fbpx
ದೇವರು

ಅಮಾವಾಸ್ಯೆ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಈ ಮಂತ್ರವನ್ನು ಹೇಳಿ ಈ ರೀತಿ ಪೂಜೆ ಮಾಡಿದರೆ ಜಾತಕ ದೋಷ , ಗ್ರಹ ದೋಷ , ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಹೊಂದುವಿರಿ

ಅಮಾವಾಸ್ಯೆಯ ದಿನ ಆಂಜನೇಯ ಸ್ವಾಮಿಗೆ ಈ ಮಂತ್ರವನ್ನು ಹೇಳಿ ಈ ರೀತಿ ಪೂಜೆ ಮಾಡಿದರೆ ಕಷ್ಟಗಳು ದೂರವಾಗುವವು.

 

ಕಾರ್ತಿಕ ಮಾಸದ ಅಮಾವಾಸ್ಯೆಯು  ಕಾರ್ತಿಕ ಶನಿವಾರವೇ ಬಂದಿರುವುದು. ಇದನ್ನು ‘ಶನಿ ಅಮಾವಾಸ್ಯೆ’ ಎಂದು ಸಹ ಕರೆಯಲಾಗುತ್ತದೆ. ಶನಿವಾರದ ದಿನ ಆಂಜನೇಯ ಸ್ವಾಮಿಗೆ ಪೂಜೆ ಮಾಡಿದರೆ. ಶನಿ ಗ್ರಹದ ದೋಷಗಳು ಕಡಿಮೆಯಾಗುತ್ತವೆ.

 

 

ಆಂಜನೇಯ ಸ್ವಾಮಿಯನ್ನು ಪ್ರಸನ್ನ ಮಾಡಿಕೊಳ್ಳುವುದರಿಂದ. ಗ್ರಹ ದೋಷಗಳು ದೂರವಾಗುತ್ತವೆ ಎಂದು ಪುರೋಹಿತರು ತಿಳಿಸಿದ್ದಾರೆ. ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಲು  ಅತ್ಯಂತ ಅನುಕೂಲಕರವಾದ ದಿನ ಮಂಗಳವಾರವೇ…. ಎಂದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಆದರೆ ಮಂಗಳವಾರದ ಜೊತೆಗೆ ಶನಿವಾರ ಮತ್ತು ಗುರುವಾರವೂ ಸಹ ಮತ್ತು ಪ್ರತಿ ಮಾಸದಲ್ಲೂ ಬರುವ ಅಮಾವಾಸ್ಯೆಯೇ  ಅತ್ಯಂತ ಶ್ರೇಷ್ಠವಾದದ್ದು ಎಂದು ತುಂಬಾ ಜನರಿಗೆ ತಿಳಿದಿಲ್ಲ ಶನಿ ದೋಷದಿಂದ ಬಳಲುತ್ತಿರುವವರು ಶನಿವಾರದ ದಿನ ಆಂಜನೇಯ ಸ್ವಾಮಿಯನ್ನು ಆರಾಧಿಸುವುದು ಅತ್ಯಂತ ಮುಖ್ಯ ಮತ್ತು  ಪವಿತ್ರವಾದದ್ದು.

ಶನಿದೋಷ ಇಲ್ಲದವರು ಮಂಗಳವಾರ ಮತ್ತು  ಗುರುವಾರದ  ದಿನಗಳಲ್ಲಿ ಪೂಜೆ ಮಾಡಿಕೊಳ್ಳಬಹುದು. ಹಾಗೆಯೇ ಪ್ರತಿ ಮಾಸದಲ್ಲಿಯೂ ಬರುವ  ಅಮಾವಾಸ್ಯೆಯ ದಿನ ಆಂಜನೇಯ ಸ್ವಾಮಿಯನ್ನು ಆರಾಧಿಸುವುದು ಅತ್ಯಂತ ಮುಖ್ಯವಾದದ್ದು. ಶನಿದೋಷ ಇಲ್ಲದವರು ಮಂಗಳವಾರ ಮತ್ತು  ಗುರುವಾರದ ದಿನಗಳಲ್ಲಿ ಪೂಜೆ ಮಾಡಿಕೊಳ್ಳಬಹುದು.

 

 

ಹಾಗೆಯೇ ಪ್ರತಿ ಮಾಸದಲ್ಲಿ ಬರುವ ಅಮಾವಾಸ್ಯೆಯ ದಿನ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿದರೆ ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆ.

