fbpx
ಸಮಾಚಾರ

UC ಬ್ರೌಸರ್ ಆ್ಯಪ್ ನಿಮ್ಮ ಫೋನ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ: ಯಾಕೆ ಗೊತ್ತಾ?

UC ಬ್ರೌಸರ್ ಆ್ಯಪ್ ನಿಮ್ಮ ಫೋನ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ: ಯಾಕೆ ಗೊತ್ತಾ?

 

 

ನೀವು ನಿಮ್ಮ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ UC ಬ್ರೌಸರ್ ಆ್ಯಪ್ಅನ್ನು ಬಳಸುತ್ತಿದ್ರೆ ತಕ್ಷಣ ಡಿಲೀಟ್ ಮಾಡಿ. ಬಹುತೇಕ UC ಬ್ರೌಸರ್ ಆ್ಯಪ್ ಬಳಕೆದಾರರು ಈ ಆಪ್ ಅನ್ನು ಉಪಯೋಗಕಾರಿ ಎಂದು ತಿಳಿದುಕೊಂಡಿರಬಹುದು ಆದರೆ ಅದೇ UC ಬ್ರೌಸರ್ ಆ್ಯಪ್ ನಿಮಗೆ ತೊಂದರೆ ಕೊಡುತ್ತದೆ ಎಂಬುದನ್ನು ನೀವು ನಂಬಲೇಬೇಕು.

 

 

ಯುಸಿ ಬ್ರೌಸರ್ ಭಾರತೀಯ ಗ್ರಾಹಕರ ಡೇಟಾವನ್ನು ಚೀನಾದಲ್ಲಿ ಸರ್ವರ್ ಕಳುಹಿಸುತ್ತಿದೆ, ಈ ರೀತಿ ಡೇಟಾ ಕಡಿಯುತ್ತಿರುವ ಕಂಪನಿಗಳ ವಿರುದ್ಧ ಶಿಸ್ತುಕ್ರವನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತ ಸರ್ಕಾರ ತಿಳಿಸಿತ್ತು. UC ಬ್ರೌಸರ್ ಆ್ಯಪ್ ಯಿಂದ ಭಾರತೀಯ ಮೊಬೈಲ್ ಬಳಕೆದಾರರ ಭದ್ರತೆ ಮತ್ತು ಗೌಪ್ಯತೆ ದಕ್ಕೆ ತರುತ್ತಿದೆ ಎಂಬ ಆರೋಪವೂ ಕೂಡ UC ಬ್ರೌಸರ್ ಮೇಲೆ ಕೇಳಿಬರುತ್ತಿತ್ತು.

 

 

ಈ ಎಲ್ಲಾ ಆರೋಪಗಳು UC ಬ್ರೌಸರ್ ಮೇಲೆ ಇರೋದ್ರಿಂದ ಬಳಕೆದಾರರ ಹಿತದೃಷ್ಟಿಯಿಂದ ಚೀನಾ ಮೂಲದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಅಲಿ ಬಾಬಾ ಒಡೆತನದ UC ಬ್ರೌಸರ್ ಗೆ ಗೂಗಲ್ ಪ್ಲೇ ಸ್ಟೋರ್ ಕೊಕ್ ನೀಡಲಾಗಿದೆ..ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣ ಹೆಚ್ಚಾಗುತ್ತಿದ್ದು ಅಲ್ಲದೆ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಮೊಬೈಲ್ ನಲ್ಲೆ ನಡೆಸುವುದರಿಂದ ಚೀನಾ ಮೂಲದ ಈ ಆಪ್ ಅಣ್ಣ ಇಟ್ಟುಕೊಳ್ಳುವುದು ಸುರಕ್ಷಿತವಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top