fbpx
ಆರೋಗ್ಯ

ಹೆಂಗಸರ ಬಿಳಿ ಸೆರಗು/ ಬಿಳಿ ಮುಟ್ಟು ಸಮಸ್ಯೆಗೆ ಮನೆಯಲ್ಲಿಯೇ ಹೆಚ್ಚು ಖರ್ಚು ಮಾಡದೆ ಮಾಡಬಹುದಾದ ಆಯುರ್ವೇದದ ಪರಿಹಾರಗಳು

ಬಿಳಿ ಸೆರಗು/ ಬಿಳಿ ಮುಟ್ಟು ಸಮಸ್ಯೆಗೆ ಆಯುರ್ವೇದದ ಪರಿಹಾರಗಳು

 

 

ಬಿಳಿ ಸೆರಗು/ ಬಿಳಿ ಮುಟ್ಟು ಮಹಿಳೆಯರನ್ನು ಎಲ್ಲಾ ವಯಸ್ಸಿನಲ್ಲೂ ಕಾಡುವಂತಹ ಸಾಮಾನ್ಯ ತೊಂದರೆ. ಈ ಸಮಸ್ಯೆ ಶೇ 80ರಿಂದ90ರಷ್ಟು ಮಹಿಳೆಯರಿಗೆ ಜೀವನದ ಯಾವುದಾದರೂ ಒಂದು ಹಂತದಲ್ಲಿ ಕಡ್ಡಾಯವಾಗಿ ಕಾಡುತ್ತದೆ. ಕಾರಣ ಇಷ್ಟೆ ಮಹಿಳೆಯರ ಜನನಾಂಗವು ಬಹುವಾಗಿ ತೇವವಿದ್ದು ಸುಲಭವಾಗಿ ಸೋಂಕು ತಗಲುವ ಸಂಭವವಿರುತ್ತದೆ. ಆದರೆ ಸಾಮಾನ್ಯವಾಗಿ ಮಹಿಳೆಯರಿಗೆ ಇದರ ಬಗ್ಗೆ ಸಂಕೋಚವಿದ್ದು ವೈದ್ಯರಬಳಿ ಕೂಡ ಹೇಳಿಕೊಳ್ಳುವುದಿಲ್ಲ. ಅದರ ಪರಿಣಾಮವಾಗಿ ಮಹಿಳೆಯರಲ್ಲಿ ತೊಂದರೆ ಮತ್ತಷ್ಟು ಉಲ್ಬಣ ಹೊಂದಿ ನಿವಾರಣೆ ಕಷ್ಟಸಾದ್ಯವಾಗುತ್ತದೆ.

ಅಸಹಜ ಬಿಳಿ ಮುಟ್ಟಿಗೆ ಹಲವಾರು ಕಾರಣಗಳಿವೆ. ಮುಖ್ಯವಾದುವೆಂದರೆ ಸೂಕ್ಷ್ಮಾಣುಗಳಿಂದ ಉಂಟಾಗುವ ಯೋನಿಯ ಅಥವಾ ಗರ್ಭಕಂಠದ ಉರಿಯೂತ, ಗರ್ಭಕಂಠದಲ್ಲಿ ಬೆಳೆಯಬಹುದಾದ ಲೋಳೆ ತುಂಬಿದ ಗಡ್ಡೆಗಳು (ಪಾಲಿಪ್), ಪ್ರಸವದ ಸಮಯದಲ್ಲಾದ ಗರ್ಭಕಂಠದ ಗಾಯಗಳು ತೆರೆದುಕೊಳ್ಳುವುದರಿಂದ (ಸರ್‌ವೈಕಲ್ ಎರೋಶನ್), ಗರ್ಭಕಂಠದ ಕ್ಯಾನ್ಸರ್… ಮುಂತಾದವು.

ಈ ಕಾಡುವ ಬಿಳಿ ಮುಟ್ಟಿಗೆ ಕೆಲವು ಆಯುರ್ವೇದದ ಮನೆಮದ್ದುಗಳು ಮಾಡಿಕೊಂಡರೆ ಪರಿಹಾರ ಸಿಗುತ್ತದೆ

 

ಹಣ್ಣಾದ ಬಾಳೆ

 

 

ಹಣ್ಣಾದ ಬಾಳೆಯನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನಿ , ಅಥವಾ ಬಾಳೆ ಹಣ್ಣನ್ನು ಹಾಲಿನಲ್ಲಿ ಸೇರಿಸಿ ರುಬ್ಬಿ ಒಂದು ಲೋಟ ವಾರಕ್ಕೆ ಮೂರು ಬಾರಿಯಂತೆ ಕುಡಿಯುತ್ತಾ ಬನ್ನಿ .

 

ಬೆಂಡೆ ಕಾಯಿ

 

 

ಮೂರು -ನಾಲ್ಕು ಬೆಂಡೆ ಕಾಯಿಯನ್ನು ಬಿಸಿ ನೀರಿನಲ್ಲಿ ರಾತ್ರಿ ಇಡೀ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ವಾರ ಕುಡಿದರೆ ಒಳ್ಳೆಯದು.

 

ಕಡಲೆ ಕಾಳು

 

ಅರ್ಧ ಕಪ್ ಕಡಲೆ ಕಾಳನ್ನು ಚೆನ್ನಾಗಿ ಹುರಿದು ಒಂದು ಲೋಟ ಹಾಲಿನಲ್ಲಿ ನೆನೆಹಾಕಿ , ಚೆನ್ನಾಗಿ ನೆಂದ ಮೇಲೆ ಸೇವಿಸಿ ಹೀಗೆ ಒಂದು ವಾರ ಮಾಡಿದರೆ ಬಿಳಿ ಮುಟ್ಟು ಸಮಸ್ಯೆ ದೂರವಾಗುತ್ತದೆ.

 

ಮೊಸರು

 

 

ಸೂಕ್ಷ್ಮಾಣುಗಳಿಂದ ಉಂಟಾಗುವ ಯೋನಿಯ ಬಿಳಿ ಮುಟ್ಟಿಗೆ ಮೊಸರು ಅತ್ಯುತ್ತಮ ಪರಿಹಾರ ಏಕೆಂದರೆ ಇದು ಸೂಕ್ಶ್ಮಾಣು ಜೀವಿಗಳನ್ನು ಕೊಲ್ಲುತ್ತದೆ ಆದ್ದರಿಂದ ದಿನಕ್ಕೆ ಎರಡು ಬಾರಿ ಐದು ನಿಮಿಷ ಮೊಸರಿನಿಂದ ಯೋನಿಯನ್ನು ನೆನೆಸಿ ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು .

 

ಆಲಂ

ಸ್ವಲ್ಪ ಆಲಂ ಪುಡಿಯನ್ನು ತೆಗೆದುಕೊಂಡು ಬಟ್ಟಲು ನೀರಿನಲ್ಲಿ ನೆನೆಸಿ ಇದರಿಂದ ಯೋನಿಯನ್ನು ತೊಳೆದುಕೊಳ್ಳಬೇಕು ಹೀಗೆ ಒಂದು ವಾರ ಮುಂದುವರೆಸಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top