ಅಮಾವಾಸ್ಯೆಯ  ದಿನ ಆಂಜನೇಯ ಸ್ವಾಮಿಗೆ ವೀಳ್ಯದ ಎಲೆಯ ಹಾರ ಮತ್ತು ಕೇಸರಿ ಬಣ್ಣದ  ಸಿಂಧೂರದಿಂದ ಅರ್ಚನೆ ಮಾಡಿಸುವುದರಿಂದ ಅಷ್ಟ ಐಶ್ವರ್ಯಗಳು ಸಿದ್ಧಿಯಾಗುತ್ತದೆ ಎಂದು ಪ್ರತೀತಿಯಲ್ಲಿದೆ.

ಅಮಾವಾಸ್ಯೆಯ ದಿನ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಾವು ಅಂದುಕೊಂಡ ಕೆಲಸವೆಲ್ಲವೂ ದಿಗ್ವಿಜಯವಾಗುತ್ತದೆ ಎಂಬ ವಿಶ್ವಾಸ ಉಂಟಾಗುತ್ತದೆ.

ಆದ್ದರಿಂದ ಅಮಾವಾಸ್ಯೆಯ ಸಂಜೆ ವೇಳೆಯಲ್ಲಿ ಮಹಿಳೆಯರು ಮತ್ತು  ಪುರುಷರು ತುಪ್ಪದ ದೀಪವನ್ನು ಹಚ್ಚಬೇಕು. ನಂತರ ದೇವಸ್ಥಾನದಲ್ಲಿ ಹದಿನೆಂಟು ಸುತ್ತು ಪ್ರದಕ್ಷಿಣೆಯನ್ನು ಮಾಡಬೇಕು.

 

 

ಹೀಗೆ ಮಾಡುವುದರಿಂದ ಮನೋಧೈರ್ಯ, ಸಕಲ ,ಸಂಪತ್ತು  ಮತ್ತು  ಉನ್ನತ ಸ್ಥಾನಗಳು ಜೀವನದಲ್ಲಿ ದೊರೆಯುತ್ತವೆ.

ಹಾಗೆಯೇ ಈ ಅಮಾವಾಸ್ಯೆಯ ದಿನ ನಾವು ಇಲ್ಲಿ ಹೇಳಿರುವ ಮಂತ್ರವನ್ನು ಪಠಿಸಿರಿ. ಕರ್ಪೂರದ ಆರತಿಯನ್ನು ಸಮರ್ಪಿಸಿದರೆ ಗ್ರಹ ದೋಷಗಳು ದೂರವಾಗುತ್ತವೆ.

ಈ ಮಂತ್ರವನ್ನು ಒಂಬತ್ತು ಬಾರಿ ಜಪಿಸಬೇಕು…..

“ ಅಸಾಧ್ಯ ಸಾಧಕ ಸ್ವಾಮಿನ್  ಅಸಾಧ್ಯ೦ ತವ ಕಿ೦ ವದ ರಾಮಧೂತ ದಯಾ ಸಿಂಧೂ  ಮಮ ಕಾರ್ಯ೦  ಸಾಧಯೇ ಪ್ರಭೋ”.

ಮನೆಯಲ್ಲಿ ಯಾವಾಗಲೂ ಅಶಾಂತಿ ಇದ್ದರೆ ರಾಮ ಭಜನೆ ಮಾಡುತ್ತಿರುವ ಆಂಜನೇಯ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟು ನಾವು ಶ್ರೀ ರಾಮ ನಾಮವನ್ನು ಜಪಿಸಿದರೆ  ಅಶಾಂತಿ ದೂರವಾಗುತ್ತದೆ.

 

 

ಈ ರೀತಿ ಅಮಾವಾಸ್ಯೆಯ ದಿನ ಈ ಮಂತ್ರವನ್ನು ಪಠಿಸಿ ಪೂಜೆ ಮಾಡುವುದರಿಂದ ಆಂಜನೇಯ ಸ್ವಾಮಿಯ ಕೃಪಾ ಕಟಾಕ್ಷ ದೊರೆತು ಶನಿ ದೋಷಗಳು ಕಡಿಮೆ ಆಗುತ್ತವೆ ಮತ್ತು ಶನಿಗ್ರಹದ ದೋಷಗಳು ಮತ್ತು  ಅದರ ಪ್ರಮಾಣವೂ ಕಡಿಮೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top