fbpx
ಭವಿಷ್ಯ

ನವೆಂಬರ್ 16 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 16 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೧೬ ನವೆಂಬರ್ ೨೦೧೭
ಸೂರ್ಯೋದಯ : ೦೬:೨೨
ಸೂರ್ಯಾಸ್ತ : ೧೭:೪೬
ಚಂದ್ರೋದಯ : ೨೯:೧೨+
ಚಂದ್ರಾಸ್ಥ : ೧೬:೩೩
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ
ನಕ್ಷತ್ರ : ಚೈತ್ರ
ಯೋಗ : ಆಯುಷ್ಮಾನ್
ಪ್ರಥಮ ಕರಣ : ವಣಿಜ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೧ – ೧೨:೨೭
ಅಮೃತಕಾಲ : ೦೮:೩೦ – ೧೦:೧೨
ರಾಹು ಕಾಲ: ೧೩:೨೯ – ೧೪:೫೫
ಗುಳಿಕ ಕಾಲ: ೦೯:೧೩ – ೧೦:೩೮
ಯಮಗಂಡ:೦೬:೨೨ – ೦೭:೪೭

ಮೇಷ (Mesha)

ಕೋರ್ಟು ಕಚೇರಿಯ ಕೆಲಸಗಳಲ್ಲಿನ ಕೇಸು ಮುಂದೂಡಲ್ಪಡುವುದು. ಮಾನಸಿಕ ಶಾಂತಿಗಾಗಿ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಿರಿ. ವ್ಯಾಪಾರ-ಉದ್ಯೋಗದಲ್ಲಿ ತುಸು ಹಿನ್ನಡೆ ಸಂಭವ. ವಾದ ವಿವಾದಗಳಿಂದ ದೂರವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

 

ವೃಷಭ (Vrushabha)

ಸೌಂದರ್ಯವರ್ಧಕ ವಸ್ತುಗಳ ಖರೀದಿ. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮನ್ನಣೆ. ಬರಹಗಾರರಿಗೆ ಉತ್ತಮ ಸಂಭಾವನೆ, ಗೌರವ ದೊರೆಯುವುದು. ಸ್ವಜನ ಬಂಧುಪ್ರೇಮ, ಯೋಜಿತ ಕಾರ್ಯಗಳು ಸಿದ್ಧಿಸುವವು.

 

ಮಿಥುನ (Mithuna)

ಉದ್ಯೋಗದಲ್ಲಿ ಸ್ಥಿರತೆ. ಕುಟುಂಬದ ವಾತಾವರಣವು ಆನಂದದಿಂದ ಕೂಡಿರುತ್ತದೆ. ಬಾಳಸಂಗಾತಿ ಅಥವಾ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುವಿರಿ. ವಾಹನ ಸೌಖ್ಯ, ಸಮಾಜದಲ್ಲಿ ಮಾನ ಸನ್ಮಾನ. ಬೆಲೆಬಾಳುವ ವಸ್ತುಗಳ ಖರೀದಿ ಆರೋಗ್ಯ ಉತ್ತಮವಾಗಿರುವುದು.

ಕರ್ಕ (Karka)

ಧನಾತ್ಮಕ ಚಿಂತನೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ವಿರೋಧಿಗಳಿಗೆ ಮುಖಭಂಗವಾಗುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆಯನ್ನು ಎದುರಿಸುವಿರಿ. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಸಿಂಹ (Simha)

ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ಮಿತ್ರರ ಸಹಕಾರವು ದೊರೆಯಲಿದೆ. ವ್ಯವಹಾರ ಸುಲಲಿತವಾಗಿ ನಡೆಯುವುದು. ಪರಾವಲಂಬಿ ಜೀವನ ಒಳ್ಳೆಯದಲ್ಲ. ಗುರುವಿನ ಅನುಗ್ರಹ ಪಡೆಯಿರಿ.

