fbpx
ದೇವರು

ನವೆಂಬರ್ 18 ನೇ ತಾರೀಖು ಕಾರ್ತಿಕ ಮಾಸದ ಕಡೇ ಶನಿ ಅಮಾವಾಸ್ಯೆ ಆ ದಿನ ತಪ್ಪದೆ ಈ ಕೆಲಸಗಳು ಮಾಡಿ ಎಲ್ಲ ಕಷ್ಟಗಳು ಕಳೆದು ಶುಭ ದಿನಗಳು ಶುರುವಾಗುತ್ತೆ

ನವೆಂಬರ್ ಹದಿನೆಂಟನೇ ತಾರೀಖಿನಂದು ಕಾರ್ತಿಕ ಮಾಸದ ಕಡೇ ದಿನ ಅದೇ ಕಾರ್ತಿಕ ಅಮಾವಾಸ್ಯೆ .

 

 

ಇನ್ನೇನು ಕಾರ್ತಿಕ ಮಾಸ ಮುಗಿಯುತ್ತಾ ಬರುತ್ತಿದೆ .ಇದೇ ಶನಿವಾರ ಕಾರ್ತಿಕ ಮಾಸದ ಕಡೆಯ ಅಮಾವಾಸ್ಯೆಯ ದಿನವಾಗಿದೆ .ಈ  ಕಾರ್ತಿಕ ಅಮಾವಾಸ್ಯೆಯೂ ಶನಿವಾರದ ದಿನವೇ ಬಂದಿರುವುದರಿಂದ ಈ ದಿನವನ್ನು ಶನಿ ಅಮಾವಾಸ್ಯೆ ಎಂದು ಕೂಡ ಕರೆಯಲಾಗಿದೆ.

ಈ ದಿನದಂದು ನೀವು ಯಾವುದೇ ಪೂಜೆ, ಯಾವುದೇ ಕೆಲಸ, ಕಾರ್ಯವನ್ನು ಮಾಡಿದರೆ ಅದು ಯಶಸ್ವಿಯಾಗುವುದು. ಯಾಕೆಂದರೆ ಆ ದಿನದ ಮಹತ್ವವೇ ಹಾಗೆ ಹಿಂದೂಗಳ ಪ್ರಕಾರ ಅಮಾವಾಸ್ಯೆ ಎಂದರೆ ಪಿತೃಗಳಿಗೆ ಸಂಬಂಧಪಟ್ಟ ದಿನ ಎಂದು ಹೇಳಲಾಗಿದೆ. ಆ ದಿನ ಯಾವುದೇ ಜಪತಪ ಹಾಗೂ ಹೋಮ ಮಾಡಿಸುವುದರಿಂದ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಆಗುತ್ತವೆ ಎಂದು ಸಹ ಹೇಳಿದ್ದಾರೆ .

ಕಾರ್ತಿಕ ಅಮಾವಾಸ್ಯೆ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ ಹಾಗೂ ಕಾರ್ತಿಕ ಮಾಸವೇ ಬಹಳ ಪವಿತ್ರವಾದದ್ದು ಎಂದು ಸಹ ಹೇಳಿದ್ದಾರೆ . ಈ ದಿನ ಈ ಚಿಕ್ಕ ಕೆಲಸಗಳನ್ನು ಹಾಗೂ ಕೆಲವು ಉಪಾಯಗಳನ್ನು ಮಾಡುವುದರಿಂದ ಹೆಚ್ಚು ಫಲವೂ ಸಿಗುವುದು ಇವುಗಳನ್ನು ಮಾಡುವುದರಿಂದ ಶನಿಯ ವಿಶೇಷ ಕೃಪೆಯ ಜೊತೆಗೆ ನಿಮ್ಮ ಎಲ್ಲಾ ಸಮಸ್ಯೆಗಳು ಸಹ ದೂರವಾಗುವವು. ಆ ಉಪಾಯಗಳು ಯಾವುವು  ಎಂಬುದನ್ನು ನೋಡೋಣ…..

ನಾವು ಗೋ ಮಾತೆಯನ್ನು ದೇವರೆಂದು ಪೂಜಿಸುತ್ತೇವೆ ಹಾಗೂ ಕಾಮಧೇನು ಸಕಲ ಕಷ್ಟವನ್ನು ನಿವಾರಿಸುವವನು. ಆದ್ದರಿಂದ ಈ ದಿನ ಹಸುವಿನ ಹಾಲಿನಿ೦ದ ನಿಮ್ಮ ಊರಿನ ಪಕ್ಕದ ದೇವಸ್ಥಾನದಲ್ಲಿರುವ  ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ ಹಾಗೂ ಅಂದು ನಿಮ್ಮ ಜೀವನದ ಕಷ್ಟ-ಸುಖವನ್ನು ಪರಮಾತ್ಮನೊಂದಿಗೆ ಹಂಚಿಕೊಳ್ಳಿ.

