fbpx
ದೇವರು

ಕಾರ್ತಿಕ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ಜ್ವಾಲಾ ತೋರಣದ ಆಚರಣೆಯ ಹಿಂದೆ ಇರುವ ಸಮುದ್ರ ಮಂಥನದ ರೋಚಕ ಕಥೆ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಕಾರ್ತಿಕ ಮಾಸದಲ್ಲಿ ಶಿವನ ಪೂಜೆ ಮತ್ತು ಜ್ವಾಲಾ ತೋರಣ  ಆಚರಣೆಯ ಹಿಂದಿರುವ ಕಥೆ.

 

ಎಲ್ಲಾ ಮಾಸಗಳಿಗಿಂತಲೂ ಸಾಕಷ್ಟು ವೈಶಿಷ್ಟ್ಯತೆಯನ್ನು ಹೊಂದಿರುವ ಮಾಸವೇ ಕಾರ್ತಿಕ ಮಾಸ. ಈ ಮಾಸದಲ್ಲಿ ಹರಿಹರ ಇಬ್ಬರು ಬೇಧವಿಲ್ಲದೆ ಭಕ್ತಿಯಿಂದ ಪೂಜಿಸಲ್ಪಡುವ ಮಾಸವಾಗಿದೆ. ಈ ಮಾಸದಲ್ಲಿ ಎರಡು ಪ್ರಧಾನ ಆಚರಣೆಗಳನ್ನು ನಾವು ಕಾಣುತ್ತೇವೆ.

 

1.ದೀಪೋತ್ಸವ

2.ಜ್ವಾಲಾ ತೋರಣ.

ಹರಿ ಸರ್ವೋತ್ತಮನನ್ನು ದೀಪಗಳಿಂದ ಪೂಜಿಸಿದರೆ ಹರಹರ ಮಹಾದೇವನನ್ನು ಜ್ವಾಲಾ ತೋರಣಗಳಿಂದ ಪೂಜಿಸುತ್ತೇವೆ. ಈ ಮಾಸದಲ್ಲಿ ಮತ್ತೊಂದು ಪ್ರತ್ಯೇಕತೆ ಕೂಡ ಇದೆ. ಈ ಕಥೆಯ ಕೀರ್ತನೆಯಿಂದ, ಶ್ರವಣದಿಂದ ಮತ್ತು  ಸ್ಮರಣೆಯಿಂದ ಮಾತ್ರದಿಂದಲೇ ಯಶಸ್ಸು ವಿಜಯ ನಮ್ಮದಾಗುತ್ತದೆ ಎನ್ನುತ್ತವೆ ಶಾಸ್ತ್ರಗಳು.

 

ಕಥೆ.

ಸಮುದ್ರ ಮಂಥನದ ಸಮಯದಲ್ಲಿ ದಾನವರು ಮತ್ತು ದೇವತೆಗಳು ಎಲ್ಲರೂ ಒಟ್ಟಾಗಿ ಸೇರಿ. ಒಂದು ಕಡೆ ದಾನವರು ಇನ್ನೊಂದು ಕಡೆ ದೇವತೆಗಳು ಸಮುದ್ರ ಮಂಥನವನ್ನು  ಮಾಡುತ್ತಾರೆ. ಮ೦ಥನ ಮಾಡುವ ಸಮಯದಲ್ಲಿ ಅನೇಕ ಅನೇಕ ವಸ್ತುಗಳು ಸಮುದ್ರದಿಂದ   ಉದ್ಭವಿಸಿದವು. ಅದರಲ್ಲಿ ಒಂದು ಕಾಲಕೂಟ ವಿಷವೂ ಸಹ ಹೊರಬಂತು. ದೇವತೆಗಳು ದಾನವರು ಇಬ್ಬರೂ ಸಹ ದಿಕ್ಕು ಕಾಣದೆ ಹೌಹಾರಿದರು.

ದೇವತೆಗಳು ನಾರಾಯಣನಲ್ಲಿ ಪ್ರಾರ್ಥನೆಯನ್ನು ಮಾಡಿ ಭಕ್ತಿಯಿಂದ ಕೇಳಿಕೊಂಡರೂ ಅದಕ್ಕೆ ನಾರಾಯಣನು ಇದಕ್ಕೆ ನಾನು ಸೂಕ್ತನಾದವನಲ್ಲ. ಆ ಶಂಭೋ ಶಂಕರನೇ ನಮ್ಮೆಲ್ಲರನ್ನು ರಕ್ಷಿಸುವವನು. ಆತನಲ್ಲಿ ಮೊರೆ ಹೋಗಬೇಕೆಂದು ಸೂಚಿಸಿದರು.

