fbpx
ಆರೋಗ್ಯ

ಎಲ್ಲಾ ಡಾಕ್ಟರ್ ಗಳೂ ಮುಷ್ಕರ ಮಾಡುತ್ತಿರುವಾಗ ಕೇವಲ 5ರೂಪಾಯಿಗೆ ಬಡ ರೋಗಿಗಳ ಸೇವೆ ಮಾಡುತ್ತಿರುವ ವೈದ್ಯ..!

ಎಲ್ಲಾ ಡಾಕ್ಟರ್ ಗಳೂ ಮುಷ್ಕರ ಮಾಡುತ್ತಿರುವಾಗ ಕೇವಲ 5ರೂಪಾಯಿಗೆ ಬಡ ರೋಗಿಗಳ ಸೇವೆ ಮಾಡುತ್ತಿರುವ ವೈದ್ಯ..!

 

 

ಮಂಡ್ಯದ ಡಾ ಶಂಕರೇಗೌಡ ನಿಸ್ಸಂದೇಹವಾಗಿ ದೇಶದ ದಂತಕಥೆ. ಓದಿದ್ದು M.B.B.S , M.D ಚರ್ಮ ರೋಗದ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಶಿವನಹಳ್ಳಿ ತಾಲೂಕಿನವರಾದ ಇವರು ಬೆಳಿಗ್ಗೆ ತಮ್ಮ ಗ್ರಾಮದಲ್ಲಿ ಮತ್ತು ಮಧ್ಯಾಹ್ನ ಮಂಡ್ಯದ ತಮ್ಮ ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ಕೇವಲ 5 ರೂ ಪಡೆದು ಚಿಕಿತ್ಸೆ ನೀಡುತ್ತಾರೆ. ಎಷ್ಟೋ ಬಾರಿ 5 ರೂ ಗಳನ್ನು ಸಹ ಪಡೆಯುವುದಿಲ್ಲ.

 

 

ಗುರು ಖಾಸಗಿ ವೈದ್ಯರುಗಳೆಲ್ಲಾ ಸೇರಿ ಮುಷ್ಕರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಆ ಮುಷ್ಕರದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಅವರು 5 ರೂಪಾಯಿ ಡಾಕ್ಟರ್ ಎಂದೇ ಖ್ಯಾತಿಯಿರುವ ಡಾ.ಶಂಕರೇಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘಕ್ಕೆ ಸೆಡ್ಡು ಹೊಡೆದುಕೊಂಡು ಬಂದಿರುವ ಡಾ.ಶಂಕರೇಗೌಡ 5 ರೂ.ಗಿಂತ ಜಾಸ್ತಿ ದುಡ್ಡನ್ನು ಪಡೆಯದೇ ತಮ್ಮ ರೋಗಿಗಳ ಸೇವೆಮಾಡಿಕೊಂಡು ಬಂದಿದ್ದಾರೆ.

 

 

ನೆನ್ನೆ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದ್ದವು. ಹಾಗಾಗಿ ನೆನ್ನೆ ರೋಗಿಗಳ ಸಂಖ್ಯೆ ಬಹಳ ಜಾಸ್ತಿ ಇತ್ತು, ಶಂಕರೇಗೌಡ ಅವರು ನೆನ್ನೆ ಎಲ್ಲಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. “ಖಾಸಗಿ ವೈದ್ಯಕೀಯ ನಿಯಂತ್ರಣ ವಿಧೇಯಕ ಜಾರಿಗೆ ತರುತ್ತಿರುವುದು ಬಹಳ ಸಂತೋಷದ ವಿಷಯ. ಈ ಮಸೂದೆಯನ್ನು ಯಾವಾಗಲೋ ಜಾರಿಗೆ ತರಬೇಕಿತ್ತು ಆದರೂ ಪರವಾಗಿಲ್ಲ ತಡವಾಗಿಯಾದರೂ ಜಾರಿ ಮಾಡುತ್ತಿರುವುದು ಸರಿಯಾಗಿದೆ.. ನಾನೂ ಯಾವ ರೋಗಿಯನ್ನು ಚಿಕಿತ್ಸೆ ನೀಡಬಾರದೆಂದು ಒತ್ತಡ ಬಂದಿತ್ತು. ಆದರೆ ಅದಕ್ಕೆ ನನ್ನ ಒಪ್ಪಿಗೆಯಿಲ್ಲ. ವೈದ್ಯನಾದ ಮೇಲೆ ನನ್ನ ರೋಗಿಗಳಿಗೆ ಚಿಕಿತ್ಸೆ ನೀಡುವುದೆ ನನ್ನ ಧರ್ಮ.’ ಎಂದು ಶಂಕರ್ ಗೌಡ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top