fbpx
ಕಿರುತೆರೆ

ಕಿರುತೆರೆಗೆ ಮತ್ತೆ ಬಂದ್ರು ರವಿಮಾಮ: ಕಾರ್ಯಕ್ರಮದ ಸ್ಪೆಷಾಲಿಟಿ ಏನು ಗೊತ್ತಾ?

ಕಿರುತೆರೆಗೆ ಮತ್ತೆ ಬಂದ್ರು ರವಿಮಾಮ: ಕಾರ್ಯಕ್ರಮದ ಸ್ಪೆಷಾಲಿಟಿ ಏನು ಗೊತ್ತಾ?

 

 

ಕಲರ್ಸ್ ಕನ್ನಡ ಚಾನಲ್‌ನ “ಡ್ಯಾನ್ಸಿಂಗ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ರವಿಚಂದ್ರನ್‌, ಈಗ ಮತ್ತೆ ತೀರ್ಪುಗಾರರಾಗಿ ಕಿರುತೆರೆಯ ಕಾರ್ಯಕ್ರಮವೊಂದಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ ಬಾರಿ ಕಲರ್ಸ್ ಕನ್ನಡ ಚಾನೆಲ್ ಅಲ್ಲ ಬದಲಾಗಿ ಅವರು ಉದಯ ಟಿವಿಯಲ್ಲಿ ನವೆಂಬರ್‌ 18ರಿಂದ ಪ್ರಾರಂಭವಾಗಲಿರುವ “ಉದಯ ಸಿಂಗರ್‌ ಜ್ಯೂನಿಯರ್’ ಸಿಂಗಿಂಗ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ.

 

 

5 ರಿಂದ 13 ವರ್ಷದ ಮಕ್ಕಳು ಭಾಗವಹಿಸುವ ‘ಉದಯ ಸಿಂಗರ್ ಜೂನಿಯರ್ಸ್’ ಇದೇ ನವೆಂಬರ್ 18 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. 16 ಮಕ್ಕಳ ಈ ಸ್ಪರ್ಧೆಯಲ್ಲಿ ಇಬ್ಬರು ಮುಖ್ಯ ತೀರ್ಪುಗಾರರಿದ್ದು ಒಬ್ಬ ಮಾರ್ಗದರ್ಶಕರಿರುತ್ತಾರೆ. ಅಲ್ಲದೆ ಪ್ರತಿ ವಾರ ಹೆಸರಾಂತ ಸಂಗೀತಗಾರರು ಮತ್ತು ಸೆಲಿಬ್ರಿಟಿಗಳು ಈ ಶೋಗೆ ವಿಶೇಷ ಮಾರ್ಗದರ್ಶಕರಾಗಿ ಆಗಮಿಸುತ್ತಾರೆ.

 

 

ಸ್ವತಃ ಗೀತಾ ರಚನೆಕಾರ, ಸಂಗೀತ ನಿರ್ದೇಶಕನಾಗಿರುವ ವಿ. ರವಿಚಂದ್ರನ್ ಅವರು ಈ ಕಾರ್ಯಕ್ರಮದ ಮುಖ್ಯ ನಿರ್ಣಾಯಕರಾಗಿರುತ್ತಾರೆ. ಉಳಿದಂತೆ ಸಂಗೀತ ದಿಗ್ಗಜ ಮನೋ ಎಂದೆ ಪ್ರಖ್ಯಾತಿ ಪಡೆದ ನಾಗೂರು ಬಾಬು ಮತ್ತೊಬ್ಬ ನಿರ್ಣಾಯಕರಾಗಿ ಮತ್ತು ಸಂಗೀತ ರವೀಂದ್ರನಾಥ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ಚಲನಚಿತ್ರಗಳ ಹಾಡುಗಳ ಜೊತೆಗೆ ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ದೇಶಭಕ್ತಿ ಗೀತೆ ಮತ್ತು ಇಂಡೋವೆಸ್ಟರ್ನ್ ಹಾಡುಗಳನ್ನು ಹಾಡಲು ಅವಕಾಶವಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top