 

 

ಈ ದಿನ ಅಭಿಷೇಕ ಮಾಡಿ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಭಕ್ತಿಯಿಂದ ಶಿವನನ್ನು ಬೇಡಿಕೊಂಡರೆ ನಿಮ್ಮ ಕನಸು ನನಸಾಗುವುದು . ಅಷ್ಟೇ ಅಲ್ಲದೆ ಅಭಿಷೇಕಕ್ಕೆ ತೆಗೆದುಕೊಂಡು ಹೋದ ವಸ್ತುಗಳನ್ನು ಮತ್ತೆ ಮರಳಿ ತೆಗೆದುಕೊಂಡು ಮನೆಗೆ ತರಬೇಡಿ. ಅವುಗಳನ್ನು ಅಲ್ಲೇ ಇಟ್ಟು ಸಕಲ ಇಷ್ಟಾರ್ಥಗಳನ್ನು ಈಡೇರಿಸುವ೦ತೆ ಕೇಳಿಕೊಳ್ಳಬೇಕು.

ಹಾಗೂ ಅಮಾವಾಸ್ಯೆಯ ದಿನ ಈ ಕೆಲಸವನ್ನು ಸಹ ಮಾಡಬಹುದು.

 

 

ಅದೇ ಒಂದು ಕೊಬ್ಬರಿಯಲ್ಲಿ ರಂಧ್ರ ಮಾಡಿ ಅದರೊಳಗೆ ಸಕ್ಕರೆಯನ್ನು ತುಂಬಿ ದೇವಸ್ಥಾನದ ಪಕ್ಕ ಇರುವ ಯಾವುದಾದರೂ ಒಂದು  ಕಪ್ಪು  ಇರುವೆ ಗೂಡಿಗೆ ಆ ಸಕ್ಕರೆಯನ್ನು ಆಹಾರವಾಗಿ ನೀಡಿ. ದೇವಸ್ಥಾನ ದೂರವಿದ್ದರೆ ನಿಮ್ಮ ಮನೆಯ ಪಕ್ಕದಲ್ಲೇ ಇರುವ ಕಪ್ಪು  ಇರುವೆ ಗೂಡಿಗೆ ಕೂಡ ಹಾಕಬಹುದು. ಹಾಗೆ ಮಾಡಿದರೆ ನೀವು ಆನೇಕ ದಿನಗಳ ಆಹಾರ ನೀಡಿದ ಹಾಗೆ ಆಗುತ್ತದೆ. ಆದ್ದರಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ತಂತಾನೇ ಸಿಗಲಿದೆ.

ನೀವು ನಿಮ್ಮ ಜೀವನದಲ್ಲಿ ತುಂಬಾ ಕಷ್ಟ ಪಡುತ್ತಿದ್ದರೆ.. ಎಷ್ಟು ಕಷ್ಟಪಟ್ಟರೂ ನಿಮ್ಮ ಕೈಲಿ ಹಣ ನಿಲ್ಲುತ್ತಿಲ್ಲ.. ಮನೆಯಲ್ಲಿ ಕಷ್ಟವಿದೆ ಎಂದಾದರೆ ಈ ಉಪಾಯವೊಂದನ್ನು ನೀವು ಶನಿ ಅಮಾವಾಸ್ಯೆಯ ದಿನ ಮಾಡಿ ನೋಡಿ …

ನೀವು ಯಾವುದಾದರೂ ಒಂದು ಶನಿವಾರ ದಿನ ಶನಿಯ ಈ ವ್ರತವನ್ನು ಆಚರಿಸಿ. ಶನಿವಾರ ಅಂದರೆ ಶನಿಯ ಅಮಾವಾಸ್ಯೆಯ ದಿನ ಶನೈಶ್ಚರ ದೇವನ ಮಂದಿರಕ್ಕೆ ಹೋಗಿ ವಿಧಿವತ್ತಾಗಿ ಶನೈಶ್ಚರ ದೇವರ ಪೂಜೆ ಮಾಡಬೇಕು. ನಂತರ ಸಾಸಿವೆ ಎಣ್ಣೆಯನ್ನು ಬಳಸಿ ಒಂದು ದೀಪವನ್ನು ಶನೈಶ್ಚರ ದೇವರ ಮುಂದೆ ಬೆಳಗಿಸಬೇಕು .

