fbpx
ಆರೋಗ್ಯ

ದೊಡ್ಡ ಕರುಳಿನ ಅಸ್ವಸ್ಥತೆಯ ಸಮಸ್ಯೆ ಐ ಬಿ ಎಸ್ (Irritable Bowel Syndrome ) ಗೆ ಆಯುರ್ವೇದದ ಮದ್ದುಗಳು ಮಾಡ್ಕೊಂಡು ನೆಮ್ಮದಿಯಾಗಿ ಜೀವನ ಮಾಡಿ

ದೊಡ್ಡ ಕರುಳಿನ ಅಸ್ವಸ್ಥತೆಯ ಸಮಸ್ಯೆ ಐ ಬಿ ಎಸ್ (Irritable Bowel Syndrome ) ಗೆ ಆಯುರ್ವೇದದ ಮದ್ದುಗಳು ಮಾಡ್ಕೊಂಡು ನೆಮ್ಮದಿಯಾಗಿ ಜೀವನ ಮಾಡಿ

 

ಐ ಬಿ ಎಸ್ ,ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್(Remedies for Irritable Bowel Syndrome (IBS))

 

ಐ ಬಿ ಎಸ್ ದೊಡ್ಡ ಕರುಳಿಗೆ ಬರುವಂತಹ ಒಂದು ಅಸ್ವಸ್ಥತೆಯ ಸಮಸ್ಯೆ ,ಸಾಮಾನ್ಯವಾಗಿ ಸಣ್ಣ ಮತ್ತು ದೊಡ್ಡ ಕರುಳಿನ ಚಾಲನೆ ಸರಿಯಾಗಿ ಅಥವಾ ಸರಾಗವಾಗಿ ಆಗದೆ ಇದ್ದಾಗ ಈ ಸಮಸ್ಯೆಯನ್ನು ನಾವು ಹೆಚ್ಚಾಗಿ ಕಾಣಬಹುದು ,ಇದಕ್ಕೆ ಮುಖ್ಯ ಕಾರಣಗಳು ನಮ್ಮ ಆಹಾರ ಪದ್ದತಿ,ಒತ್ತಡದ ಜೀವನ ಶೈಲಿ .

ಐ ಬಿ ಎಸ್ ನ ಗುಣ ಲಕ್ಷಣ ಗಳು :

ಹೊಟ್ಟೆ ನೋವು
ಹೊಟ್ಟೆ ಉಬ್ಬಿ ಕೊಳ್ಳುವುದು
ಗ್ಯಾಸ್ ಸಮಸ್ಯೆ
ಮಲಬದ್ಧತೆಯ ಸಮಸ್ಯೆ
ಭೇದಿ ಆಗುವುದು

ಆಯುರ್ವೇದದ ಮನೆಮದ್ದು :

೧.ಶುಂಠಿಯನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ ,ಅದಕ್ಕೆ ಸ್ವಲ್ಪ ಕಪ್ಪು ಮೆಣಸು ,ಸ್ವಲ್ಪ ಏಲಕ್ಕಿ ಮತ್ತು ಸ್ವಲ್ಪ ಕಲ್ಲು ಉಪ್ಪು ಸೇರಿಸಿ .ಇದರ ಮಿಶ್ರಣ ವನ್ನು 1 /4 ಚಮಚ ಬಿಸಿ ನೀರಿಗೆ ಬೆರೆಸಿ ದಿನ 2 ಬಾರಿ ಕುಡಿಯಬೇಕು .

 

 

೨.ಬಿಳಿ ಮೆಣಸು ,ಜೀರಿಗೆ ,ಕಲ್ಲು ಉಪ್ಪು ಮತ್ತು ಸ್ವಲ್ಪ ಬೆಲ್ಲ ವನ್ನು ಚೆನ್ನಾಗಿ ಪುಡಿ ಮಾಡಿಕೊಂಡು ನಿಮ್ಮ ಊಟಕ್ಕೆ 45 ನಿಮಿಷಕ್ಕೆ ಮುಂಚೆ 1 /4 ಚಮಚ ಬಿಸಿ ನೀರಿಗೆ ಹಾಕಿಕೊಂಡು ದಿನ 2 ರಿಂದ 3 ಸಲ ಕುಡಿಯಬೇಕು.

 

 

೩.ಬೆಟ್ಟದ ನೆಲ್ಲಿಕಾಯಿ,ಜೀರಿಗೆ ಮತ್ತು ಸ್ವಲ್ಪ ಚಕ್ಕೆ ಪುಡಿ ಸೇರಿಸಿ 1 /2 ಚಮಚ ನೀರಿಗೆ ಬೆರಿಸಿ ನಿಮ್ಮ ಊಟ ಆದ ಮೇಲೆ ದಿನ 2 ಬಾರಿ ಕುಡಿಯಬೇಕು.

೪.ಸ್ವಲ್ಪ ಅಮೃತಬಳ್ಳಿ ,ಅಲೋವೆರಾ ಲೋಳೆ ರಸ ,ಪುದಿನ ಮತ್ತು ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ದಿನ 2 ಬಾರಿ ತಿನ್ನಬೇಕು .

 

 

೫.ಅದಷ್ಟು ಜಾಸ್ತಿ ಜಾಸ್ತಿ ನೀರನ್ನು ಕುಡಿಯಬೇಕು ಅದು ನಿಮ್ಮ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top