 

ಕನ್ಯಾರಾಶಿ (Kanya)

ಬೌದ್ಧಿಕ ವ್ಯವಹಾರದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಪುತ್ರಸೌಖ್ಯ, ಹರ್ಷದಾಯಕ ವಾರ್ತೆ ಕೇಳುವಿರಿ. ದೂರ ಪ್ರವಾಸ. ವ್ಯವಹಾರ ಕೌಶಲ್ಯ ದ್ರವ್ಯ ಸಂಚಯ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ತುಲಾ (Tula)

ಈ ದಿನ ಶುಭ ವಾರ್ತೆಗಳೇ ಹೆಚ್ಚಾಗಿ ಗೋಚರಿಸುತ್ತವೆ. ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಾನಮಾನ ಉತ್ತಮವಾಗಿರಲಿದೆ. ಆಹಾರ ವಿಹಾರದಲ್ಲಿ ಎಚ್ಚರ ಅಗತ್ಯ. ಪ್ರಯಾಣವನ್ನು ಆದಷ್ಟು ಮುಂದೂಡುವುದು ಒಳ್ಳೆಯದು. ಹಿರಿಯರ ಆಶೀರ್ವಾದ ಪಡೆಯಿರಿ.

 

ವೃಶ್ಚಿಕ (Vrushchika)

ವಿದ್ವಾನ್ ಮತ್ತು ಗುಣೀ ಜನರ ಪರಿಚಯ. ಉದ್ಯೋಗ, ವ್ಯವಹಾರದಲ್ಲಿ ಲಾಭ. ಲೇಖನಿ ವ್ಯವಹಾರದಲ್ಲಿ ಯಶಸ್ಸು. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮಾನ ಸನ್ಮಾನ, ಅಧಿಕಾರ ಪ್ರಾಪ್ತಿ. ಕೌಟುಂಬಿಕ ಸೌಖ್ಯ.

 

ಧನು ರಾಶಿ (Dhanu)

ನಿವೇಶನ ಖರೀದಿಸಲು ಯೋಚಿಸುವಿರಿ. ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಧನ ಹಾಗೂ ಧಾನ್ಯ ವೃದ್ಧಿ. ಮಿತ್ರಲಾಭ, ವಾಹನ ಸೌಖ್ಯ, ಉದ್ಯೋಗದಲ್ಲಿ ಉತ್ಕರ್ಷ, ವೈಭವಕಾಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಮಕರ (Makara)

ಆಶಾವಾದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈ ದಿನ ಶುಭ ವಾರ್ತೆಯನ್ನು ಕೇಳುವಿರಿ. ಬಂಧು ಭಗಿನಿಯರ ಸೌಖ್ಯ, ಭಾಗ್ಯವೃದ್ಧಿ, ಯಾವುದೇ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು.

 

ಕುಂಭರಾಶಿ (Kumbha)

ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಮಿತ್ರರ ಸಹಕಾರವೂ ದೊರೆಯಲಿದೆ. ವ್ಯವಹಾರ ಸುಲಲಿತವಾಗಿ ಮುನ್ನಡೆಯುವುದು. ಅನೇಕ ಬೆಲೆಯುಳ್ಳ ವಸ್ತುಗಳ ಖರೀದಿಯು, ದ್ರವ್ಯಸಂಚಯ, ಸುಗ್ರಾಸ ಭೋಜನ.

 

ಮೀನರಾಶಿ (Meena)

ಸೌಂದರ್ಯ ವರ್ಧಕಗಳ ಖರೀದಿಗೆ ಮುಂದಾಗುವಿರಿ. ಮಾತುಗಾರಿಕೆಯ ಪ್ರಭಾವದಿಂದ ದ್ರವ್ಯ ಸಂಚಯವಾಗುವುದು. ವೃತ್ತಿಪರರಿಗೆ ವಿಶ್ರಾಂತಿ ಭಾಗ್ಯ. ಬಂಧುಮಿತ್ರರಿಂದ ವಿಮರ್ಶೆ, ಟೀಕೆಗಳು ವ್ಯಾಪಕವಾಗುತ್ತವೆ. ಜಾಗ್ರತೆಯಿಂದ ಇರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top