ಆಗ ಮುಕ್ಕೋಟಿ ದೇವತೆಗಳು ಸಹ ಕೈಲಾಸ ಮಾರ್ಗವನ್ನು ಹಿಡಿದರಂತೆ. ಅಲ್ಲಿ ಅರ್ಧ ನಾರೀಶ್ವರರಾದ ಈ ಸೃಷ್ಟಿಯ ಆದಿ ದಂಪತಿಗಳಾದ ಶಿವ ಪಾರ್ವತಿ ದಂಪತಿಗಳು ಸಮಸ್ತ ದೇವತೆಗಳನ್ನು ಕಂಡು ವಿಷಯವೇನೆಂದು ವಿಚಾರಿಸಿದರು. ಹಾಗೆ ದೇವತೆಗಳು ಜಗತ್ತಿನ ಪಾಲಕನಾದ ದೇವನೇ ನಿನಗೆ ತಿಳಿಯದಿರುವ ವಿಷಯ  ಈ ಸೃಷ್ಟಿಯಲ್ಲಿ ಏನಿದೆ ? ಎನ್ನುತ್ತಾ… ಸಮುದ್ರ ಮಂಥನ ಸಾಗುತ್ತಿರುವ  ವಿಷಯವನ್ನು ತಿಳಿಸಿದರು.

 

 

ಮಂಥನ ಜರುಗುವಾಗ ಕಾಲಕೂಟ ವಿಷವು ಉದ್ಭವವಾದ ವಿಷಯವನ್ನು  ತಿಳಿಸಿದರು. ಇದರಿಂದ ಸಮಸ್ತ ಸೃಷ್ಟಿಯೇ ನಾಶವಾಗುವ ಸಂಭವವಿದೆ. ಉಪಾಯ ಕಾಣದೆ ನಿಮ್ಮ ಅನುಗ್ರಹಕ್ಕೆ ಬಂದಿದ್ದೇವೆ ಎಂದು ಸಹ ತಿಳಿಸಿದರು ದೇವತೆಗಳು. ಆಗ ಆ ದಂಪತಿಗಳು  ಮುಗುಳು ನಗುತ್ತಾ.. ಎಲ್ಲಿ ಆ ವಿಷ ಎಂದು ಕೇಳಿದರ೦ತೆ. ಆಗ  ದೇವತೆಗಳು ಅದನ್ನು ತೋರಿಸಿದರು. ಪರಮೇಶ್ವರನು  ಪಾರ್ವತಿಯ ಕಡೆಗೆ ನೋಡಿ ಪ್ರಶ್ನಾರ್ಥಕವಾಗಿ ಪಿಸುಗುಟ್ಟಿದನು ವಿಷವನ್ನು ಸೇವಿಸಲೇ ಎಂದು ಪಾರ್ವತಿಯನ್ನು ಕೇಳುತ್ತಾನೆ. ಆಗ ಪಾರ್ವತಿಯು ಸ್ವಾಮಿ ಲಯ ಕಾರಕನಾದ ನಿಮಗೆ ಲಯವು೦ಟೇ.. ಇಲ್ಲಿಯೂ ಲೀಲಾ ನಾಟಕವೇ ಎಂದು ಹೇಳುತ್ತಾ… ವಿಷವನ್ನು ಸ್ವೀಕರಿಸಲು ಹೇಳಿದಳಂತೆ. ಆಗ ಪರಮೇಶ್ವರನು ನೇರಳೆ ಬಣ್ಣದ ಆ ವಿಷವನ್ನು ತುಟಿಗಳ ಬಳಿ ತೆಗೆದುಕೊಂಡು ಹೋದಾಗ ದೇವತೆಗಳು ಅಡ್ಡ ತಡೆದರ೦ತೆ.