ಇದಕ್ಕೂ ಮುಂಚೆ ನೀವು ಸ್ನಾನ ಮಾಡಿ ಶುಚಿರ್ಭೂತರಾಗಿರುವುದು ಅತ್ಯಂತ ಅವಶ್ಯಕವಾಗಿದೆ.   ಶನೈಶ್ಚರ ದೇವನ ಮುಂದೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯ ದೀಪ ಬೆಳಗಿಸಿದ ನಂತರ ಭಕ್ತಿ ಶ್ರದ್ಧೆಯಿಂದ ಎರಡೂ ಕೈಯನ್ನು ಜೋಡಿಸಿ ಶನಿಯ ಮಂತ್ರವನ್ನು ಜಪಿಸಬೇಕು.

 

“ ಓಂ ಶನೈಶ್ಚರ ದೇವಾಯ ನಮಃ” ಈ ಮಂತ್ರವನ್ನು ಜಪಿಸುತ್ತಾ ಪೂಜೆ ಮಾಡಬೇಕು.

ಇದರಿಂದ ನೀವು ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ಅನೇಕ ಪಾಪ ಕರ್ಮಗಳಿಂದ ಮುಕ್ತಿ ದೊರೆಯುವಂತೆ ಶನೈಶ್ಚರ ದೇವನನ್ನು ಪ್ರಾರ್ಥಿಸಿರಿ. ಯಾಕೆಂದರೆ ಶನೈಶ್ಚರ ದೇವನು ನ್ಯಾಯದ ದೇವತೆಯಾಗಿದ್ದಾನೆ. ಶನಿಯು ನ್ಯಾಯದ ದೇವರೆಂದೇ ಪ್ರಖ್ಯಾತಿಯಾಗಿದ್ದಾನೆ. ಶನೈಶ್ವರ  ದೇವನ ಪೂಜೆಯ ನಂತರ ರಾಹು ಕೇತುವಿನ ಪೂಜೆಯನ್ನು ಅವಶ್ಯವಾಗಿ ಮಾಡಿ .

ಶನಿವಾರದ ದಿನ ವ್ರತವನ್ನು ಆಚರಿಸಿ ಕೇವಲ ಒಂದು ಬಾರಿ ಮಾತ್ರ ಊಟವನ್ನು ಮಾಡಿ ಮಧ್ಯಾಹ್ನ ಅಥವಾ ಸಂಜೆ ಮಾತ್ರ ಅನ್ನ ಆಹಾರವನ್ನು ಸೇವಿಸಿ.

ಶನಿ ಅಮಾವಾಸ್ಯೆಯ ದಿನ ಸಂಜೆ   ಅರಳಿ ಮರಕ್ಕೆ  ಏಳು ಸುತ್ತು ಪ್ರದಕ್ಷಿಣೆ ಮಾಡಿ ಶುದ್ಧ ಜಲವನ್ನು ಅರ್ಪಿಸಿ ಒಂದು ದಾರವನ್ನು ಅರಳಿ ಮರಕ್ಕೆ ಸುತ್ತಿ.

 

 

ಹೀಗೆ ಮಾಡುವುದರಿಂದ ಶನಿಯ ವಿಶೇಷ ಕೃಪೆಗೆ ನೀವು ಪಾತ್ರರಾಗುವಿರಿ.ನಿಮ್ಮ ಮನೆಯಲ್ಲಿರುವ ಕಷ್ಟಗಳು ದೂರವಾಗಿ ಸಂತೋಷದ ದಿನಗಳು ಬರಲು ಆರಂಭವಾಗುವವು.

ಶನಿವಾರದ ದಿನ ಕಪ್ಪು ಬಟ್ಟೆಯನ್ನು ಧರಿಸಿ ಭಗವಂತನಾದ ಶನಿದೇವನನ್ನು  ಪೂಜಿಸಿ ಇದರಿಂದ ಶನಿಯು ಪ್ರಸನ್ನನಾಗುವನು.

ನಿಮಗೆ ಜೀವನದಲ್ಲಿ ಒಳ್ಳೆಯ ದಿನಗಳು ಬಂದು ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಲಿದ್ದಾಳೆ. ನೀವು ಕೂಡ ಕುಬೇರರಾಗಬಹುದು. ಧನವಂತರಾಗಬಹುದು.

 

 

ಈ ಕಾರ್ತಿಕ ಅಮಾವಾಸ್ಯೆ ಬಹಳ ಪವಿತ್ರವಾದುದು ಅಷ್ಟೇ ಅಲ್ಲದೆ ಶಿವನಿಗೆ ಸಂಬಂಧ ಪಟ್ಟಿರುವುದು ಆಗಿರುವುದರಿಂದ ಮುಖ್ಯವಾಗಿ ಈ ಉಪಾಯಗಳನ್ನು ಮಾಡಿ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top