನು ಮಾಡಬೇಕು.

 

  1. ಕೀರ , ಪೂರಿ, ಪಲ್ಯ ಇಂತಹ ಭೋಜನಗಳನ್ನು ನೀವು ಏನೇ ತಯಾರಿಸಿದರೂ ಸಹ ಅವುಗಳನ್ನು ನೈವೇದ್ಯವಾಗಿ ಅರ್ಪಿಸಿ ಪೂಜಿಸಿ.

  1. ನೆಲ್ಲಿಕಾಯಿಯ ಮರದ ಕೆಳಗೆ ಕುಳಿತು ಆಹಾರವನ್ನು ನೀಡಿ. ಅವರಿಗೆ ವಸ್ತ್ರವನ್ನು ಸಹ ದಾನವಾಗಿ ನೀಡಬಹುದು. ನಿಮ್ಮ ಯೋಗ್ಯತೆಗೆ ತಕ್ಕಂತೆ ದಕ್ಷಿಣೆಯನ್ನು ಸಹ ನೀಡಬಹುದು.

 

  1. ಈ ದಿನ ನೆಲ್ಲಿಕಾಯಿಯ ಮರವನ್ನು ತಂದು ಮನೆ ಮನೆಯ ಬಳಿ ನೆಡುವುದರಿಂದ ಒಳ್ಳೆಯದು. ನೆಲ್ಲಿಕಾಯಿ ಮರ ಇರುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿ  ಕೂಡ ಅಭಿವೃದ್ಧಿ ಉಂಟಾಗುತ್ತದೆ.

 

  1. ಶಾಸ್ತ್ರಗಳ ಪ್ರಕಾರ ಪೂರ್ವ ದಿಕ್ಕಿನಲ್ಲಿ ದೊಡ್ಡ ಮರವನ್ನು ನೆಡಬಾರದು ಆದರೆ ನೆಲ್ಲಿಕಾಯಿಯ ಮರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಬೆಳೆಸಬೇಕು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಸುಳಿಯುವುದಿಲ್ಲ.

 

  1. ಯಾವ ಮಕ್ಕಳ ಬುದ್ಧಿ ಕಡಿಮೆ  ಇದ್ದು, ಓದಿನಲ್ಲಿ ಹಿಂದಿದ್ದರೆ ಅಂತಹ ಮಕ್ಕಳಿಗೆ ನೆಲ್ಲಿಕಾಯಿ ಮರದ ಎಲೆಗಳನ್ನು ಅವರ ಪುಸ್ತಕದಲ್ಲಿ ಈ ದಿನ ಇಟ್ಟುಬಿಡಿ.

  1. ಅಕ್ಷಯ ನವಮಿಯ ರಾತ್ರಿ ಕೂಷ್ಮಾಂಡ ಹೆಸರಿನೊಂದಿಗೆ ಸಹ ಪ್ರಖ್ಯಾತವಾಗಿದೆ.

 

  1. ಕುಂಬಳಕಾಯಿಯನ್ನು ಸಹ ಈ ದಿನ ದಾನ ಮಾಡಿದರೆ ಕುಂಬಳಕಾಯಿಯಲ್ಲಿ ಎಷ್ಟು ಬೀಜ ಇರುವುದೋ ಅಷ್ಟು ವರ್ಷಗಳವರೆಗೆ ದಾನ ಮಾಡಿದವರಿಗೆ ಸ್ವರ್ಗದಲ್ಲಿ ವಾಸಿಸಲು ಸ್ಥಳವೂ ಸಿಗುವುದು ಎಂಬ ನಂಬಿಕೆ ಇದೆ .

  1. ಪಿತೃಗಳ ದೋಷ  ನಿವಾರಣೆಗೆ ನಮ್ಮ ಹಿರಿಯರ, ತಂದೆ-ತಾಯಿಯರ ಮತ್ತು  ತಾತ- ಅಜ್ಜಿಯರಿಗೆ ಸೇವೆ ಮಾಡಿ ಗೌರವ ನೀಡಿ. ಯಾರಿಗೆ ತಂದೆ ತಾಯಿಯ ಆಶೀರ್ವಾದವೂ ಮಕ್ಕಳ ಮೇಲೆ ಇರುವುದು ಅಂಥವರು ಅವರ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ .

 

  1. ಜೀವನದಲ್ಲಿ ಹಣವೇ ಮುಖ್ಯವಲ್ಲ ಸಂತೋಷ, ಸುಖ, ನೆಮ್ಮದಿ ಇದ್ದರೆ ಅದೇ ಸುಖ .ಪಿತೃಗಳಿಗೆ ಅಥವಾ ಬಡವರಿಗೆ ಕಂಬಳಿಯನ್ನು ದಾನ ಮಾಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top