ಕುಡಿಯಲು ಆರಂಭಿಸಿದ ಆ ಪರಮೇಶ್ವರನಿಗೆ ದೇವತೆಗಳು ದಿಕ್ಕೆಟ್ಟು ಸ್ವಾಮಿ ಈ ಕಾಲಕೂಟ ವಿಷವನ್ನು ನೀವು ಸೇವಿಸಿದರೆ ಮೋಕ್ಷ ಸ್ಥಾನವಾದ ಈ ಭೂ ಮಂಡಲವು ಪ್ರಳಯವಾಗುತ್ತದೆ ಎಂದರಂತೆ. ಹಾಗಾದರೆ ಸ್ವಲ್ಪ ಕುಡಿದು ಈ ವಿಷವನ್ನು ಉಗುಳಿ ಬಿಡಲೇ ಎಂದು ಮುಗುಳು ನಗುತ್ತಾ ಶಿವನು ಕೇಳಿದನು ಆ ಪರಮೇಶ್ವರನು. ಅದಕ್ಕೆ ದೇವತೆಗಳು ನೀವು ಉಗುಳಿದ ಆ ವಿಷವು ಭೂಮಂಡಲವನ್ನು ನಡುಗಿಸುತ್ತದೆ ಎಂದರು.

 

 

ಆಗ ಶಂಕರನು  ಆ ವಿಷವನ್ನು ಉಗುಳಲೂ ಆಗದೆ ನುಂಗಲೂ ಆಗದೆ ಗರುಡ ಕಂಠನಾದನಂತೆ . ಆಗ ಆ ಶಂಕರನು ಗರುಳ ಭಾಗದಲ್ಲಿರುವ ಹಾಗೇ ನಿಂತು ಬಿಟ್ಟಿತಂತೆ ಆ ವಿಷ. ಆಗ ಲೀಲಾ ನಾಟಕ ಸೂತ್ರಧಾರಿಯಾದ ಆ ನಾಟಕದಲ್ಲಿ…. ಇನ್ನೂ ಈ ಘಟನೆ ನಡೆದ ಸ್ವಲ್ಪ ಸಮಯದಲ್ಲಿಯೇ ಆ ಬೋಳಾ ಶಂಕರನ ಮೂರ್ಛೆ ಹೋದನಂತೆ. ಆ ಜಗನ್ಮಾತೆಯಾದ ಪಾರ್ವತಿ ಈ ಸೃಷ್ಟಿಯ ನಾಟಕದ ಅಂಗವಾಗಿ ಶಿವನ ಕಂಠವನ್ನು ಹಿಡಿದು ಉಗುಳಲು ಬಿಡದೆ ನುಂಗಲು ಬಿಡದೆ ಅದನ್ನು ನಿಸ್ತೇಜ ಗೊಳಿಸಿದಳು. ಪತಿಯ ಪ್ರಾಣವನ್ನು ಉಳಿಸಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.

ಸರ್ವ ಮ೦ಗಳೆಯಾದ ಈಕೆ ಜಗತ್ತಿಗೆ ತೋರಲು ತನ್ನ ಪತಿಯ ಪ್ರಾಣವನ್ನು ಉಳಿಸಿದಲ್ಲಿ… ಜ್ವಾಲಾ ತೋರಣದಲ್ಲಿ ನಾನು ಪ್ರವೇಶಿಸುವುದಾಗಿ ತಿಳಿಸುತ್ತಾಳೆ. ಆಗ ಪಾರ್ವತಿಯು ಪತಿಯ ಪ್ರಾಣ ಉಳಿದ ಬಳಿಕ ಜ್ವಾಲಾ ತೋರಣದಲ್ಲಿ ಪತ್ನಿಯಾದ ಪಾರ್ವತಿಯೂ ಪ್ರವೇಶಿಸುತ್ತಾಳೆ… ಆಕೆಯ ಹಿಂದೆಯೇ ಶಿವನು ಹಿಂಬಾಲಿಸುತ್ತಾನೆ.. ಲೀಲಾ ನಾಟಕ ಸೂತ್ರಧಾರಿಗಳಾದ ಇಬ್ಬರೂ ಸ್ವಕ್ಷೇಮವಾಗಿ ಮರಳಿ ಕೈಲಾಸವನ್ನು ಸೇರುತ್ತಾರೆ .

ಹೀಗೆ ಕಾರ್ತಿಕ ಮಾಸದಲ್ಲಿ ಜ್ವಾಲಾ ತೋರಣವು ಶಿವ ಪಾರ್ವತಿಯ ಕಾರಣ  ಆಚರಣೆಗೆ ಬಂತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top