ತಿಂಡಿ ತೀರ್ಥ

ಚಪಾತಿ, ಪೂರಿ, ಪರೋಟ ಮತ್ತು ದೋಸೆಯೊಂದಿಗೆ ತಿನ್ನಲು ರುಚಿ, ರುಚಿಯಾದ ತರಕಾರಿ ಸಾಗು ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಪಾತಿ, ಪೂರಿ, ಪರೋಟ ಮತ್ತು ದೋಸೆಯೊಂದಿಗೆ ತಿನ್ನಲು ರುಚಿ, ರುಚಿಯಾದ ತರಕಾರಿ ಸಾಗು ಮಾಡುವ ವಿಧಾನ

ಬೇಕಾದ ಸಾಮಗ್ರಿಗಳು:

ಟೊಮೆಟೋ, ಆಲೂಗೆಡ್ಡೆ, ಕ್ಯಾರೆಟ್, ಬಟಾಣಿ, ಹೀರೆಕಾಯಿ, ಬದನೆಕಾಯಿ, ಹುರುಳಿಕಾಯಿ, ಹೂಕೋಸು,ಎಲೆಕೋಸು, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಧನಿಯಾ ಪುಡಿ, ಗರಂಮಸಾಲಾ, ಕಾಯಿತುರಿ, ಈರುಳ್ಳಿ, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಅರಿಶಿನ ಪುಡಿ, ಉಪ್ಪು.

Related image

ಮಾಡುವ ವಿಧಾನ:

ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ, ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯಲ್ಲಿ ಹಾಕಿ ಕಾದ ಬಳಿಕ ಸಾಸಿವೆ, ಜೀರಿಗೆ, ಈರುಳ್ಳಿಯನ್ನು ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತಿನ ನಂತರ ಬಟಾಣಿಕಾಳನ್ನು ಸೇರಿಸಿ. ಒಂದರಡು ನಿಮಿಷಗಳ ನಂತರ ಅರಿಶಿನ ಪುಡಿ, ಕರಿಬೇವು, ಳಾರದ ಪುಡಿ, ಧನಿಯಾಪುಡಿ ಸೇರಿಸಿ ಉಪ್ಪು ಹಾಕಿ, ಚೆನ್ನಾಗಿ ತಿರುವಿ. ಅಗತ್ಯವಿರುವಷ್ಟು ನೀರು ಸೇರಿಸಿ. ಕಾಯಿತುರಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಗಿ ಬೆರೆಸಿ, ಸ್ವಲ್ಪ ಹೊತ್ತಿನ ಮೇಲೆ ಗರಂಮಸಾಲ ಸೇರಿಸಿ. ಮುಚ್ಚಳ ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಸ್ವಲ್ಪ ಹೊತ್ತಿನ ಮೇಲೆ ಕೆಳಗಿಳಿಸಿ. ರುಚಿ, ರುಚಿಯಾದ ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ, ಪೂರಿ, ಪರೋಟ ಮತ್ತು ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top